ಮಾಧ್ಯಮಗಳು ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಿವೆ: ರಿಕ್ಕಿ ರೈ

KannadaprabhaNewsNetwork |  
Published : Jun 05, 2025, 01:14 AM IST
4ಕೆಆರ್ ಎಂಎನ್ 4.ಜೆಪಿಜಿರಿಕ್ಕಿ ರೈ | Kannada Prabha

ಸಾರಾಂಶ

ನಾನು ಹೇಳಿದ “ವೇಂಜೆನ್ಸ್” ಎಂದರೆ ನಾನು ಕಾನೂನು ಮಾರ್ಗದಲ್ಲಿ ನ್ಯಾಯ ಹುಡುಕುತ್ತೇನೆ ಎಂದರ್ಥ. ಪ್ರಕರಣ ದಾಖಲಿಸಿ, ಪೊಲೀಸ್ ತನಿಖೆಗೆ ಸಹಕರಿಸಿ ಎಂದು ಹೇಳಿದರು.

ರಾಮನಗರ: “ನನಗೆ ನ್ಯಾಯ ಬೇಕು, ಇಲ್ಲವಾದರೆ ನಾನು ವೇಂಜೆನ್ಸ್ (ಬಿಡುಗಡೆ) ಹುಡುಕುತ್ತೇನೆ” ಎಂದು ಹೇಳಿದ್ದೇನೆ. ಈ ಮಾತನ್ನು ಕೆಲ ಮಾಧ್ಯಮದವರು ತಪ್ಪಾಗಿ ಅರ್ಥ ಮಾಡಿಕೊಂಡು ಅದನ್ನು ಸೇಡು ಅಥವಾ ಹಿಂಸಾತ್ಮಕ ಪ್ರತಿಕ್ರಿಯೆಯಂತೆಯೇ ಬಿಂಬಿಸಿದ್ದಾರೆ ಎಂದು ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾನು ಹೇಳಿದ “ವೇಂಜೆನ್ಸ್” ಎಂದರೆ ನಾನು ಕಾನೂನು ಮಾರ್ಗದಲ್ಲಿ ನ್ಯಾಯ ಹುಡುಕುತ್ತೇನೆ ಎಂದರ್ಥ. ಪ್ರಕರಣ ದಾಖಲಿಸಿ, ಪೊಲೀಸ್ ತನಿಖೆಗೆ ಸಹಕರಿಸಿ, ನ್ಯಾಯಾಂಗದ ಕ್ರಮಗಳ ಮೂಲಕ ನ್ಯಾಯ ಪಡೆಯಲು ನಾನು ಬದ್ಧನಾಗಿದ್ದೇನೆ. ನನಗೆ ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇದೆ. ನಾನು ಕಾನೂನು ಹಾಗೂ ತನಿಖೆ ನಡೆಸುತ್ತಿರುವ ಅಧಿಕಾರಿಗಳನ್ನು ಗೌರವಿಸುತ್ತೇನೆ ಎಂದಿದ್ದಾರೆ.

ನನ್ನ ಉದ್ದೇಶ ನ್ಯಾಯವನ್ನು ಕಾನೂನು ಮಾರ್ಗದಲ್ಲಿ ಪಡೆಯುವುದಾಗಿದೆ. ತಪ್ಪಿತಸ್ಥರನ್ನು ಕಾನೂನುಮಾರ್ಗದಲ್ಲಿ ಶಿಕ್ಷೆಗೆ ಒಳಪಡಿಸುವುದೇ ನನ್ನ ಗುರಿ. ಮಾಧ್ಯಮಗಳು ಸಾರ್ವಜನಿಕರಿಗಾಗಲಿ ಅಥವಾ ನ್ಯಾಯಾಂಗ ಹಾಗೂ ಪೊಲೀಸ್ ವ್ಯವಸ್ಥೆಗೆ ಯಾವುದೇ ಗೊಂದಲವಾಗುವುದು ಬೇಡ. ಸಾರ್ವಜನಿಕರಲ್ಲಿ ಭಯವನ್ನು ಸೃಷ್ಟಿಸಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ. ಪೊಲೀಸರು ತಮ್ಮ ಕೆಲಸವನ್ನು ನಿರಾಳವಾಗಿ ಮುನ್ನಡೆಸಲು ಅವರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ರಿಕ್ಕಿ ರೈ ವಿನಂತಿಸಿದ್ದಾರೆ.4ಕೆಆರ್ ಎಂಎನ್ 4.ಜೆಪಿಜಿರಿಕ್ಕಿ ರೈ-----------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ