ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಅವರು, ಇಲ್ಲಿನ ಪ್ರವಾಸಿಮಂದಿರದಲ್ಲಿ ನಡೆದ ಸಭೆಯಲ್ಲಿ ನೇಮಕ ಪತ್ರವನ್ನು ಅಧ್ಯಕ್ಷ ಶಿವಕುಮಾರ್ ನೂತನ ರಾಜ್ಯ ಸಂಘಟನಾ ಕಾರ್ಯದರ್ಶಿಗೆ ನೀಡಿ, ಮಹಾಒಕ್ಕೂಟದ ಸಂಘಟನೆಗೆ ನಿರಂತರ ಶ್ರಮಿಸುವಂತೆ ಕಿವಿ ಮಾತು ಹೇಳಿದರು.
ಮೈಲನಹಳ್ಳಿತಿಪ್ಪೇಸ್ವಾಮಿ ಮಾತನಾಡಿ, ಕರ್ನಾಟಕ ಮಾಧ್ಯಮ ಮಹಾಒಕ್ಕೂಟ ನನಗೆ ರಾಜ್ಯಮಟ್ಟದ ಜವಾಬ್ದಾರಿಯನ್ನು ನೀಡಿದೆ. ನಾನು ಸಹ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಮಾಧ್ಯಮ ಒಕ್ಕೂಟದ ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸುವ ಭರವಸೆ ನೀಡಿದರು. ರಾಜ್ಯ ಕಾರ್ಯದರ್ಶಿ ಡಿ.ಈಶ್ವರಪ್ಪ, ತಾಲೂಕು ಅಧ್ಯಕ್ಷ ಪಿ.ಗಂಗಾಧರ, ಪ್ರಧಾನ ಕಾರ್ಯದರ್ಶಿ ನಿಂಗಪ್ಪ, ಡಿ.ತಿಪ್ಪೇಸ್ವಾಮಿ, ರೇವಣ್ಣ ಉಪಸ್ಥಿತರಿದ್ದರು.----
ಪೋಟೋ:೨೮ಸಿಎಲ್ಕೆ೩ಚಳ್ಳಕೆರೆ ನಗರದ ಪ್ರವಾಸಿಮಂದಿರದಲ್ಲಿ ಕರ್ನಾಟಕ ಮಾಧ್ಯಮ ಮಹಾಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡ ಮೈಲನಹಳ್ಳಿತಿಪ್ಪೇಸ್ವಾಮಿಗೆ ರಾಜ್ಯಾಧ್ಯಕ್ಷ ನೇಮಕಾತಿ ಪ್ರತಿ ನೀಡಿದರು.