ವೈದ್ಯಕೀಯ: ಸೀಟು ಹೆಚ್ಚು ಪಡೆದ ಆಕ್ಸಫರ್ಡ್‌ ಕಾಲೇಜು

KannadaprabhaNewsNetwork |  
Published : Jun 21, 2025, 12:48 AM ISTUpdated : Jun 21, 2025, 12:49 AM IST
ಆಕ್ಸಪರ್ಡ್ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಪ್ರಸಕ್ತ ಬಾರಿ ವೈದ್ಯಕೀಯ ವಿಭಾಗದಲ್ಲಿ 175 ಸ್ಥಾನಗಳ ಅಭೂತಪೂರ್ವ ಸಾಧನೆ ತೋರಿ ಮೆಡಿಕಲ್‌ ಸೀಟ್‌ಗೆ ಉತ್ತರ ಕರ್ನಾಟಕದ ನಂಬರ 1 ಪಟ್ಟವನ್ನು ತಾಲೂಕಿನ ನಾಗರಬೆಟ್ಟದ ಆಕ್ಸಫರ್ಡ್‌ ಪಾಟೀಲ್ಸ್‌ ಶಿಕ್ಷಣ ಸಂಸ್ಥೆ ಗಿಟ್ಟಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪ್ರಸಕ್ತ ಬಾರಿ ವೈದ್ಯಕೀಯ ವಿಭಾಗದಲ್ಲಿ 175 ಸ್ಥಾನಗಳ ಅಭೂತಪೂರ್ವ ಸಾಧನೆ ತೋರಿ ಮೆಡಿಕಲ್‌ ಸೀಟ್‌ಗೆ ಉತ್ತರ ಕರ್ನಾಟಕದ ನಂಬರ 1 ಪಟ್ಟವನ್ನು ತಾಲೂಕಿನ ನಾಗರಬೆಟ್ಟದ ಆಕ್ಸಫರ್ಡ್‌ ಪಾಟೀಲ್ಸ್‌ ಶಿಕ್ಷಣ ಸಂಸ್ಥೆ ಗಿಟ್ಟಿಸಿಕೊಂಡಿದೆ.

ಕಳೆದ ಮೂರು ವರ್ಷದಲ್ಲಿ ಮೆಡಿಕಲ್, ಜೆಇಇ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮಾಡಿರುವ ಸಾಧನೆ. 2016ರಲ್ಲಿ 19, 2017ರಲ್ಲಿ 25 ವಿದ್ಯಾರ್ಥಿಗಳು ಮೆಡಿಕಲ್‌ಗೆ, 35 ವಿದ್ಯಾರ್ಥಿಗಳು ಆಯುರ್ವೇದ ಮೆಡಿಕಲ್‌ಗೆ, 28 ಜೆಇಇಗೆ ಮೇನ್ಸ್ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. 2018 ರಲ್ಲಿ 30 ಮೆಡಿಕಲ್‌ಗೆ, 43 ಬಿಎಎಂಎಸ್‌ಗೆ, 92 ಬಿ.ಎಸ್ಸಿ ಅಗ್ರಿ, 186 ಬಿ.ಇ ಸಾಧನೆಯಾಗಿದೆ. 2019ರಲ್ಲಿ 2020 ರಲ್ಲಿ ಮೆಡಿಕಲ್ ವಿಭಾಗದಲ್ಲಿ 85, 2021ರಲ್ಲಿ 128, 2022ರಲ್ಲಿ 145, 2023ರಲ್ಲಿ 156, 2024ರಲ್ಲಿ 172, 2025ರಲ್ಲಿ 175ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮೆಡಿಕಲ್ ಸೀಟ್‌ ಗಿಟ್ಟಿಸಿಕೊಳ್ಳುವ ವಿಶ್ವಾಸವಿದೆ ಎನ್ನುತ್ತಾರೆ ಎಂ.ಎಸ್.ಪಾಟೀಲ.

ಪ್ರಾರಂಭದಲ್ಲಿ 25 ವಿದ್ಯಾರ್ಥಿಗಳಿಂದ ಶುರುವಾದ ಸಂಸ್ಥೆ ಇಂದು 4.5 ಸಾವಿರ ವಿದ್ಯಾರ್ಥಿಗಳನ್ನು ಹೊಂದುವ ಮೂಲಕ ಹೆಮ್ಮರವಾಗಿ ಬೆಳೆಯುತ್ತಿದೆ. ನೀಟ್, ಜೆಇಇ ಮೇನ್ಸ್ ಮತ್ತು ಅಡ್ವಾನ್ಸ್ ವಿದ್ಯಾರ್ಥಿಗಳಿಗೆ ಸಜ್ಜುಗೊಳಿಸಲು ಕ್ರ್ಯಾಶ್ ಕೋರ್ಸ್ ನಡೆಸಲಾಗುತ್ತದೆ. ನಗರದ ವಿದ್ಯಾರ್ಥಿಗಳ ಜೊತೆಗೆ ಗ್ರಾಮೀಣ ವಿದ್ಯಾರ್ಥಿಗಳು ಪ್ರಬಲ ಪೈಪೋಟಿ ನೀಡುವ ಮಟ್ಟಕ್ಕೆ ಬೋಧನೆ ಮಾಡಲಾಗುತ್ತಿದೆ. 6-10ನೇ ತರಗತಿ ವಿದ್ಯಾರ್ಥಿಗಳಿಗೆ, ನೀಟ್ ಫೌಂಡೇಶನ್‌ನಿಂದ ತರಬೇತಿ ನೀಡಿ ಗಟ್ಟಿಗೊಳಿಸುತ್ತಿದೆ.

-------

ಕೋಟ್

ವೃತ್ತಿಪರ ಕೋರ್ಸ್‌ಗಳು ಉಳ್ಳವರ ಸ್ವತ್ತಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಾಧನೆ ಮಾಡಿ ತೋರಿಸಬೇಕು. ದಕ್ಷಿಣ ಕರ್ನಾಟಕಕ್ಕಿಂತಲೂ ಉತ್ತರ ಕರ್ನಾಟಕದಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ. ಗ್ರಾಮೀಣ ಭಾಗದ ಬಡಕುಟುಂಬದ ಪ್ರತಿಭಾವಂತ ಮಕ್ಕಳು ಮೆಡಿಕಲ್ ಓದಬೇಕು. ಅವರ ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸಬೇಕು ಎಂಬ ಕನಸಿನೊಂದಿಗೆ ಸಂಸ್ಥೆಯನ್ನು ಮುನ್ನಡೆಸಲಾಗುತ್ತಿದೆ. ಪ್ರತಿ ವರ್ಷ ಹಂತ ಹಂತವಾಗಿ ಫಲಿತಾಂಶ ಉತ್ತಮಗೊಳ್ಳುತ್ತಿರುವುದು ಸಂತೋಷವೆನಿಸುತ್ತಿದೆ. ನಮ್ಮ ಶ್ರಮಕ್ಕೆ ತಕ್ಕಂತೆ ಫಲಿತಾಂಶ ಕಾಣುತ್ತಿದ್ದೇವೆ ಎನ್ನುವ ಖುಷಿ ಇದೆ.

ಎಂ.ಎಸ್.ಪಾಟೀಲ, ಅಧ್ಯಕ್ಷರು, ಆಕ್ಸಫರ್ಡ ಪಾಟೀಲ ಶಿಕ್ಷಣ ಸಂಸ್ಥೆ.

------------

ಕೋಟ್--2

ವೈದ್ಯಕೀಯ ಕ್ಷೇತ್ರದಲ್ಲಿ ನಮ್ಮ ಭಾಗದ ವಿದ್ಯಾರ್ಥಿಗಳ ಸಾಧನೆ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಗ್ರಾಮೀಣ ಭಾಗದ ಒಂದು ಶಿಕ್ಷಣ ಸಂಸ್ಥೆಯಾಗಿ ಸಾಧನೆ ಮಾಡುತ್ತಿದೆ ಎಂಬುದು ನಮಗೆ ಹೆಮ್ಮೆ.ಶಿಕ್ಷಣ ಗುಣಮಟ್ಟ ಸುಧಾರಣೆಗೆ ಏನೆಲ್ಲ ಮಾಡಬಹುದು ಅದೆಲ್ಲವನ್ನು ಮಾಡಲು ನಮ್ಮ ಸಂಸ್ಥೆ ಸಿದ್ದವಿದೆ. ನಮ್ಮ ಸಂಸ್ಥೆಯನ್ನೇ ನಂಬಿ ಮಕ್ಕಳನ್ನು ದಾಖಲಿಸಿದ ಪಾಲಕರಿಗೆ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತೇನೆ. ಇನ್ನು ಹೆಚ್ಚಿನ ಆಧುನಿಕ ತಂತ್ರಜ್ಞಾನ ಮೈಗೂಡಿಕೊಳ್ಳಲು ಎಲ್ಲ ತಯಾರಿ ನಡೆಸಲಾಗಿದೆ. ಈ ಬಾರಿಯ ವೈದ್ಯಕೀಯ ಕ್ಷೇತ್ರದಲ್ಲಿ 175ಕ್ಕೂ ಹೆಚ್ಚು ಸ್ಥಾನ ಪಡೆದಿದ್ದು ತೃಪ್ತಿ ತಂದಿದೆ.

ಅಮೀತಗೌಡ ಪಾಟೀಲ, ಆಡಳಿತಾಧಿಕಾರಿ, ಆಕ್ಸಫರ್ಡ ಪಾಟೀಲ ಶಿಕ್ಷಣ ಸಂಸ್ಥೆ

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ