ಧ್ಯಾನದಿಂದ ಮಾನಸಿಕ ನೆಮ್ಮದಿ, ಮನಸ್ಸು ಪರಿಶುದ್ಧ

KannadaprabhaNewsNetwork |  
Published : Mar 18, 2025, 12:34 AM IST
454654 | Kannada Prabha

ಸಾರಾಂಶ

ಆನಾಪಾನ ಸತಿ ಧ್ಯಾನ ಎಂದರೆ ನಾವು ಉಸಿರಿನ ಜತೆಗೆ ಇರುವುದು. ಪಿರಮಿಡ್ ಮಾಸ್ಟರ್ ಯಾವಾಗಲೂ ಉಸಿರಿನ ಜತೆಗೆ ಸ್ವ-ಅನುಭವ ಮಾಡಿಕೊಳ್ಳಬೇಕು. ಕೆಲವೊಬ್ಬರು ಅನೇಕ ರೀತಿಯ ಧ್ಯಾನ ಮಾಡುತ್ತಾರೆ. ಆನಾಪಾನ ಸತಿ ಧ್ಯಾನ ಮಾಡುವವರು ಸುಜ್ಞಾನಿಗಳಾಗುತ್ತಾರೆ.

ಹನುಮಸಾಗರ:

ನಿರಂತರ ಧ್ಯಾನದಿಂದ ಮಾನಸಿಕ ನೆಮ್ಮದಿ ಹಾಗೂ ಮನಸ್ಸು ಪರಿಶುದ್ಧವಾಗುತ್ತದೆ ಎಂದು ಕುದರಿಮೋತಿ ವಿಜಯಮಹಾಂತ ಸ್ವಾಮೀಜಿ ಹೇಳಿದರು.

ಗ್ರಾಮದ ಶ್ರೀಕರಿಸಿದ್ದೇಶ್ವರ ಮಠದ ಬಸವ ಭವನದಲ್ಲಿ ಪಿರಮಿಡ್ ಸ್ಪಿರುಚುವೆಲ್ ಸೊಸೈಟಿ, ಮೂವ್‌ಮೆಂಟ್, ಎಸ್‌ಎಸ್‌ಕೆ ಗ್ರೂಪ್ ವತಿಯಿಂದ ಬೆಂಗಳೂರಿನ ಲಲಿತಾ ಪವರ ನೇತೃತ್ವದಲ್ಲಿ ಭಾನುವಾರ ನಡೆದ ಹನುಮಸಾಗರ ಧ್ಯಾನ ಮಹಾಯಜ್ಞ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿರಂತರ ಧ್ಯಾನದಿಂದ ದೇವರನ್ನು ಒಲಿಸಿಕೊಳ್ಳಬಹುದು. ಧ್ಯಾನದಿಂದ ಎಲ್ಲ ಶರಣರು ದಿವ್ಯ ಶಕ್ತಿ ಪಡೆದುಕೊಂಡಿದ್ದಾರೆ ಎಂದರು.

ಧ್ಯಾನ ಮಾಸ್ಟರ್ ಲಲಿತಾ ಪವಾರ ಮಾತನಾಡಿ, ಆನಾಪಾನ ಸತಿ ಧ್ಯಾನ ಎಂದರೆ ನಾವು ಉಸಿರಿನ ಜತೆಗೆ ಇರುವುದು. ಪಿರಮಿಡ್ ಮಾಸ್ಟರ್ ಯಾವಾಗಲೂ ಉಸಿರಿನ ಜತೆಗೆ ಸ್ವ-ಅನುಭವ ಮಾಡಿಕೊಳ್ಳಬೇಕು. ಕೆಲವೊಬ್ಬರು ಅನೇಕ ರೀತಿಯ ಧ್ಯಾನ ಮಾಡುತ್ತಾರೆ. ಆನಾಪಾನ ಸತಿ ಧ್ಯಾನ ಮಾಡುವವರು ಸುಜ್ಞಾನಿಗಳಾಗುತ್ತಾರೆ. ಧ್ಯಾನ ಮಾಡುವುದರಿಂದ ಹಲವರಿಗೆ ಕಾಯಿಲೆ ತಾನಾಗಿವೇ ಹೋಗಿವೆ. ತಾನಾಗಿಯೇ ಧ್ಯಾನವು ಘಟಿಸುತ್ತದೆ. ನಿರಂತರ ಧ್ಯಾನದಿಂದ ಡಾಕ್ಟರ್ ಹತ್ತಿರ ಹೋಗುವ ಅವಶ್ಯಕತೆ ಇರುವುದಿಲ್ಲ ಎಂದರು.

ಪೂಜೆ ಮಾಡುವಾಗ ಅನೇಕ ಪ್ರಾರ್ಥನೆ ಸಲ್ಲಿಸುತ್ತೇವೆ. ಧ್ಯಾನದಿಂದ ಉತ್ತಮ ಲಾಭವಾಗುತ್ತದೆ. ಪ್ರಾರಂಭದಲ್ಲಿ ಧ್ಯಾನ ಮಾಡುವಾಗ ಅನೇಕ ನೋವುಗಳು ಬರುತ್ತವೆ. ಸಮಯಕ್ಕೆ ಬೆಲೆ ಕೊಡಬೇಕು, ಸಮಯವನ್ನು ಹಾಳು ಮಾಡದೆ ನಿರಂತರ ಧ್ಯಾನಾಭ್ಯಾಸ ಮಾಡಬೇಕು ಎಂದು ಹೇಳಿದರು.

ಪ್ರಮುಖರಾದ ಮಹಾಂತೇಶ ಅಗಸಿಮುಂದಿನ, ಮಲ್ಲಯ್ಯ ಕೋಮಾರಿ, ವಿಶ್ವನಾಥ ಕನ್ನೂರ, ಬಸವರಾಜ ಚಿನಿವಾಲರ, ಶಿವಶಂಕರ ಮೆದಿಕೇರಿ, ಬಸವರಾಜ ದ್ಯಾವಣ್ಣನವರ, ಸತೀಶ ಜಮಖಂಡಿಕರ, ಶಂಕ್ರಪ್ಪ ಸಿನ್ನೂರ, ಪ್ರಭು ಬನ್ನಿಗೊಳಮಠ, ಬಸಮ್ಮ ಹಿರೇಮಠ, ಶಂಕರ ಹುಲಮನಿ, ಶ್ರೀದೇವಿ ಹಿರೇಮಠ, ಮಹಾಂತಯ್ಯ ಕೋಮಾರಿ, ಏಕನಾಥ ಮೆದಿಕೇರಿ, ಈರಣ್ಣ ಹುನಗುಂಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ