ಶಿವನ ಧ್ಯಾನದಿಂದ ಮನುಷನ ಕಷ್ಟಗಳು ದೂರ: ಶಾಸಕ ಯು.ಬಿ.ಬಣಕಾರ

KannadaprabhaNewsNetwork |  
Published : Feb 19, 2026, 02:30 AM IST
ಪೊಟೊ ಶಿಷೀಕೆ 21 ಎಚ್‌ಕೆಆರ್ 01  | Kannada Prabha

ಸಾರಾಂಶ

ಶಿವರಾತ್ರಿ ಶಿವನನ್ನು ಆರಾಧನೆ ಮಾಡುವ ದಿವಸ. ಶಿವನ ಧ್ಯಾನದಿಂದ ಮನುಷನಿಗೆ ಬರುವ ಕಷ್ಟಗಳು ದೂರವಾಗಿ ಜೀವನದಲ್ಲಿ ನೆಮ್ಮದಿಯಿಂದ ಸಮಾಜದಲ್ಲಿ ಮೇಲೆ ಬರಲು ಸಾಧ್ಯವಾಗುತ್ತದೆ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.

ಹಿರೇಕೆರೂರು: ನಮ್ಮ ಬದುಕಿನಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ಧಾರ್ಮಿಕ ಭಾವನೆ ಉಳಿಸಿಕೊಂಡು ಬೆಳಿಸಿಕೊಂಡು ಹೋಗುವ ಕಾರ್ಯ ಮಾಡಬೇಕು. ಶಿವರಾತ್ರಿ ಶಿವನನ್ನು ಆರಾಧನೆ ಮಾಡುವ ದಿವಸ. ಶಿವನ ಧ್ಯಾನದಿಂದ ಮನುಷನಿಗೆ ಬರುವ ಕಷ್ಟಗಳು ದೂರವಾಗಿ ಜೀವನದಲ್ಲಿ ನೆಮ್ಮದಿಯಿಂದ ಸಮಾಜದಲ್ಲಿ ಮೇಲೆ ಬರಲು ಸಾಧ್ಯವಾಗುತ್ತದೆ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು. ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ವಿಷಪರಿಹಾರೇಶ್ವರ ದೇವರ ಮಹಾರಥೋತ್ಸವ ಅಂಗವಾಗಿ ಮಂಗಳವಾರ ಸಂಜೆ ಏರ್ಪಡಿಸಿದ್ದ ರಸ ಮಂಜರಿ ಕಾರ್ಯಕ್ರಮವನ್ನು ಜೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಮ್ಮ ಪೂರ್ವಜರು ಕಾಯಿಲೆಗಳು, ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ದೇವರ ಮೊರೆ, ವಿವಿಧ ಆಚರಣೆ ಸೇರಿದಂತೆ ಭಕ್ತಿ ಸಮರ್ಪಿಸುವ ಮೂಲಕ ಮನಸ್ಸಿಗೆ, ಶಾಂತಿ, ಸಮಸ್ಯೆಗಳಿಂದ ಹೊರಬರುವ ವಿಧಾನವನ್ನು ಕಂಡುಕೊಂಡಿದ್ದರು. ಈ ನಿಟ್ಟಿನಲ್ಲಿ ಇಂದಿಗೂ ಅವು ಪ್ರಸ್ತುತವಾಗಿವೆ.

ಸಮಿತಿ ಅಧ್ಯಕ್ಷ ಬಸವರಾಜ ಭರಮಗೌಡ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು,

ಉಪಾದ್ಯಕ್ಷೆ ಶೇಖಪ್ಪ ಶಿವನಕ್ಕನವರ, ಸಮಿತಿ ಕಾರ್ಯದರ್ಶಿ ಹನುಮಗೌಡ ಜೋಗಿಹಳ್ಳಿ, ಖಜಾಂಜಿ ಬಸವಣೆಪ್ಪ ಹಂಚಿನಮನಿ, ಸದಸ್ಯರಾದ ಗಂಗನಗೌಡ್ರ ನಿಂಗನಗೌಡ್ರ, ರವಿ ಮೇಗಳಮನಿ, ಕಲ್ಲಪ್ಪ ಪೂಜಾರ, ವಿಜಯ ಬಣಕಾರ, ತೀರ್ಥಮ್ಮ ಭರಮಗೌಡ್ರ, ರಥೋತ್ಸವ ಸಮಿತಿ ಅಧ್ಯಕ್ಷ ಬಸವನಗೌಡ ನಿಂಗನಗೌಡ, ಮುಖಂಡರಾದ ರಮೇಶ ಹಡಗದ, ಸುಭಾಸ್ ನೇಸ್ವಿ, ಚಂದ್ರಪ್ಪ ನಿಂಗನಗೌಡ್ರ, ಪಿ.ಬಿ. ನಿಂಗನಗೌಡ್ರ, ಗುರುಶಾಂತಪ್ಪ ಜೋಗಿಹಳ್ಳಿ, ಮಂಜು ಶಿವನಕ್ಕನವರ, ವಿಜಯಾ ಹುಲ್ಲಮನಿ, ಪಿ.ಬಿ. ನಿಂಗನಗೌಡ್ರ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಜೋಗಿಹಳ್ಳಿ ನಿರೂಪಿಸಿದರು. ದೇವಸ್ಥಾನ ಟ್ರಸ್ಟ್ ಕಮಿಟಿಯ ಎಲ್ಲ ಪದಾಧಿಕಾರಿಗಳು, ರಥೋತ್ಸವ ಸಮಿತಿ ಸದಸ್ಯರು, ಮುಖಂಡರು ಅರ್ಕೆಸ್ಟ್ರಾ ಸಮಿತಿ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ