ನಗರ, ಗ್ರಾಮೀಣ ಸಂಸ್ಥೆಗಳ ಆರ್ಥಿಕ ಸ್ಥಿತಿ ಪರಿಶಲನೆಗೆ ಸಭೆ: ಡಾ.ಸಿ.ನಾರಾಯಣಸ್ವಾಮಿ

KannadaprabhaNewsNetwork | Published : Jan 18, 2025 12:45 AM

ಸಾರಾಂಶ

ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿಗತಿಗಳನ್ನು ಪರಾಮರ್ಶಿಸಲು ಸಭೆ ಕರೆಯಲಾಗಿದೆ ಎಂದು 5ನೇ ರಾಜ್ಯ ಹಣಕಾಸು ಆಯೋಗ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಹೇಳಿದರು. ಕಲಬುರಗಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆಯನ್ನು ಉದ್ದೇಶಿ ಮಾತನಾಡಿದರು.

ಹಣಕಾಸು ಪರಾಮರ್ಶೆ ಸಭೆ । ಪಿಪಿಟಿ ಪ್ರದರ್ಶನದ ಮೂಲಕ ಪಂಚಾಯಿಗಳ ಮಾಹಿತಿ

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿಗತಿಗಳನ್ನು ಪರಾಮರ್ಶಿಸಲು ಸಭೆ ಕರೆಯಲಾಗಿದೆ ಎಂದು 5ನೇ ರಾಜ್ಯ ಹಣಕಾಸು ಆಯೋಗ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆಯನ್ನು ಉದ್ದೇಶಿ ಮಾತನಾಡಿ, 5ನೇ ಹಣಕಾಸು ಆಯೋಗ ಸಂವಿಧಾನ 73ನೇ ತಿದ್ದುಪಡಿ ಹಿನ್ನೆಲೆಯಲ್ಲಿ 5 ವರ್ಷ ಅವಧಿಯಲ್ಲಿ ಸ್ವಯಂ ಸಂಸ್ಥೆಗಳ ಹಂಚಿಕೆಗೆ ಬೇಕಾದ ಅನುದಾನದ ಜವಾಬ್ದಾರಿ ನನ್ನ ಮೇಲೆ ಇದೆ. ಅದರಂತೆ 2023ನೇ ಅಕ್ಟೋಬರ್‌ನಲ್ಲಿ ರಾಜ್ಯಸರ್ಕಾರ ಮತ್ತು ರಾಜ್ಯಪಾಲರ ಅಧಿಸೂಚನೆಯಂತೆ 2 ವರ್ಷಗಳ ಕಾಲ ಇರುತ್ತದೆ ಎಂದು ಹೇಳಿದರು.

2024-25 ನೇ ಸಾಲಿನ ನಮ್ಮ ರಾಜ್ಯಪಾಲರು ವರದಿ ಸಲ್ಲಿಸಿ, ಅದನ್ನು ಪರಿಶೀಲಿಸಿ ನಾವು ಕೂಡಾ ಪರಿಶೀಲನೆ ಮಾಡಿ ಮಂಡನೆ ಮಾಡಬೇಕಾಗುವುದು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ 2021-21 ರಿಂದ 2022-23ನೇ ಸಾಲಿನವರೆಗೆ ಜಿಲ್ಲಾ ಪಂಚಾಯತ್ 15ನೇ ಹಣಕಾಸು ವಿವರಗಳನ್ನು ಜಿಲ್ಲಾ ಪಂಚಾಯತ್ ಒಟ್ಟು 1917.47 ರು.ಹಂಚಿಕೆಯಾಗಿದೆ. 1331.18 ರು. ಬಿಡುಗಡೆಯಾಗಿದೆ. ಖರ್ಚು 733.4 ರು., ಶೇಕಡ ವೆಚ್ಚ 38.25 ಇರುತ್ತದೆ ಜಿಲ್ಲೆಯ ಪಂಚಾಯತ್ ಸಂಬಂದಪಟ್ಟ ಅಧಿಕಾರಿಗಳ ವಿವರ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್‍ಗಳಲ್ಲಿ ಕೆಲಸ ಕಾರ್ಯಗಳ ಮಾಹಿತಿಗಳ ಬಗ್ಗೆ ಪಿಪಿಟಿ ಮೂಲಕ ಮಾಹಿತಿಯನ್ನು ನೀಡಿದರು.

ಅಧ್ಯಕ್ಷರು ಕೂಸಿನ ಮನೆಯ ಬಗ್ಗೆ ಮಾಹಿತಿ ಪಡೆದುಕೊಂಡರು ಕೂಸಿನ ಮನೆಗಳು ಪಕ್ಕದಲ್ಲಿರುವ ಕಾರ್ಮಿಕರು ಮಕ್ಕಳನ್ನು ಸರಿಯಾಗಿ ಸಮಯ ಬರುತ್ತಾರೆ ಎಂದು ಪ್ರಶ್ನಿಸಿದರು. ಗ್ರಾಮ ಪಂಚಾಯಿತ್ ಉಪಾಧ್ಯಕ್ಷರು ಮಾತನಾಡಿ, ಕಾರ್ಮಿಕರು ಮಕ್ಕಳನ್ನು ಕರೆದುಕೊಂಡು ಬರುವುದನ್ನು ಕಡಿಮೆಯಾಗಿದೆ ಎಂದರು.

ಡಿಯುಡಿಸಿ ಯೋಜನಾ ನಿರ್ದೇಶಕ ಮುನ್ನವರ ದೌಲರ ಅವರಿಂದ ಮಾಹಿತಿ ಪಡೆದುಕೊಂಡರು. ನಗರ ಸ್ಥಳೀಯ ಸಂಸೆಗಳಲ್ಲಿ ಅವುಗಳ ಜನಸಂಖ್ಯೆಯ ಆಧಾರದ ಮೇಲೆ ನಗರ ನಿಗಮಗಳು ನಗರ ಪುರಸಭೆಗಳು, ಪಟ್ಟಣ ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳಂತಹ ಬಹು ವರ್ಗಗಳಾಗಿ ವಿಂಗಡಿಸಲಾಗಿದೆ ಎಂದರು.

ಮಹಾನಗರ ಪಾಲಿಕೆ ಅಯುಕ್ತ ಭೂವನೇಶ ದೇವಿದಾಸ ಪಾಟೀಲ ಮಾತನಾಡಿ, ಪ್ರತಿಯೊಬ್ಬರು ಇ-ಖಾತಾ ಮಾಡಿಸಿಕೊಳ್ಳಬೇಕೆಂದರು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೇಸ್ಕಾಂ ಇಲಾಖೆಯಿಂದ ಕಂಬಗಳನ್ನು ಮತ್ತು ಟ್ರಾನ್ನ್‍ಪಾರಮ್‍ಗಳನ್ನು ಪಾಲಿಕೆಯ ರಸ್ತೆಗಳ ಉಪಯೋಗಿಸುತ್ತಿದ್ದು, ಜೇಸ್ಕಾಂಗಳಿಂದ ನೆಲಬಾಡಿಗೆಯನ್ನು ಪಡೆಯಲು ಸರ್ಕಾರದಿಂದ ಆದೇಶ ಹೊರಡಿಸಬಹುದು ಎಂದರು.

5ನೇ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ಮೊಹಮದ್ ಸನಾವುಲ್ಲಾ, ಐಎಎಸ್ (ನಿವೃತ್ತ) ಸದಸ್ಯ ಆರ್.ಎಸ್.ವೋಂಡೆ, ಸಮಾಲೋಚಕ ಸಿ.ಜಿ. ಸುಪ್ರಸನ್ನ, ಅಪ್ತ ಕಾರ್ಯದರ್ಶಿ ಕೆ.ಯಾಲಕ್ಕಿಗೌಡ, ಪ್ರೋಬೇಷನರಿ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ, ಸೇಡಂ.ಸಹಾಯಕ ಆಯುಕ್ತ ಪ್ರಭುರೆಡ್ಡಿ, ಉಪ ಕಾರ್ಯದರ್ಶಿಗಳು, ಲೆಕ್ಕಾಧಿಕಾರಿಗಳು ಮುಖ್ಯ ಯೋಜನಾಧಿಕಾರಿಗಳು, ಕಾರ್ಯನಿರ್ವಾಹಕ ಪಂಚಾಯತ್ ಅಧಿಕಾರಿಗಳು ತಾಲೂಕಿನ ಕಾರ್ಯನಿರ್ವಾಹಕರು, ಕಾರ್ಯನಿರ್ವಾಹಕ ಅಭಿಯಂತರರು ಭಾಗವಹಿಸಿದ್ದರು.

Share this article