ಕಾವೇರಿ ಆರತಿ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶೀಘ್ರದಲ್ಲೇ ಮೇಕೆದಾಟು ಅಣೆಕಟ್ಟು ಕಟ್ಟುವ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಅಣೆಕಟ್ಟು ನಿರ್ಮಾಣವಾದಲ್ಲಿ ಎರಡು ರಾಜ್ಯಗಳಿಗೆ ಇರುವ ಕಾವೇರಿ ಕೊಳ್ಳದ ಕಾವೇರಿ ಕಿಚ್ಚಿನ ಒತ್ತಡ ನಿವಾರಣೆಯಾಗಲಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ವಿವಾದಕ್ಕೆ ಕೃಷ್ಣರಾಜಸಾಗರ ಜಲಾಶಯದಲ್ಲಿರುವ ಹೂಳೆತ್ತುವಿಕೆ ಮತ್ತು ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ಶಾಶ್ವತ ಪರಿಹಾರ ದೊರಕಲಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಉದ್ಯಾನವನ ರಸ್ತೆಯಲ್ಲಿ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್, ಕಾವೇರಿ ನೀರಾವರಿ ನಿಗಮ ಸಹಕಾರದಲ್ಲಿ ಆಯೋಜಿಸಿದ್ದ ತಲಕಾವೇರಿ ತೀಥೋದ್ಭವ ಪ್ರಯುಕ್ತ ಕಾವೇರಿ ಪ್ರತಿಮೆಗೆ ಪೂಜೆ, ಮಾಲಾರ್ಪಣೆ, ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಕಾವೇರಿ ಆರತಿ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶೀಘ್ರದಲ್ಲೇ ಮೇಕೆದಾಟು ಅಣೆಕಟ್ಟು ಕಟ್ಟುವ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಅಣೆಕಟ್ಟು ನಿರ್ಮಾಣವಾದಲ್ಲಿ ಎರಡು ರಾಜ್ಯಗಳಿಗೆ ಇರುವ ಕಾವೇರಿ ಕೊಳ್ಳದ ಕಾವೇರಿ ಕಿಚ್ಚಿನ ಒತ್ತಡ ನಿವಾರಣೆಯಾಗಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಕಾವೇರಿ ತೀರ್ಥೋದ್ಭವ ಸಮಯದಲ್ಲಿ ಜಿಲ್ಲೆಯಿಂದ ಜನರು ತಲಕಾವೇರಿಗೆ ಹೋಗಿ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಮಾಡುತ್ತಿದ್ದರು. ಈಗ ತುಂಬಾ ಕಡಿಮೆಯಾಗಿದೆ. ಮಂಡ್ಯದಲ್ಲೇ ಕಾವೇರಿ ಮಾತೆಯನ್ನು ಪೂಜಿಸಿ ಅನ್ನಸಂತರ್ಪಣೆ ನೆರವೇರಿಸುತ್ತಿರುವುದು ಶ್ಲಾಘನೀಯ ಎಂದರು.
ಕಾವೇರಿ ಕೊಳ್ಳ ಭಾಗದ ಜನತೆ ನೀರನ್ನು ಮಿತವಾಗಿ ಬಳಸದೆ ಪೋಲು ಮಾಡುತ್ತಿದ್ದಾರೆ. ಮಂಡ್ಯ ನೆಲದಲ್ಲಿ ಅನ್ನವೇ ಸಿಗುತ್ತಿರಲ್ಲಿಲ್ಲ. ಕಾವೇರಿ ನದಿಗೆ ಅಣೆಕಟ್ಟು ಕಟ್ಟಿದ ಮೈಸೂರು ರಾಜಮನೆತನಕ್ಕೆ ನಾವೆಲ್ಲರೂ ಋಣಿಯಾಗಿರಬೇಕಿದೆ. ಆ ರಾಜಮನೆತನವನ್ನು ಮಂಡ್ಯ ಜನರು ಎಂದಿಗೂ ಮರೆಯಲಾರರು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಉದ್ಯಾವನದಲ್ಲಿರುವ ಕಾವೇರಿ ಪ್ರತಿಮೆಗೆ ಪೂಜೆ ನೆರವೇರಿಸಿ, ಅನ್ನಸಂರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಶ್ರೀನಿವಾಸ್, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ, ಟಿ.ಡಿ.ಬಸವರಾಜು ತಗ್ಗಹಳ್ಳಿ, ಶಿವಮೂರ್ತಿ, ನಂಜುಂಡೇಗೌಡ, ನಾಗಾನಂದ್, ಮಂಜು ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.