ಸರ್ಕಾರದ ಆದೇಶದಂತೆ ಕ್ರಮ । ಉಳ್ಳವರನ್ನು ತೆರವುಗೊಳಿಸದ ಕಂದಾಯ ಇಲಾಖೆ ದಲಿತರ ಮೇಲೆ ಶೀಘ್ರ ಕ್ರಮವೇಕೆ?
ಹಿರೇನಲ್ಲೂರು ಹೋಬಳಿಯ ಮೇಲನಹಳ್ಳಿ ಗ್ರಾಮದ ಸರ್ಕಾರಿ ಬೀಳಿನಲ್ಲಿ ನಿರ್ಮಿಸಿದ್ದ 58 ಗುಡಿಸಲುಗಳನ್ನು ಪೊಲೀಸರ ನೆರವಿನೊಂದಿಗೆ ಕಂದಾಯ ಇಲಾಖೆ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು.ಸರ್ವೆ ನಂ. 22ರಲ್ಲಿ 20 ಎಕರೆ 16 ಗುಂಟೆ ಸರ್ಕಾರಿ ಬೀಳು ಇದೆ. ಈ ಜಾಗಕ್ಕಾಗಿ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿರುವ ರೈತರು ಮತ್ತು ಇದೇ ಗ್ರಾಮದ ಪರಿಶಿಷ್ಟ ಜಾತಿಯ ನಿವೇಶನ ರಹಿತರ ನಡುವೆ ಈಗ ಪೈಪೋಟಿ ಆರಂಭವಾಗಿತ್ತು. ವಸತಿ ರಹಿತರು 58 ಗುಡಿಸಲುಗಳನ್ನು ನಿರ್ಮಿಸಿದ್ದರು. ಇವು ಅನಧಿಕೃತ ಗುಡಿಸಲು ಎಂದು ಆರೋಪಿಸಿ ಬಂದ ದೂರು ಆಧರಿಸಿ ತೆರವು ಕಾರ್ಯಾಚರಣೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದರು.
ಕಡೂರು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಕಂದಾಯ ನಿರೀಕ್ಷಕ ರವಿ ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜೆಸಿಬಿ ಮೂಲಕ ಗುಡಿಸಲು ತೆರವುಗೊಳಿಸಿದರು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೂ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದರು.ತಹಸೀಲ್ದಾರ್ ಪೂರ್ಣಿಮಾ ಮಾತನಾಡಿ, ‘ಈ ಜಾಗದಲ್ಲಿ ಈ ಹಿಂದೆ ಸಾಗುವಳಿ ಮಾಡುತ್ತಿದ್ದವರು ಕಂದಾಯ ಪಾವತಿಸದ ಕಾರಣ ಜಮೀನು ಸರ್ಕಾರಿ ಬೀಳಾಗಿದೆ. ಇದೇ ಸರ್ಕಾರಿ ಬೀಳಿನ 5 ಎಕರೆ ಪ್ರದೇಶದಲ್ಲಿ ಕೆಲವರು ಅಕ್ರಮವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದರು. ಅದನ್ನು ನಿಯಮಾನುಸಾರ ಹಾಗೂ ಸರ್ಕಾರದ ಆದೇಶದಂತೆ ತೆರವು ಮಾಡಿದ್ದೇವೆ. ಪರಿಶಿಷ್ಟ ಜಾತಿಯವರು ನಿವೇಶನಕ್ಕೆ ಒತ್ತಾಯಿಸಿರುವ ಕಾರಣ ಈ ಗ್ರಾಮ ವ್ಯಾಪ್ತಿಯಲ್ಲಿ ‘94–ಸಿ’ಯಲ್ಲಿ ನಿವೇಶನ ರಹಿತರನ್ನು ಪಟ್ಟಿ ಮಾಡಲು ಸೂಚಿಸಲಾಗಿದೆ. ಪರಿಶೀಲನೆ ಬಳಿಕ ವಸತಿ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು.ಇದೇ ಜಮೀನಿಗೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿರುವ ರೈತರ ಅರ್ಜಿಗಳನ್ನು ಬಗರ್ ಹುಕುಂ ಸಮಿತಿ ಮುಂದೆ ಇರಿಸ ಲಾಗುವುದು. ಭೂಮಿ ಮಂಜೂರು ಮಾಡುವುದು ಅಥವಾ ತಿರಸ್ಕರಿಸುವುದು ಸಮಿತಿ ತೀರ್ಮಾನ. ಸದ್ಯಕ್ಕೆ ಈ ಭೂಮಿ ಕಂದಾಯ ಇಲಾಖೆ ಸುಪರ್ದಿಯಲ್ಲಿ ಇರಲಿದೆ ಎಂದು ಹೇಳಿದರು.-- ಕೋಟ್ಸ್-- ಮೇಲನಹಳ್ಳಿ ಗ್ರಾಮದ ಮಾದಿಗ ಜನಾಂಗಕ್ಕೆ ಸೇರಿದ ಬಡವರ್ಗದ ಜನರು ತಮಗೆ ನಿವೇಶನವಿಲ್ಲ. ಬದುಕುವುದು ಕಷ್ಟ ಸಾಧ್ಯ ಎನ್ನುವ ಮಾಹಿತಿಯನ್ನು ಶಾಸಕರು ಮತ್ತು ಗ್ರಾಮ ಪಂಚಾಯ್ತಿ ಗಮನಕ್ಕೆ ತಂದು ಸರ್ಕಾರಿ ಜಮೀನಿನಲ್ಲಿ ತಮ್ಮ ಬದುಕು ಕಟ್ಟಿ ಕೊಳ್ಳಲು ಚಿಕ್ಕಗೂಡು ನಿರ್ಮಿಸಿ ಕೊಳ್ಳಲು ಗುಡಿಸಲು ನಿರ್ಮಿಸಿ ವಾಸಿಸುತ್ತಿದ್ದರು. ಆದರೆ ತಾಲೂಕು ಆಡಳಿತ ಏಕಾ ಏಕಿ ದಲಿತರ ಮೇಲೆ ದೌರ್ಜನ್ಯ ಮಾಡಿ ಗುಡಿಸಲುಗಳನ್ನು ನೆಲಸಮ ಮಾಡಿರವುದು ದಲಿತರಿಗೆ ಮಾಡಿರುವ ದ್ರೊಹ, ಇದನ್ನು ಇಲ್ಲಿಗೆ ನಿಲ್ಲಿಸಲಾಗುವುದಿಲ್ಲ. ಅವರಿಗೆ ನಿವೇಶನ ನೀಡುವವರೆಗು ಹೋರಾಟ ಮುಂದುವರಿಯಲಿದೆ.
ಕರ್ನಾಟಕ ಬ್ಲೂ ಆರ್ಮಿ ರಾಜ್ಯಾಧ್ಯಕ್ಷ.-
- ಕಲ್ಲಪ್ಪ ಮೇಲನಹಳ್ಳಿ.-
17 ಬೀರೂರು 5ಬೀರೂರು ಸಮೀಪದ ಮೇಲನಹಳ್ಳಿ ಸರ್ಕಾರಿ ಬೀಳಿನಲ್ಲಿ ಅಕ್ರಮವಾಗಿ ನಿರ್ಮಿಸಲಾದ ಗುಡಿಸಲುಗಳನ್ನು ಕಂದಾಯ ಇಲಾಖೆಯು ಪೊಲೀಸ್ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು