ಕನ್ನಡಪ್ರಭ ವಾರ್ತೆ ಚಾಮರಾಜನಗರ ನಗರದ ರೋಟರಿ ಭವನದಲ್ಲಿ ಸಂಸ್ಥೆ ವತಿಯಿಂದ ನಡೆಯುತ್ತಿರುವ ಡಯಾಲಿಸಿಸ್ ಕೇಂದ್ರದಲ್ಲಿ ರೋಗಿಗಗಳಿಗೆ ರಿಯಾಯಿತಿ ದರದಲ್ಲಿ ಡಯಾಲಿಸಿಸ್ ಸೇವೆ ನೀಡಲು ಆ. ೧೫ರಂದು ಸಂಜೆ ೬ ಗಂಟೆಯಿಂದ ೮ ಗಂಟೆವರೆಗೆ ನಗರದ ಡಾ. ರಾಜ್‌ಕುಮಾರ್ ಕಲಾ ಮಂದಿರದಲ್ಲಿ ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಪಿ. ಬಾಲಸುಬ್ರಹ್ಮಣ್ಯಂ ಆವರ ಹಳೆಯ ಚಲನಚಿತ್ರ ಗೀತೆಗಳ ಸುಮಧುರ ಗಾಯನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಡಾ. ಆರ್.ಎಸ್. ನಾಗಾರ್ಜುನ ಹೇಳಿದರು.
ಕಳೆದ ಮೂರು ವರ್ಷದ ಹಿಂದೆ ನಗರದಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸಲಾಯಿತು, ಕೇವಲ ಮೂರು ಯಂತ್ರಗಳಿಂದ ಅರಂಭವಾಗಿ ಈಗ ೧೦ ಡಯಾಲಿಸಿಸ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ೨೦ರಿಂದ ೨೫ಮಂದಿ ಕಿಡ್ನಿ ವೈಫಲ್ಯ ಹೊಂದಿರುವವರಿಗೆ ಡಯಾಲಿಸಿಸ್ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಒಂದುಬಾರಿ ಡಯಾಲಿಸಿಸ್ ಮಾಡಿಸಬೇಕೆಂದರೆ ೧೨೦೦ ರು.ಗಳಿಂದ ೨ ಸಾವಿರ ರು, ಖರ್ಜಾಗುತ್ತದೆ, ನಮ್ಮಲ್ಲಿ ಕೇವಲ ೪೯೯ ರು.ಗಳಿಗೆ ಡಯಾಲಿಸಿಸ್ ಮಾಡಿಕೊಡಲಾಗುತ್ತದೆ. ಇದುವರಗೆ ನಮ್ಮ ಕೇಂದ್ರದಲ್ಲಿ ೩೬೦೦ ಮಂದಿ ಡಯಾಲಿಸಿಸ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂದರು ಒಬ್ಬ ರೋಗಿಗೆ ೮೦೦ ಖರ್ಚು ಬೀಳುತ್ತಿದ್ದು, ಮಾಸಿಕ ₹೨ ರಿಂದ ₹೩ ಲಕ್ಷ ಬೇಕಾಗುತ್ತದೆ. ಡಯಾಲಿಸಿಸ್ ಕೇಂದ್ರದ ಉಳಿವಿಗೆ ವರ್ಷಕ್ಕೆ ೧೦ ಸಾವಿರ ರು.ಗಳನ್ನು ಡಯಾಲಿಸಿಸ್ ಕೇಂದ್ರಕ್ಕೆ ನೀಡುವ, ಡಯಾಲಿಸಿಸ್ ಚಿಕಿತ್ಸೆಗೆ ನೆರವಾಗುವ ದಾನಿಗಳ ಹುಡುಕಾಟದಲ್ಲಿದ್ದೇವೆ. ಈಗಾಗಲೇ ಮೂವರು ದಾನಿಗಳು ಮುಂದೆ ಬಂದಿದ್ದಾರೆ. ೧೦೦ರಿಂದ ೨೦೦ ದಾನಿಗಳು ಮುಂದೆ ಬಂದರೆ ನಮ್ಮ ರೋಟರಿ ಡಯಾಲಿಸಿಸ್ ಕೇಂದ್ರ ಉಳಿಯುವುದರ ಜೊತೆಗೆ ರೋಟರಿ ಡಯಾಲಿಸಿಸ್‌ನಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾಕಾರ್ಯ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದರು.ಇತ್ತೀಚಿನ ದಿನಗಳಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗುತ್ತಿರುವುದು ಬೇಸರದ ಸಂಗತಿ, ಇಂದಿನ ಯುವಜನತೆ ೬ ತಿಂಗಳಿಗೊಮ್ಮೆಯಾದರೂ ಬಿಪಿ, ಶುಗರ್ ಪರೀಕ್ಷೆ ಮಾಡಿಸಿಕೊಳ್ಳಬೇಕು, ಮೈಮರೆತರೆ ಅಪಾಯ ಖಚಿತ ಎಂದರು. ರೋಟರಿ ಡಯಾಲಿಸಿಸ್ ಕೇಂದ್ರದ ಸಹಾಯಾರ್ಥ ನಗರದ ಡಾ.ರಾಜ್‌ಕುಮಾರ್ ಜಿಲ್ಲಾರಂಗಮಂದಿರದಲ್ಲಿ ಆ.೧೫ರಂದು ಆಯೋಜಿಸಿರುವ ಸುಗಮಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಂಗ್ರಹವಾಗುವ ಹಣವನ್ನು ಡಯಾಲಿಸಿಸ್ ಚಿಕಿತ್ಸೆಗೆಂದೇ ಬಳಸಲಾಗುತ್ತದೆ ಎಂದರುಪತ್ರಿಕಾಗೋಷ್ಠಿಯಲ್ಲಿ ರೋಟರಿ ಅಧ್ಯಕ್ಷ ಕಾಗಲವಾಡಿಚಂದ್ರು, ರೋಟರಿ ಡಯಾಲಿಸಿಸ್ ಕೇಂದ್ರದ ಅಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷರಾದ ಆರ್.ಎಂ.ಸ್ವಾಮಿ, ಪ್ರಕಾಶ್, ಸುಭಾಷ್ ಇದ್ದರು.