ಗಜೇಂದ್ರಗಡ ಪಟ್ಟಣ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿದ ಸದಸ್ಯರು: ಮುರ್ತುಜಾ ಡಾಲಾಯತ್

KannadaprabhaNewsNetwork |  
Published : Nov 12, 2025, 02:45 AM IST
ಗಜೇಂದ್ರಗಡದಲ್ಲಿ ಕೃತಜ್ಞತಾ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು. | Kannada Prabha

ಸಾರಾಂಶ

ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡ, ಪುರಸಭೆ ಮಾಜಿ ಸದಸ್ಯ ಶಿವರಾಜ ಘೋರ್ಪಡೆ ಮಾತನಾಡಿ, ಬಿದರಳ್ಳಿ ಕುಟುಂಬ ಹಿಂದಿನಿಂದಲೂ ಸಾಮಾಜಿಕ ಸೇವೆಗಳ ಮೂಲಕ ಗುರುತಿಸಿಕೊಂಡಿದೆ ಎಂದರು.

ಗಜೇಂದ್ರಗಡ: ಪುರಸಭೆ ಚುನಾವಣೆಗೂ ಮುನ್ನ ನೀಡಿದ ಭರವಸೆಗಳನ್ನು ಭಾಗಶಃ ಈಡೇರಿಸುವ ಮೂಲಕ ವಾರ್ಡಿನ ಜನತೆಯ ವಿಶ್ವಾಸ ಉಳಿಸಿಕೊಂಡ ಸದಸ್ಯರಲ್ಲಿ ಅಗ್ರಗಣ್ಯ ಸ್ಥಾನ ಸವಿತಾ ಬಿದರಳ್ಳಿ ಅವರಿಗೆ ಸಲ್ಲುತ್ತದೆ ಎಂದು ಪುರಸಭೆ ಮಾಜಿ ಸದಸ್ಯ ಮುರ್ತುಜಾ ಡಾಲಾಯತ್ ಶ್ಲಾಘಿಸಿದರು.

ಪಟ್ಟಣದ ನೇಕಾರರ ಬಡಾವಣೆಯಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷೆ ಸವಿತಾ ಬಿದರಳ್ಳಿ ಅವರಿಂದ ೧೫ನೇ ವಾರ್ಡಿನ ಜನತೆಗೆ ನಡೆದ ಕೃತಜ್ಞತಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪಟ್ಟಣದ ಪುರಸಭೆ ೨೩ ಸದಸ್ಯರು ಪಕ್ಷಾತೀತವಾಗಿ ವಾರ್ಡಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಚುನಾವಣೆಗೂ ಮುನ್ನ ವಾರ್ಡಿನ ನಿವಾಸಿಗಳಿಗೆ ನೀಡಿದ ಭರವಸೆಯಂತೆ ಸ್ವಂತ ಖರ್ಚಿನಿಂದ ಸಾರ್ವಜನಿಕರಿಗೆ ನೀರಿನ ಅಭಾವ ನೀಗಿಸಲು ಸವಿತಾ ಬಿದರಳ್ಳಿ ಅವರು ಕೊಳವೆಬಾವಿ ಕೊರೆಸಿದ ಮೊದಲ ಸದಸ್ಯೆ ಎಂದರು.

ವಾರ್ಡಿನಲ್ಲಿ ಬಹುತೇಕ ಜನರು ನೇಕಾರರಾಗಿದ್ದು, ಕೊರೋನಾ ವೇಳೆ ವಾರ್ಡಿನ ನಿವಾಸಿಗಳಿಗೆ ಆಹಾರದ ಕಿಟ್ ವಿತರಣೆಗೆ ಮುಂದಾಗಿದ್ದು ಸ್ಮರಣಾರ್ಹ. ವಾರ್ಡಿನಲ್ಲಿ ಅಗಲಿದ ಕುಟುಂಬಕ್ಕೆ ಸಾಂತ್ವನದ ಜತೆಗೆ ಮುಕ್ತಿವಾಹನ ಖರ್ಚನ್ನು ಸಹ ತಾವೇ ಭರಿಸಿದ್ದಾರೆ. ಇವರ ಸಾಮಾಜಿಕ ಕಾರ್ಯಗಳು ಉಳಿದ ಸದಸ್ಯರಿಗೆ ಪ್ರೇರಕವಾಗಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡ, ಪುರಸಭೆ ಮಾಜಿ ಸದಸ್ಯ ಶಿವರಾಜ ಘೋರ್ಪಡೆ ಮಾತನಾಡಿ, ಬಿದರಳ್ಳಿ ಕುಟುಂಬ ಹಿಂದಿನಿಂದಲೂ ಸಾಮಾಜಿಕ ಸೇವೆಗಳ ಮೂಲಕ ಗುರುತಿಸಿಕೊಂಡಿದೆ. ಪುರಸಭೆ ಚುನಾವಣೆಗೆ ೧೫ನೇ ವಾರ್ಡಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಸವಿತಾ ಬಿದರಳ್ಳಿ ಅವರ ಪತಿ ಸಮಾಜ ಸೇವಕ ಶ್ರೀದರ ಬಿದರಳ್ಳಿ ಬೆನ್ನೆಲುಬಾಗಿ ನಿಂತು ವಾರ್ಡಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ರಾಜಕಾರಣದಲ್ಲಿ ಪ್ರತಿಯೊಂದು ಕಾರ್ಯಕ್ರಮ ಹಾಗೂ ಸೇವೆ ಹಿಂದೆ ಒಂದು ಸ್ಪಷ್ಟ ಹಾಗೂ ಲಾಭದ ಉದ್ದೇಶವಿರುತ್ತದೆ. ಆದರೆ ಬಿದರಳ್ಳಿ ಕುಟುಂಬ ಇದರ ಹೊರತಾಗಿ ನಿಂತಿದೆ ಎಂದರು.ಈ ವೇಳೆ ಸಾನ್ವಿ ಶ್ರೀಧರ ಬಿದರಳ್ಳಿ ಅವರ ೧೧ನೇ ವರ್ಷದ ಜನ್ಮದಿನಾಚರಣೆ ನಡೆಯಿತು. ಜತೆಗೆ ರಸಮಂಜರಿ ಕಾರ್ಯಕ್ರಮ ಜರುಗಿತು. ಪುರಸಭೆ ನಿಕಟಪೂರ್ವ ಅಧ್ಯಕ್ಷ ಸುಭಾಸ ಮ್ಯಾಗೇರಿ, ರೋಣ ಪುರಸಭೆ ನಿಕಟಪೂರ್ವ ಉಪಾಧ್ಯಕ್ಷ ಮಿಥುನ ಪಾಟೀಲ, ಪುರಸಭೆ ಮಾಜಿ ಸದಸ್ಯರಾದ ಮುದಿಯಪ್ಪ ಮುಧೋಳ, ರಾಜು ಸಾಂಗ್ಲೀಕರ, ವೀರಪ್ಪ ಪಟ್ಟಣಶೆಟ್ಟಿ, ಅಜೀತ ಬಾಗಮಾರ, ಲಕ್ಷ್ಮೀ ಮುಧೋಳ, ವಿಜಯಾ ಮಳಗಿ, ಕೌಸರಬಾನು ಹುನಗುಂದ ಹಾಗೂ ಚಂಬಣ್ಣ ಚವಡಿ, ಬಸವರಾಜ ಸೂಡಿ, ಬಸವರಾಜ ಶೀಲವಂತರ, ನಾರಾಯಣಪ್ಪ ಶೀಲವೇರಿ, ಶ್ರೀಧರ ಗಂಜಿಗೌಡರ, ದಾದು ಹಣಗಿ, ಹಸನಸಾಬ ತಟಗಾರ, ಸುರೇಶ ಶಿಂಧೆ, ಮಲ್ಲು ಕೊಳ್ಳಿ, ಜಿ.ಟಿ. ರಾಯಬಾಗಿ, ವೀರಭದ್ರಪ್ಪ ಪಾಗಿ ಇತರರು ಇದ್ದರು.

PREV

Recommended Stories

ಪರಪ್ಪನ ಅಗ್ರಹಾರ ಜೈಲಿಗೆ ಅಂಶು ಕುಮಾರ್‌ ಅಧೀಕ್ಷಕ
ಬಟ್ಟೆ ವ್ಯಾಪಾರ ಸೋಗಲ್ಲಿ 1 ಕೋಟಿಯ ಬುಲೆಟ್‌ ಬೈಕ್‌ ಕದ್ದ