ವಿಬಿ ಜಿ ರಾಮ್ ಜಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಮನವಿ

KannadaprabhaNewsNetwork |  
Published : Nov 21, 2026, 02:00 AM IST
ವಿಬಿ ಜಿ ರಾಮ್ ಜಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಮುಖಂಡರು ಶುಕ್ರವಾರ ಬಳ್ಳಾರಿಯಲ್ಲಿ ಜಿಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ದುಡಿಯುವ ಕೈಗಳಿಗೆ ನಿರಂತರವಾಗಿ ಕೆಲಸ ಕೊಡಬೇಕು. ೧೫ ದಿನಗಳ ಒಳಗಾಗಿ ಗೌರವಯುತ ಕೂಲಿ ಕೊಡಿಸುವಂತಹ ಕೆಲಸವಾಗಬೇಕು

ಸಂಡೂರು: ವಿಬಿ ಜಿ ರಾಮ್ ಜಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಶುಕ್ರವಾರ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್)ಯ ಮುಖಂಡರು ಬಳ್ಳಾರಿಯಲ್ಲಿ ಜಿಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕಿ ಡಿ. ಜಾಫ್ರಿನ್, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾನೂನು ಚೆನ್ನಾಗಿತ್ತು. ಕೂಲಿ ಖಾತ್ರಿ ಇತ್ತು. ಸಾಕಷ್ಟು ಗ್ರಾಮೀಣ ಪ್ರದೇಶದಲ್ಲಿ ಆಸ್ತಿ ಸೃಜನೆ ಕೆಲಸ ಆಗುತ್ತಿದ್ದವು. ವಿಬಿ ಜಿರಾಮ್ ಜಿ ಯೋಜನೆ ಬಂದಾಗಿನಿಂದ ಕೆರೆಗಳು ಇಲ್ಲದ ಸಾಕಷ್ಟು ಪಂಚಾಯ್ತಿಗಳಲ್ಲಿ ಕಾರ್ಮಿಕರಿಗೆ ಕೆಲಸ ಸಿಕ್ಕಿಲ್ಲ. ಕೆಲಸ ಮಾಡಿದ ಕಾರ್ಮಿಕರಿಗೆ ಸರಿಯಾಗಿ ಕೂಲಿ ಸಿಗುತ್ತಿಲ್ಲ.ಎನ್‌ಎಂಎಂಎಸ್‌ ಆಪ್‌ನಲ್ಲಿ ಹಾಜರಾತಿ ಸೆರೆ ಹಿಡಿದು ಅಪ್ಲೋಡ್ ಮಾಡಲು ಹೋದರೆ ಆಗುತ್ತಿಲ್ಲ. ಹೀಗಾಗಿ ಕಾರ್ಮಿಕರು ಇಡೀ ದಿನ ಬಿಸಿಲಿನಲ್ಲಿ ಕೆಲಸ ಮಾಡಿದ್ದೂ ಹಾಜರಾತಿ ಆಗಿಲ್ಲ ಎಂಬ ಕಾರಣಕ್ಕೆ ಕೂಲಿ ಪಡೆಯದೇ ಮನೆಗೆ ಹೋಗುತ್ತಿರುವುದು ಈ ಯೋಜನೆಯ ಅಸಮರ್ಪಕ ಅನುಷ್ಠಾನ ಎತ್ತಿ ತೋರಿಸುತ್ತದೆ.

ದುಡಿಯುವ ಕೈಗಳಿಗೆ ನಿರಂತರವಾಗಿ ಕೆಲಸ ಕೊಡಬೇಕು. ೧೫ ದಿನಗಳ ಒಳಗಾಗಿ ಗೌರವಯುತ ಕೂಲಿ ಕೊಡಿಸುವಂತಹ ಕೆಲಸವಾಗಬೇಕು. ಕಾರ್ಮಿಕರನ್ನು ಸತಾಯಿಸುವ ಪಂಚಾಯ್ತಿ ಮಟ್ಟದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಅಧಿಕಾರಿ ಒತ್ತಾಯಿಸಿದರು.

ಸಂಘಟನೆಯ ತಾಲೂಕು ಕಾರ್ಯಕರ್ತ ಗುಲಾಬಿ ಸಾಂಗ್ಲಿ, ಕಂಪ್ಲಿ ಕಾರ್ಯಕರ್ತೆ ಭಾಗ್ಯಶ್ರೀ, ಶೈನಾಜ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವಣ್ಣನ ವ್ಯಕ್ತಿತ್ವಕ್ಕೆ ಧಕ್ಕೆ: ಶೆಟ್ಟರ್ ಖಂಡನೆ
ವ್ಯಕ್ತಿಯ ಪರಿಪೂರ್ಣತೆಗೆ ಮಾತೃಭಾಷೆ ಅಗತ್ಯ: ಹಲಗತ್ತಿ