ಗುಪ್ತಶೆಟ್ಟಿಹಳ್ಳಿ ಕಾಡಾನೆಗಳ ಉಪಟಳ ಬೆಳೆ ಹಾನಿ : ಮುರಿದ ವಿದ್ಯುತ್ ಕಂಬ

KannadaprabhaNewsNetwork |  
Published : Oct 27, 2026, 01:15 AM IST
 | Kannada Prabha

ಸಾರಾಂಶ

ಆಲ್ದೂರುಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ನಿರಂತರವಾಗಿದ್ದು, ಕಾಫಿ ಬೆಳೆಗಾರರ ಬದುಕು ಹೈರಾಣಾಗಿದೆ. ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗುಪ್ತಶೆಟ್ಟಿಹಳ್ಳಿ ಗ್ರಾಮದ ಕಾಫಿ ತೋಟಗಳಿಗೆ ಕಾಡಾನೆಗಳ ಗುಂಪು ಭಾನುವಾರ ರಾತ್ರಿ ಲಗ್ಗೆ ಇಟ್ಟಿದ್ದು, ಅಪಾರ ಬೆಳೆ ಹಾನಿ ಮಾಡಿದೆ.

(ಪೋಟೋ ಮತ್ತು ಸುದ್ದಿ ಚನ್ನಾಗಿ ಬಳಸಿ)

ಕಾಡಾನೆಗಳ ನಿರಂತರ ಉಪಟಳ । ಬೆಳೆ ಹಾನಿ ಕಾಫಿ ಕೊಯ್ಲಿಗೂ ಆತಂಕದ ಛಾಯೆ । ಟೆಂಟಕಲ್ ಪೆನ್ಸಿಂಗ್ ಗೆ ಒತ್ತಾಯಕನ್ನಡಪ್ರಭ ವಾರ್ತೆ ಆಲ್ದೂರು

ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ನಿರಂತರವಾಗಿದ್ದು, ಕಾಫಿ ಬೆಳೆಗಾರರ ಬದುಕು ಹೈರಾಣಾಗಿದೆ. ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗುಪ್ತಶೆಟ್ಟಿಹಳ್ಳಿ ಗ್ರಾಮದ ಕಾಫಿ ತೋಟಗಳಿಗೆ ಕಾಡಾನೆಗಳ ಗುಂಪು ಭಾನುವಾರ ರಾತ್ರಿ ಲಗ್ಗೆ ಇಟ್ಟಿದ್ದು, ಅಪಾರ ಬೆಳೆ ಹಾನಿ ಮಾಡಿದೆ.

ಈ ಭಾಗದಲ್ಲಿ ಸಾರಗೋಡು ಮೀಸಲು ಅರಣ್ಯ ಇರುವುದರಿಂದ ಕಾಡಾನೆಗಳ ಉಪಟಳ ನಿರಂತರವಾಗಿದೆ. ಮೊದಲಿಗೆ ಒಂದೇ ಒಂದು ಕಾಡಾನೆ ಬರುತ್ತಿತ್ತು ಇತ್ತೀಚಿನ ದಿನಗಳಲ್ಲಿ ಮೂರಕ್ಕೂ ಹೆಚ್ಚು ಕಾಡಾನೆಗಳ ಗುಂಪು ಗ್ರಾಮದ ಇಪ್ಪತ್ತಕ್ಕೂ ಹೆಚ್ಚು ಕಾಫಿ ತೋಟಗಳಿಗೆ ನುಗ್ಗಿ, ಬಾಳೆ ಕಾಫಿ ಅಡಕೆ, ಬೈನೆ, ಸಿಲ್ವರ್ ಸಸಿಗಳನ್ನು ಸಹ ನಾಶಪಡಿಸುತ್ತಿವೆ. ವಿದ್ಯುತ್ ಸಂಪರ್ಕ ಇರುವಾಗಲೇ ಕಂಬ ಮುರಿದು ಹಾಕಿದ್ದು, ಕಂಬಗಳು ಹತ್ತಿರ ಇರುವುದರಿಂದ ನಾಲ್ಕು ಕಂಬಗಳು ವಾಲಿವೆ. ತಂತಿ ಕೆಳಮಟ್ಟದಲ್ಲಿ ನೇತಾಡುತ್ತಿದೆ ಎಂದು ಸ್ಥಳೀಯ ಕಾಫಿ ಬೆಳೆಗಾರ ಎಚ್. ಜಿ. ಶಂಕರ್ ಪರಿಸ್ಥಿತಿ ತೆರೆದಿಟ್ಟಿದ್ದಾರೆ.ಮೆಸ್ಕಾಂ ಇಲಾಖೆಯವರು ಶೀಘ್ರ ಸರಿಪಡಿಸದಿದ್ದರೆ ಕಾಡಾನೆಗಳ ಜೀವಕ್ಕೂ ಕುತ್ತು ಸಂಭವಿಸಲಿದೆ. ಅರಣ್ಯ ಇಲಾಖೆಯವರ ಬಳಿ ಪಟಾಕಿ ಕೇಳಿದರೆ ವ್ಯವಸ್ಥೆ ಕಲ್ಪಿಸುವುದಿಲ್ಲ ಪ್ರಸ್ತುತ ಕಾಫಿ ಹಣ್ಣಿನ ಕೊಯ್ಲು ಪ್ರಾರಂಭವಾಗಿದೆ. ಜನರನ್ನು ಕೆಲಸಕ್ಕೆ ನಿಯೋಜಿ ಸಲು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಮಳೆ ಅಬ್ಬರಕ್ಕೆ ತತ್ತರಿಸಿರುವ ಕಾಫಿ ಬೆಳೆಗಾರರು ಕಾಡಾನೆಗಳ ಸಮಸ್ಯೆಯಿಂದ ಇನ್ನಷ್ಟು ಬಳಲುವಂತಾಗಿದೆ ಎಂದು ಅಲವತ್ತುಕೊಂಡಿದ್ದಾರೆ.

ಹಳ್ಳಿಯ ಬೈರೇಗೌಡ ರವರ ಕಾಫಿ ತೋಟದ ಬಳಿ ಟೆಂಟಕಲ್ ಪೆನ್ಸಿಂಗ್ ನಿರ್ಮಿಸಿದರೆ ಕಾಡಾನೆಗಳ ಉಪಟಳ ನಿಯಂತ್ರಿಸಬಹುದು ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ. ಜನಪ್ರತಿನಿಧಿಗಳು ಅರಣ್ಯ ಇಲಾಖೆ ಅಧಿಕಾರಿಗಳು ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಬೇಕು ಎಂದು ಗುಪ್ತಶೆಟ್ಟಿಹಳ್ಳಿಯ ಕಾಫಿ ಬೆಳೆಗಾರರಾದ ಈರಯ್ಯ ರಾಮಯ್ಯ ಗಂಗಯ್ಯ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ರಾಮಾಯಣದಿಂದ ಸಮಾಜಕ್ಕೆ ಸಂದೇಶ
ರುದ್ರಭೂಮಿ ಸ್ವಚ್ಛಗೊಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು