ಜೀವನಕ್ಕೆ ಮಾನಸಿಕ ಸಮತೋಲನ ಅತ್ಯಗತ್ಯ

KannadaprabhaNewsNetwork |  
Published : Sep 24, 2024, 01:59 AM IST
ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಮುಖ್ಯ: ವಿರಕ್ತ ಮಠದ ಶ್ರೀಗಳು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ದೈಹಿಕ ಸಾಮರ್ಥ್ಯದಂತೆ ಮಾನಸಿಕ ಸಮತೋಲನವೂ ಜೀವನಕ್ಕೆ ಅತ್ಯಗತ್ಯ. ನಿತ್ಯ ಜೀವನದಲ್ಲಿ ಮನಸ್ಥಿತಿಯನ್ನು ನಿಯಂತ್ರಣಗೊಳಿಸಿಕೊಂಡರೇ ನೆಮ್ಮದಿಯ ಜೀವನ ನಡೆಸಬಹುದು ಎಂದು ಯರನಾಳ ವಿರಕ್ತಮಠದ ಗುರುಸಂಗನ ಬಸವ ಮಹಾಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ದೈಹಿಕ ಸಾಮರ್ಥ್ಯದಂತೆ ಮಾನಸಿಕ ಸಮತೋಲನವೂ ಜೀವನಕ್ಕೆ ಅತ್ಯಗತ್ಯ. ನಿತ್ಯ ಜೀವನದಲ್ಲಿ ಮನಸ್ಥಿತಿಯನ್ನು ನಿಯಂತ್ರಣಗೊಳಿಸಿಕೊಂಡರೇ ನೆಮ್ಮದಿಯ ಜೀವನ ನಡೆಸಬಹುದು ಎಂದು ಯರನಾಳ ವಿರಕ್ತಮಠದ ಗುರುಸಂಗನ ಬಸವ ಮಹಾಸ್ವಾಮೀಜಿ ನುಡಿದರು.ನಗರದ ಹುತಾತ್ಮ ಸರ್ಕಲ್‌ನಲ್ಲಿರುವ (ಮೀನಾಕ್ಷಿ ವೃತ್ತ) ನರ ಮನೋರೋಗ, ದುಶ್ಚಟ, ಲೈಂಗಿಕ ಸಮಸ್ಯೆಗಳ ನಿವಾರಣಾ ಕೇಂದ್ರ ಮನೋಲಯ ಆಸ್ಪತ್ರೆಯ 7ನೇ ವಾರ್ಷಿಕೋತ್ಸವ ಕಾರ್ಯಕ್ರಮ ಮತ್ತು ಬಿ.ಎಲ್.ಡಿ.ಇ ಆಸ್ಪತ್ರೆ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರಕಾಶ ಪಾಟೀಲ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಬಹುತೇಕ ಜನರು ಮಾನಸಿಕ ಹಿಂಸೆಯನ್ನು ಅನುಭವಿಸುತ್ತಾರೆ. ಕಾರಣ ಕೆಲಸ ಒತ್ತಡ, ಸಂಬಂಧಗಳಲ್ಲಿ ಬಿನ್ನಾಭಿಪ್ರಾಯ ಹಾಗೂ ಅತೀ ಯೋಚನೆಗಳು ಮತ್ತು ಭಾವೋದ್ವೇಗ ಸಮಸ್ಯೆಗಳು ಕಾಣುತ್ತವೆ. ಇದೆಲ್ಲವನ್ನೂ ನಿಯಂತ್ರಿಸಲು ಮಾನಸಿಕ ಸ್ವಾಸ್ಥ ಉತ್ತಮವಾಗಿರಬೇಕು ಎಂದರು.

ಡಾ.ಮನೋವಿಜಯ ಕಳಸಗೊಂಡ ಮಾತನಾಡಿ, ದೈಹಿಕ ಕಾಯಿಲೆಗಳಂತೆ ಮಾನಸಿಕ ಕಾಯಿಲೆಗಳು ಎಲ್ಲರಲ್ಲೂ ಸಾಮಾನ್ಯ. ಅದನ್ನು ಹೇಳಿಕೊಳ್ಳಲು, ಚಿಕಿತ್ಸೆ ಪಡೆಯಲು ಜನರು ಹಿಂದೆಟು ಹಾಕಬಾರದು. ಬದಲಾಗಿ ಮಾನಸಿಕ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆಗಳು, ಜೌಷಧ, ಥೆರಪಿಗಳಿದ್ದು ಸಾಧ್ಯವಾದಷ್ಟು ಜನರಿಗೆ ಮಾಹಿತಿ ನೀಡಿದರೇ ಮಾನಸಿಕ ಸ್ವಾಸ್ಥ್ಯ ಸಮಾಜವನ್ನು ರೂಪಿಸಲು ಸಾಧ್ಯ ಎಂದು ತಿಳಿಸಿದರು.ಡಾ.ವಿಶಾಲ ತಂಗಾ ಮಾತನಾಡಿ, ರಕ್ತದ ಒಂದು ಹನಿ ಇನ್ನೊಂದು ಜೀವಕ್ಕೆ ಸಂಜೀವಿನಿ. ರಕ್ತದಾನ ಅವಶ್ಯಕ ವ್ಯಕ್ತಿಗೆ ಹಾಗೂ ದಾನಿಯ ಆರೋಗ್ಯಕ್ಕೂ ಉತ್ತಮವಾಗಿದೆ. ಆರೋಗ್ಯವಂತ ಪ್ರತಿ ವ್ಯಕ್ತಿಯೂ ರಕ್ತದಾನ ಮಾಡಬಹುದು. ಇದರ ಬಗ್ಗೆ ಮಾಹಿತಿ ನೀಡಿ ಹೆಚ್ಚೆಚ್ಚು ಜನರನ್ನು ರಕ್ತದಾನಕ್ಕೆ ಪ್ರೋತ್ಸಾಹಿಸಿದ್ದು ಸಂತಸದ ವಿಷಯ ಎಂದು ತಿಳಿಸಿದರು.ಶಿಬಿರದಲ್ಲಿ 50ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು. ಮನೋಲಯ ಆಸ್ಪತ್ರೆಯು ನಡೆದು ಬಂದ ಹಾದಿಯ ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ಡಾ.ವಿಶಾಲ ತಂಗಾ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಮನೋಲಯ ಸೊಸೈಟಿ ಕಾರ್ಯದರ್ಶಿ ಬಿ.ಎಸ್.ಕಳಸಗೊಂಡ, ಯರನಾಳ ರೇವಣಸಿದ್ದೇಶ್ವರ ದೇವಾಲಯದ ಧರ್ಮದರ್ಶಿ ಶಂಕರಗೌಡ ಪಾಟೀಲ, ಮನೋಲಯ ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!