ಕ್ರೀಡೆಗಳಿಂದ ಮಾನಸಿಕ, ದೈಹಿಕ ಸದೃಢತೆ ಸಾಧ್ಯ: ಪೂಜಾರಿ

KannadaprabhaNewsNetwork | Published : Sep 24, 2024 1:52 AM

ಸಾರಾಂಶ

Mental, physical fitness possible through sports: Pujari

-ವಲಯ ಮಟ್ಟದ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ ಮಲ್ಲಿಕಾರ್ಜುನ ಪೂಜಾರಿ

---------

ಕನ್ನಡಪ್ರಭ ವಾರ್ತೆ ಯಾದಗಿರಿ

ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಬಹುದು. ಮಕ್ಕಳು ಪಾಠದ ಜೊತೆಗೆ ಕ್ರೀಡೆ ಬಗ್ಗೆ ಆಸಕ್ತಿ ಹೊಂದಬೇಕೆಂದು ಕ್ಷೇತ್ರ ಸಮನ್ವಯ ಅಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಕರೆ ನೀಡಿದರು.

ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಾದಗಿರಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆದ 2024-25ನೇ ಸಾಲಿನ ಯಾದಗಿರಿ ಹೋಬಳಿ ವಲಯ ಮಟ್ಟದ ಕ್ರೀಡಾಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು.

ಕ್ರೀಡಾಪಟುಗಳಿಗೆ ಸಮಾಜದಲ್ಲಿ ದೊಡ್ಡ ಗೌರವ, ಸ್ಥಾನಮಾನಗಳು ಸಿಗುತ್ತವೆ. ಕ್ರೀಡೆಯಿಂದ ಏಕಾಗ್ರತೆ, ಶಿಸ್ತು, ಸಂಸ್ಕಾರ ಮೊದಲಾದ ಗುಣಗಳು ಕಲಿತುಕೊಳ್ಳಬಹುದು. ವಿದ್ಯಾರ್ಥಿಗಳು ಕೇವಲ ಓದಿಗೆ ಮೀಸಲಾಗಬಾರದು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜವಾಗಿದ್ದು, ಭಾಗವಹಿಸುವಿಕೆ ಮುಖ್ಯವಾಗುತ್ತದೆ ಎಂದರು.

ಕಾರ್ಯಕ್ರಮಕ್ಕೆ ದಾನ ನೀಡಿರುವವರಿಗೆ ವೇದಿಕೆ ಮೇಲೆ ಸನ್ಮಾನಿಸಲಾಯಿತು. ಆರ್.ವಿ. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿ ತಂದರು.

ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಹೊಸಮನಿ, ವಿಕಾಸ ಸಂಸ್ಥೆ ಅಧ್ಯಕ್ಷ ಕಲಿಮೋದ್ದೀನ್‌, ಪ್ರಥಮಿಕ ಅನುದಾನಿತ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶರಣು ಮರಮಕಲ್, ಆರ್.ವಿ. ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಕ ಮಾಹದೇವಪ್ಪ ಶಿವಾಲೊರ, ಜವಾರ ಶಾಲೆ ದೈಹಿಕ ಶಿಕ್ಷಕ ಶೆಡಂಗಿ, ಹಿರಿಯ ಶಿಕ್ಷಕರಾದ ಮೌನೇಶ ದೇವರ ಗೋನಾಲ, ಶಂಕರೆಪ್ಪ ಕೋಮಾರ್, ತುಳಜಪ್ಪ ಶಹಾಪೂರಕರ್, ಅಮೃತ ದೋರಹಳ್ಳಿ, ಬಸ್ಸುಗೌಡ, ಬಸಲಿಂಗಪ್ಪ ನಾಯಕ, ದುರ್ಗಪ್ಪ ನಾಯಕ, ಭೀಮರಾಯ ಬೋಮ್ಮನ, ಮುರುಗೇಂದ್ರ ಸ್ವಾಮಿ, ದೇವಿಂದ್ರಪ್ಪ ಕಲಾಲ್, ಶಂಕ್ರೇಮ್ಮ, ಶೈಲಜಾ ಯರಗೋಳ, ಲತಾ ಮುಂಡರಗಿಕಿ ಇದ್ದರು.

----

20ವೈಡಿಆರ್12: ಯಾದಗಿರಿ ನಗರದಲ್ಲಿ 2024-25ನೇ ಸಾಲಿನ ಯಾದಗಿರಿ ಹೋಬಳಿ ವಲಯ ಮಟ್ಟದ ಕ್ರೀಡಾ ಜ್ಯೋತಿ ಸ್ವೀಕರಿಸಲಾಯಿತು.

Share this article