ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಎಸ್.ಜಿ ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕಿನ 75 ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ನುಡಿಗಳನ್ನಾಡಿದ ಅವರು ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಎಸ್.ಆರ್. ಲಕ್ಷ್ಮಿಕಾಂತರೆಡ್ಡಿ ಅವರ ಮಹಾದಾಸೆಯಂತೆ ಆಡಳಿತ ಮಂಡಳಿಯ ಸರ್ವಾನುಮತದ ತೀರ್ಮಾನದಂತೆ ಬ್ಯಾಂಕಿನ ಸದಸ್ಯರ ಅಂತ್ಯ ಸಂಸ್ಕಾರ ನಿಧಿಯನ್ನು ಹಾಲಿ ಇರುವ ರು 15 ಸಾವಿರದಿಂದ ರು 25 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ ಎಂದರು. ದಶಕಗಳಿಂದ ಶೇರುದಾರರಿಗೆ ವಿತರಣೆ ಮಾಡಿಕೊಂಡು ಬರುತ್ತಿದ್ದ ಬ್ಯಾಂಕಿನ ಲಾಭಾಂಶವನ್ನು ಈ ವರ್ಷವೂ ಶೇ. 25 ರಷ್ಟು ವಿತರಣೆ ಮಾಡಲಾಗುತ್ತಿದೆ ಎಂದರು.
ನಿಕಟಪೂರ್ವ ಅಧ್ಯಕ್ಷರ ಮಹಾದಾಸೆಯಂತೆ ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳುವ ಬಡ, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಾಯಿದೆ ಸಾಲದ ಬಡ್ಡಿ ದರವನ್ನು ಶೇ. 13 ರಿಂದ 10 ಕ್ಕೆ ಇಳಿಸುವುದಾಗಿಯೂ, ಎಲ್ಲಾ ರೀತಿಯ ಸಾಲಗಳ ಮೇಲೆ ಈಗಿರುವ ಬಡ್ಡಿ ದರವನ್ನು ಶೇ. 0.5೦ ರಷ್ಟು ಬಡ್ಡಿ ಕಡಿಮೆ ಮಾಡಲಾಗುವುದು ಎಂದು ರಘುರಾಮರೆಡ್ಡಿ ಹೇಳಿದರು.ಬ್ಯಾಂಕು 2025-26 ನೇ ಸಾಲಿನಲ್ಲಿ ಬ್ಯಾಂಕಿನ ತೆರಿಗೆ ಮತ್ತು ಅವಕಾಶಗಳ ಮುಂಚಿನ ವರಮಾನವು ರು 5.57 ಕೋಟಿಗಳಿದ್ದು, ಈ ಪೈಕಿ ತೆರಿಗೆ ಮತ್ತು ಅವಕಾಶಗಳಿಗೆ ರು.1.71 ಕೋಟಿ ಪಾವತಿಸಿದ ನಂತರ ನಿವ್ವಳ ವರಮಾನವು ರು 3.86 ಕೋಟಿಗಳಾಗಿರುತ್ತದೆ. ಬ್ಯಾಂಕಿನ ನಿವ್ವಳ ಅನುತ್ಪಾದಕ ಸಾಲ ಶೂನ್ಯ ಪ್ರಮಾಣದಲ್ಲಿದೆ ಎಂದರು.
ಬ್ಯಾಂಕಿನ ನಿರ್ದೇಶಕ ಪಿ.ಎಲ್.ಸುರೇಶ್ ರಾಜು ಸ್ವಾಗತಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಎಲ್.ಈ. ಶ್ರೀನಿವಾಸ್ ಬಾಬು ಲಿಂಗಂ ಮಾಜಿ ಸಚಿವ ಡಿ. ಸುಧಾಕರ್, ವಿಶ್ರಾಂತ ಪತ್ರಕರ್ತ ಜಿ.ಎಸ್. ಉಜ್ಜನಪ್ಪ ಸೇರಿದಂತೆ ಕಳೆದ ಸಾಲಿನಲ್ಲಿ ಸ್ವರ್ಗಸ್ಥರಾದ ಸದಸ್ಯರ ಹೆಸರು ವಾಚನ ಮಾಡುವ ಮೂಲಕ ಒಂದು ನಿಮಿಷ ಶ್ರದ್ಧಾಂಜಲಿ ಸಲ್ಲಿಸಲಾಯಿತು.