ಅಜೀಜಅಹ್ಮದ ಬಳಗಾನೂರ
2013ರಲ್ಲಿ ಕೇದರನಾಥದಲ್ಲಿ ಉಂಟಾದ ಜಲಪ್ರಳಯದಲ್ಲಿ ಮಂದಿರದ ಉಳಿವಿಗೆ ಕಾರಣವಾಗಿದ್ದ ಭೀಮಶಿಲಾ (ಬೃಹತ್ ಬಂಡೆ) ಇಂದಿಗೂ ಪ್ರಖ್ಯಾತಿ ಪಡೆದಿದೆ. ಈ ಭೀಮಶಿಲೆಯಿಂದ ಕೇದರನಾಥನ ಸನ್ನಿದಿ ಹೇಗೆ ರಕ್ಷಣೆಯಾಯಿತು ಎಂಬುದರ ಕುರಿತು ಇಲ್ಲಿನ ಹಿರೇಪೇಟೆ, ಭೂಸಪೇಟೆ, ಕಂಚಗಾರ ಓಣಿಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶೋತ್ಸವದಲ್ಲಿ ತಿಳಿಸುವ ಕಾರ್ಯ ಕೈಗೊಂಡಿರುವುದು ಸಾರ್ವಜನಿಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ.
ಗಣೇಶೋತ್ಸವದಲ್ಲಿ ಪ್ರತಿ ವರ್ಷವೂ ವಿಶೇಷ, ವಿಭಿನ್ನ ಪ್ರಯತ್ನಕ್ಕೆ ಕೈಹಾಕುವ ಇಲ್ಲಿನ ಶ್ರೀ ಗಣೇಶ ಉತ್ಸವ ಮಂಡಳಿಯ ಸದಸ್ಯರು ಈ ಬಾರಿ ಕೇದಾರನಾಥದಲ್ಲಿ ಉಂಟಾದ ಜಲಪ್ರಳಯದಲ್ಲಿ ದೇವಸ್ಥಾನ ಹಾಗೂ ಅಲ್ಲಿ ಆಶ್ರಯ ಪಡೆದಿದ್ದ 500ಕ್ಕೂ ಅಧಿಕ ಜನರ ರಕ್ಷಣೆ ಮಾಡಿದ್ದ ಭೀಮಶಿಲಾ ಹಿನ್ನಲೆ ತಿಳಿಸುವ ಕಾರ್ಯ ಕೈಗೊಂಡಿದೆ.ಇಲ್ಲಿನ ಶ್ರೀ ಗಣೇಶ ಉತ್ಸವ ಮಂಡಳಿಯು 1974ರಿಂದ ಪ್ರತಿವರ್ಷವೂ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಜನರ ನೈಜ ಸಮಸ್ಯೆಗಳನ್ನು ಆಧರಿಸಿ ಸನ್ನಿವೇಶಗಳನ್ನು ಸಿದ್ಧಪಡಿಸಿ ಗಣೇಶ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ.
ಹೈಕೋರ್ಟ್ ಪೀಠ ಸನ್ನಿವೇಶ ಹಾಗೂ ಟ್ರೇನ್ ಓಡಿಸುವ ರೂಪಕ, ಸಮುದ್ರದ ನೀರಿನಲ್ಲಿ ತೇಲುವ ರಾಮಸೇತು ಕಲ್ಲು ತಂದು ಪ್ರದರ್ಶನ, ಕಳಸಾ ಬಂಡೂರಿ ನಾಲಾಗಳು ನದಿಗಳಾಗಿ ಪರಿವರ್ತನೆಗೊಂಡು ಗೋವಾ ರಾಜ್ಯದಲ್ಲಿ ಸಮುದ್ರ ಸೇರುವ ವಿಶೇಷ ಸನ್ನಿವೇಶ, ಅಯೋಧ್ಯಾ ಶ್ರೀರಾಮ ಮಂದಿರ, ಈ ಬಾರಿ ಭೀಮಶಿಲಾದ ಮಹಿಮೆ ಬಿಂಬಿಸುವ ಸನ್ನಿವೇಶ ತಿಳಿಸಲಾಗುತ್ತಿದೆ. ಕಳೆದ ವರ್ಷ ಸುವರ್ಣ ಮಹೋತ್ಸವ ಹಿನ್ನೆಲೆ 11 ದಿನ ಹಾಸ್ಯಸಂಜೆ, ಧಾರ್ಮಿಕ ಸಭೆ, ಬೃಹತ್ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿತ್ತು. ನೂತನ ಸಮಿತಿ ರಚನೆ