ಮಧ್ಯಪ್ರಾಚ್ಯ ಯುದ್ಧ: ಮೆಣಸಿನಕಾಯಿ ವಹಿವಾಟು ಸುಗಮ

KannadaprabhaNewsNetwork |  
Published : Mar 10, 2026, 03:15 AM IST
ಸೋಮವಾರ ಮಾರುಕಟ್ಟೆಯಲ್ಲಿ ಕಂಡು ಬಂದ ಮೆಣಸಿನಕಾಯಿ ಚೀಲಗಳು. | Kannada Prabha

ಸಾರಾಂಶ

ವಿಶ್ವವನ್ನೇ ತಲ್ಲಣಗೊಳಿಸಿರುವ ಮಧ್ಯಪ್ರಾಚ್ಯದಲ್ಲಿನ ಯುದ್ಧದ ಭೀತಿಯು ಮೆಣಸಿನಕಾಯಿ ರಫ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ವದಂತಿಗಳ ನಡುವೆಯೂ ಇಂದು ಪಟ್ಟಣದ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಯಾವುದೇ ಆತಂಕವಿಲ್ಲದೇ ವ್ಯಾಪಾರ ವಹಿವಾಟು ಸುಗಮವಾಗಿ ನಡೆಯಿತು.

ಬ್ಯಾಡಗಿ: ವಿಶ್ವವನ್ನೇ ತಲ್ಲಣಗೊಳಿಸಿರುವ ಮಧ್ಯಪ್ರಾಚ್ಯದಲ್ಲಿನ ಯುದ್ಧದ ಭೀತಿಯು ಮೆಣಸಿನಕಾಯಿ ರಫ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ವದಂತಿಗಳ ನಡುವೆಯೂ ಇಂದು ಪಟ್ಟಣದ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಯಾವುದೇ ಆತಂಕವಿಲ್ಲದೇ ವ್ಯಾಪಾರ ವಹಿವಾಟು ಸುಗಮವಾಗಿ ನಡೆಯಿತು.

ಕಳೆದ ವಾರಕ್ಕಿಂತ ಆವಕಿನಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡು ಬಂದಿದ್ದು ದರದಲ್ಲಿ ಮಾತ್ರ ಸ್ಥಿರತೆ ಮುಂದುವರೆದಿದೆ. ಅಮೇರಿಕ-ಇಸ್ರೇಲ್ ಮತ್ತು ಇರಾನ್ ಸೇರಿದಂತೆ ಅರಬ್ ರಾಷ್ಟ್ರಗಳಿಗೆ ಮೆಣಸಿನಕಾಯಿ ಪ್ರಮುಖವಾಗಿ ರಫ್ತಾಗುತ್ತದೆ, ಯುದ್ಧದ ಮಧ್ಯೆಯೂ ಅಂತಹ ಪ್ರಮುಖ ಬದಲಾವಣೆಗಳು ಕಾಣದೇ ಎಂದಿನಂತೆ ವ್ಯಾಪಾರ ವಹಿವಾಟು ಸುಗಮವಾಗಿ ಸಾಗಿತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಪ್ರಸಕ್ತ ಅಂತಹ ಭರಾಟೆ ಕಂಡು ಬಂದಿಲ್ಲ. ಆದರೆ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ (ಮಾ.9) ಒಟ್ಟು 1.55 ಲಕ್ಷ ಮೆಣಸಿನಕಾಯಿ ಚೀಲಗಳು ಮಾರಾಟಕ್ಕೆ ಬಂದಿದ್ದು, ಆವಕದಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು, ದರದಲ್ಲಿ ಸ್ಥಿರತೆ ಮುಂದುವರೆದಿದೆ. ಪ್ರತಿ ವಾರ 3 ಲಕ್ಷ ಮೆಣಸಿನಕಾಯಿ ಚೀಲದ ಆಸುಪಾಸು ಆವಕವಾಗುತ್ತಿದ್ದು, ಬೆಲೆ ಉತ್ತಮವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಸೋಮವಾರ ಒಟ್ಟು ಒಟ್ಟು 421 ಖರೀದಿದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.ಸೋಮವಾರದ ದರ:ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಒಟ್ಟು 155,110 ಚೀಲಗಳು ಆವಕಾಗಿದ್ದು, ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹ 4309 ಗರಿಷ್ಠ ₹ 61899 ಸರಾಸರಿ ₹ 48259, ಡಬ್ಬಿತಳಿ ಕನಿಷ್ಠ ₹ 5269, ಗರಿಷ್ಠ ₹ 64222, ಸರಾಸರಿ ₹ 51589, ಗುಂಟೂರು ಕನಿಷ್ಠ ₹ 1529 ಗರಿಷ್ಠ ₹ 18000 ಸರಾಸರಿ ₹ 14009 ರು.ಗಳಿಗೆ ಮಾರಾಟವಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಜೆಸ್ಟಿಕ್‌ನಲ್ಲಿ ಸಿಂಗಾಪುರ ಮೀರಿಸುವ ಪ್ರಾಜೆಕ್ಟ್‌ ಮೆಜೆಸ್ಟಿಕ್‌
ಬೀಗ ಹಾಕಿದ ಮನೆಗಳಿಗೆ ಕನ್ನಹಾಕುತ್ತಿದ್ದ ಐವರು ಕಳ್ಳರ ಸೆರೆ