ಮಧ್ಯರಾತ್ರಿ ವಿಜಯೋತ್ಸವ: ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ

KannadaprabhaNewsNetwork |  
Published : Jun 02, 2026, 03:15 AM IST
ಮದ್ಯರಾತ್ರಿ ಸಂಭ್ರಮಿಸಿದ ಆರ್‌ಸಿಬಿ ಅಭಿಮಾನಿಗಳು | Kannada Prabha

ಸಾರಾಂಶ

ವಿಜಯಪುರ: ಎರಡನೇ ಸಲವೂ ಆರ್‌ಸಿಬಿಗೆ ಐಪಿಎಲ್ ಕಿರೀಟ ದೊರಕಿದ ಹಿನ್ನೆಲೆಯಲ್ಲಿ ನಗರದ ಮಹಾತ್ಮಾಗಾಂಧಿ ವೃತ್ತ ಹಾಗೂ ಶ್ರೀ ಸಿದ್ಧೇಶ್ವರ ದೇವಸ್ಥಾನದ ಎದುರಿಗೆ ಪಟಾಕಿ ಸಿಡಿಸಿ, ಕಾರುಗಳಲ್ಲಿ ಸಾಂಗ್ಸ್ ಹಾಕಿ ಡ್ಯಾನ್ಸ್ ಮಾಡಿ ಆರ್‌ಸಿಬಿ ಅಭಿಮಾನಿಗಳು ತಡರಾತ್ರಿ ವರೆಗೂ ವಿಜಯೋತ್ಸವ‌‌ ಆಚರಿಸಿದರು. ಸಾವಿರಾರು ಯುವಕ/ಯುವತಿಯರು ಜಮಾಯಿಸಿ ಈ ಸಲವು ಕಪ್‌ ನಮ್ಮದೇ ಎಂದು ಹೇಳುತ್ತ ಕೇ ಕೇ ಹಾಕಿ, ಸಿಳ್ಳೆ, ಚಪ್ಪಾಳೆ, ಕುಣಿದು ಕುಪ್ಪಳಿಸುವ ಮೂಲಕ ಗೆಲುವಿನ ಸಂಭ್ರಮವನ್ನು ಆಚರಿಸಿದರು.

ನೂರಾರು ಬೈಕ್ ಹಾಗೂ ಕಾರುಗಳಲ್ಲಿ ನಗರವನ್ನು ಸುತ್ತಿ ಆರ್‌ಸಿಬಿ ಗೆಲುವಿನ ವಿಜಯೋತ್ಸವ ಆಚರಿಸಲಾಯಿತು. ಈ ವೇಳೆ ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಅಭಿಮಾನಿಗಳನ್ನು ಚದುರಿಸಲು ಪೊಲೀಸರ ಹರಸಾಹಸ: ಆರ್‌ಸಿಬಿ ಗೆಲುವಿನ ಹಿನ್ನೆಲೆ ನಗರದ‌ ಗಾಂಧಿ ವೃತ್ತದಲ್ಲಿ ತಡರಾತ್ರಿವರೆಗೂ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಮಿಸಿದರು. ಈ ವೇಳೆ ಬೈಕ್‌ಗಳ ಮೇಲೆ, ಕಾರುಗಳಲ್ಲಿ ಬಂದ ಅಭಿಮಾನಿಗಳ ಹುಚ್ಚಾಟವನ್ನು ನಿಯಂತ್ರಿಸಲು ಪೊಲೀಸರು ಈ ವೇಳೆ ಲಘು ಲಾಠಿ ಪ್ರಹಾರ ನಡೆಸಿದರು. ವಿಜಯಪುರ ಡಿವೈಎಸ್‌ಪಿ ನಾಗರಾಜ ಲಘು ಲಾಠಿ ಪ್ರಹಾರ ನಡೆಸಿ ಸಂಚಾರ ಕ್ಕೆ ತಡೆಯಾಗುವಂತೆ ಮಾಡಿದ್ದ ಆರ್‌ಸಿಬಿ ಅಭಿಮಾನಿಗಳನ್ನು ನಿಯಂತ್ರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಧಕ್ಕೆ ನಿಂತ ಶಾಪಿಂಗ್‌ ಕಾಂಪ್ಲೆಕ್ಸ್ ಕಾಮಗಾರಿ
ಹಿಂದುತ್ವ ಉಳಿಸಲು ಹೆಚ್ಚಿಗೆ ಮಕ್ಕಳ ಹೊಂದಿ