ಕನ್ನಡಪ್ರಭ ವಾರ್ತೆ ತೇರದಾಳ(ರ-ಬ):
ದಾನಿಗೊಂಡ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಅಂಗವಾಗಿ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಆಯೋಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿ, ವೈದ್ಯಕೀಯ ಸೇವೆಗೆ ಸಿದ್ಧವಾಗಿರುವ ಎಲ್ಲರೂ ನಿಷ್ಕಾಮ ಸೇವೆಗೆ ಬದ್ಧರಾಗಬೇಕು. ಸಮಯ ಪಾಲನೆ, ಸೂಕ್ತ ಹೊಣೆಗಾರಿಕೆ ನಿಭಾಯಿಸಲು ಕಂಕಣಬದ್ಧರಾಗಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಡಾ.ಪಿ.ಬಿ.ಅಪರಾಜ್ ವಿದ್ಯಾರ್ಥಿಗಳಿಗೆ ಶುಶ್ರೂಷಕಿಯರ ಮೌಲ್ಯದ ಬಗ್ಗೆ ಹಾಗೂ ಅವರ ಕಾರ್ಯ ಮಹತ್ವದ ಬಗ್ಗೆ ಮಾತನಾಡಿದರು. ದಾನಿಗೊಂಡ ಸರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಆನಂದ ಕುಮಾರ ಕಡಿ ಮತ್ತು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ದಾನೇಶ್ವರಿ ಮಟಗಾರ್ ಸ್ವಾಗತಿಸಿದರು. ಪ್ರಶಾಂತ ವಂದಿಸಿದರು. ಶುಶ್ರೂಷಕಿಯರ ದಿನದ ಅಂಗವಾಗಿ ದಾನಿಗೊಂಡ ನರ್ಸಿಂಗ್ ಕಾಲೇಜಿನಲ್ಲಿ ನರ್ಸಿಂಗ್ ಸೈನ್ಸ್ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.