ಕೊಳಲು ಗೋಪಾಲಕೃಷ್ಣನಿಗೆ ಹಾಲಿನ ನೈವೇದ್ಯ

KannadaprabhaNewsNetwork |  
Published : Sep 05, 2026, 01:45 AM IST
4ಎಚ್ಎಸ್ಎನ್9: ಹೊಳೆನರಸೀಪುರ ಪಟ್ಟಣದ ಶ್ರೀ ಕೊಳಲು ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಯಾದವ ಸಂಘದವತಿಯಿಂದ ವಿಶೇಷ ಪೂಜಾ ಮಹೋತ್ಸವ ಜರುಗಿತು. ನಟೇಶ್ ಯಾದವ್, ವೆಂಕಟೇಶ್ ಯಾದವ್, ರಂಗನಾಥ್ ಯಾದವ್ ಇದ್ದರು. | Kannada Prabha

ಸಾರಾಂಶ

ಶ್ರೀ ಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಸಹಸ್ರ ನಾರ್ಮಾಚನೆ, ನೈವೇದ್ಯ, ಪೂಜಾ ಕೈಂಕರ್ಯದ ನಂತರ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ತೀರ್ಥ ಪ್ರಸಾಧ ವಿನಿಯೋಗ ಮಾಡಲಾಯಿತು. ಸಂಜೆ ಗೋಧೂಳಿ ಲಗ್ನದಲ್ಲಿ ೭೦೦ ಲೀಟರ್‌ಗೂ ಹೆಚ್ಚು ಹಾಲನ್ನು ನೈವೇದ್ಯಕ್ಕೆ ಇಟ್ಟು, ಪೂಜೆ ಸಲ್ಲಿಸಲಾಯಿತು. ವಿಶೇಷವಾಗಿ ಅಲಂಕರಿಸಿದ್ದ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ, ಕೋಟೆ ಹಾಗೂ ಪೇಟೆಯ ಮುಖ್ಯ ರಸ್ತೆಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ಮಾಡಲಾಯಿತು ಹಾಗೂ ರಸ್ತೆಯ ಉದ್ದಕ್ಕೂ ನೆರದಿದ್ದ ಭಕ್ತರಿಗೆ ಹಾಲಿನ ಪ್ರಸಾಧವನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಶ್ರೀ ಕೊಳಲು ಗೋಪಾಲಕೃಷ್ಣ ದೇವಾಲಯದಲ್ಲಿ ತಾಲೂಕು ಯಾದವ ಸಂಘದ ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಶುಕ್ರವಾರ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು.

ಶ್ರೀ ಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಸಹಸ್ರ ನಾರ್ಮಾಚನೆ, ನೈವೇದ್ಯ, ಪೂಜಾ ಕೈಂಕರ್ಯದ ನಂತರ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ತೀರ್ಥ ಪ್ರಸಾಧ ವಿನಿಯೋಗ ಮಾಡಲಾಯಿತು. ಸಂಜೆ ಗೋಧೂಳಿ ಲಗ್ನದಲ್ಲಿ ೭೦೦ ಲೀಟರ್‌ಗೂ ಹೆಚ್ಚು ಹಾಲನ್ನು ನೈವೇದ್ಯಕ್ಕೆ ಇಟ್ಟು, ಪೂಜೆ ಸಲ್ಲಿಸಲಾಯಿತು. ವಿಶೇಷವಾಗಿ ಅಲಂಕರಿಸಿದ್ದ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ, ಕೋಟೆ ಹಾಗೂ ಪೇಟೆಯ ಮುಖ್ಯ ರಸ್ತೆಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ಮಾಡಲಾಯಿತು ಹಾಗೂ ರಸ್ತೆಯ ಉದ್ದಕ್ಕೂ ನೆರದಿದ್ದ ಭಕ್ತರಿಗೆ ಹಾಲಿನ ಪ್ರಸಾಧವನ್ನು ವಿತರಿಸಲಾಯಿತು.

ಪೂಜಾ ಮಹೋತ್ಸವದಲ್ಲಿ ಶಾಸಕ ಎಚ್. ಡಿ. ರೇವಣ್ಣ, ಯಾದವ ಸಂಘದ ಅಧ್ಯಕ್ಷ ವೇಣು ಕುಮಾರ್‌, ಕಾರ್ಯದರ್ಶಿ ವೆಂಕಟೇಶ್ ಯಾದವ್, ಖಜಾಂಚಿ ಅರುಣ್ ಕುಮಾರ್ ಯಾದವ್, ಪುರಸಭೆ ಪರಿಸರ ಎಂಜಿನಿಯರ್ ರುಚಿದರ್ಶಿನಿ, ನಿ. ಎಎಸ್‌ಐ ಮಂಜುನಾಥ್, ನಟೇಶ್ ಯಾದವ್, ಎಚ್.ಟಿ.ಸುದರ್ಶನ್ ಯಾದವ್, ಸೋಮ ಸುಂದರ್‌ ಯಾದವ್, ನಾರಾಯಣ್, ರಂಗನಾಥ್ ಯಾದವ್, ರಾಘವೇಂದ್ರ, ತಿಮ್ಮಪ್ಪ, ಮಂಜುನಾಥ್, ರವಿ ಯಾದವ್, ಅರುಣ್ ಯಾದವ್, ಗಿರೀಶ್, ವಿಷ್ಣು, ಹನುಮಂತರಾಜು, ಗವಿರಂಗ, ಗಿರೀಶ್, ನರಸಿಂಹಮೂರ್ತಿ, ಬಾಬು, ಗಿರೀಶ್ ಯಾದವ್, ದೇವರಾಜ್, ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿಒಪಿ ರಾಸಾಯನಿಕ ಮಿಶ್ರಿತ ಬಣ್ಣದ ಗಣಪತಿ ಮಾರಾಟ ನಿಷೇಧ
ಬಿಸಲವಾಡಿ ಗ್ರಾಮದಲ್ಲಿ ನೂತನ ಶ್ರೀರಾಮ ಮಂದಿರ ಉದ್ಘಾಟನೆ