ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಮತ್ತು ಭಾರತೀಯ ಡೇರಿ ಅಸೋಸಿಯೇಷನ್, ಕರ್ನಾಟಕ ರಾಜ್ಯ ಶಾಖೆ ಸಂಯುಕ್ತಾಶ್ರಯದಲ್ಲಿ ಕ್ಷೀರ ಕ್ರಾಂತಿಯ ಪಿತಾಮಹ ಡಾ. ವರ್ಗೀಸ್ಕುರಿಯನ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಹಾಲು ದಿನಾಚರಣೆಯನ್ನು ಡಾ. ವರ್ಗೀಸ್ ಕುರಿಯನ್ ಪುತ್ಥಳಿಗೆ ಮಾಲಾರ್ಪಣೆ, ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ವರ್ಗೀಸ್ಕುರಿಯನ್ಅವರಿಂದ ಹಾಲಿನ ಕ್ಷೇತ್ರ ಇಂದು ದೇಶದಾದ್ಯಂತ ಒಂದು ದೊಡ್ಡ ಉದ್ಯಮವಾಗಿ ಬೆಳೆಯಲು ಸಹಕಾರಿಯಾಯಿತು. ಅವರನ್ನು ಎಲ್ಲರೂ ಸದಾ ಸ್ಮರಿಸುವ ಕೆಲಸ ಮಾಡಬೇಕಿದೆ. ರಾಜ್ಯದಲ್ಲಿ ಎಂ.ಕೃಷ್ಣಪ್ಪ ಕೇಂದ್ರದಲ್ಲಿ ಕೃಷಿ ಮಂತ್ರಿಯಾಗಿದ್ದ ವೇಳೆ ಬನ್ನೇರುಘಟ್ಟದಲ್ಲಿ ಹಾಲೆಂಡ ನಿಂದ ತಳಿ ತಂದು ಕರ್ನಾಟಕಕ್ಕೆ ಪರಿಚಯಿಸಿದರು. ಕೆಎಂಎಫ್‌ಪನೆ ಮಾಡಿದ್ದು, ಅವರ ಕೊಡುಗೆಯಾಗಿದೆ ಎಂದರು.ದೇವೇಗೌಡರು ಪ್ರಧಾನಿಯಾಗಿ, ಎಚ್.ಡಿ.ರೇವಣ್ಣ ಕೆಎಂಎಫ್ಅಧ್ಯಕ್ಷರಾಗಿದ್ದ ವೇಳೆ ಸ್ಪೇಪ್ಯೋಜನೆ ಜಾರಿಗೆ ತಂದು, ಮಹಿಳಾ ಉತ್ಪಾದಕರನ್ನು ದೇಶದ ಪ್ರವಾಸ ಮಾಡುವಂತೆ ಮಾಡಿದರು. ಅವರಿಂದ ಹೆಚ್ಚು ಉತ್ಪನ್ನಗಳನ್ನು ಮಾಡಲು ಅನೂಕೂಲವಾಯಿತು. ಈ ಕಾರಣಕ್ಕಾಗಿಯೇ 167 ಉತ್ಪನ್ನಗಳ ಪ್ರಚಾರ ಮಾಡಿ ಮಾರಾಟ ಮಾಡುತ್ತಿದ್ದಾರೆ. ಯಡಿಯೂರಪ್ಪ 2 ರು. ಈಗ ಸಿದ್ದರಾಮಯ್ಯ 3 ರು. ಹೆಚ್ಚಿಸಿ ಸರ್ಕಾರ ನೇರವಾಗಿ 5 ರು. ನೀಡುತ್ತಿದೆ. ಮಕ್ಕಳಿಗೆ ಕ್ಷೀರಭಾಗ್ಯ ಜಾರಿಗೊಳಿಸುವ ಯೋಜನೆ ಮೂಲಕ ಡೇರಿಗಳ ಉಳಿವಿಗೆ ಅನೂಕೂಲ ಮಾಡಿಕೊಟ್ಟರು ಎಂದರು.
ಮುಖ್ಯಅತಿಥಿಗಳಾಗಿ ಐಡಿಎ ದಕ್ಷಿಣ ವಲಯ ಅಧ್ಯಕ್ಷ ಡಾ. ಸತೀಶ್ಕುಲಕರ್ಣಿ ಮಾತನಾಡಿ, ಹಾಲು ಉತ್ಪಾದನೆಯಲ್ಲಿ 20 ವರ್ಷದಿಂದ ಪ್ರಪಂಚದ ಮೊದಲಸ್ಥಾನದಲ್ಲಿ ನಾವಿದ್ದೇವೆ. ದೇಶದಲ್ಲಿ 239 ಮಿಲಿಯನ್ ಟನ್ 12 ಲಕ್ಷ ಕೋಟಿ ರು. ಆರ್ಥಿಕ ಆದಾಯ ಹೈನೋದ್ಯಮದಿಂದ ಬರುತ್ತಿದೆ. ಯಾವ ದೇಶದಲ್ಲೂ ಇಂತಹ ಹಾಲಿನ ಉತ್ಪನ್ನ ಹೆಚ್ಚಳ ಆಗುತ್ತಿಲ್ಲ. ಈ ಬಗ್ಗೆ ಮಾರ್ಗದರ್ಶನ ನೀಡಿದವರು ಕುರಿಯನ್ ಆಗಿದ್ದಾರೆ ಎಂದರು.
ಎಸ್ಎನ್ಎಫ್ಅಂಶದ ಮೇಲೆ ಪಶು ಆಹಾರದ ಪರಿಣಾಮ, ಸಂತಾನೋತ್ಪತ್ತಿ ವಿಧಾನಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮೈಮುಲ್ ಅಧ್ಯಕ್ಷ ಕೆ. ಈರೇಗೌಡ, ನಿರ್ದೆಶಕರಾದ ಎ.ಟಿ. ಸೋಮಶೇಖರ, ಕೆ.ಜಿ. ಮಹೇಶ್, ಕೆ. ಉಮಾಶಂಕರ್, ಸಿ.ಓಂ. ಪ್ರಕಾಶ್, ಪಿ.ಎಂ. ಪ್ರಸನ್ನ, ಆರ್. ಚೆಲುವರಾಜು, ಕೆ.ಎಸ್. ಕುಮಾರ್, ದ್ರಾಕ್ಷಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್. ಸದಾನಂದ, ಬಿ. ಗುರುಸ್ವಾಮಿ, ಬಿ.ಎ. ಪ್ರಕಾಶ್, ಎ.ಬಿ. ಮಲ್ಲಿಕಾ ರವಿಕುಮಾರ್ ಇದ್ದರು. ಸೊಸೈಟಿ ಕಾರ್ಯದರ್ಶಿಯಾಗಿ ಬಡವರ ಪರವಾಗಿ ಸಾಲ, ಸಕ್ಕರೆ, ಸೀಮೆಎಣ್ಣೆ ಕೊಟ್ಟಿದ್ದರ ಫಲವಾಗಿ ಹಣವಂತರ ಎದುರು ನನ್ನನ್ನು ಈ ಎತ್ತರಕ್ಕೆ ಬೆಳೆದು ನಿಲ್ಲಿಸಿದ್ದಾರೆ. ಬಡವರು, ಅನಾಥರ ಕಣ್ಣೀರು ಒರೆಸಿದರೆ ದೇವಾಲಯಗಳಿಗೆ ಹೋಗುವ ಅವಶ್ಯಕತೆಯಿಲ್ಲ. ದೇಶ ಅಭಿವೃದ್ಧಿ ಕಾಣಬೇಕಾದರೆ ಸದ್ಯದ ಮಟ್ಟಿಗೆ ಇರುವ ಏಕೈಕ ಕ್ಷೇತ್ರ ಎಂದರೆ ಅದು ಹಾಲಿನ ಕ್ಷೇತ್ರವಾಗಿದ್ದು, ಇಂತಹ ಕ್ಷೇತ್ರ ಉಳಿಯಲೇಬೇಕಿದೆ.