ಲಕ್ಷಾಂತರ ರು. ಬೆಲೆಯ ಚಿನ್ನಾಭರಣ ಹಿಂತಿರುಗಿಸಿದ ವಿದ್ಯಾರ್ಥಿನಿ

KannadaprabhaNewsNetwork |  
Published : May 25, 2024, 12:49 AM IST
ಪೊಟೋ ಪೈಲ್ ನೇಮ್ ೨೪ಎಸ್‌ಜಿವಿ೧  ವಿದ್ಯಾರ್ಥಿನಿ ಕಾವ್ಯ  ಮಹಾರಾಜಪೇಟೆ ಅವಳನ್ನು ಸನ್ಮಾನಿಸಿದ ಶ್ರೀಮತಿ ಗೌರಮ್ಮ ಬ ಅಂಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ. | Kannada Prabha

ಸಾರಾಂಶ

ವಿದ್ಯಾರ್ಥಿನಿಯೋರ್ವಳು ತನಗೆ ಸಿಕ್ಕ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಪಟ್ಟಣದ ಶ್ರೀಮತಿ ಗೌರಮ್ಮ ಬ. ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

ಶಿಗ್ಗಾಂವಿ: ವಿದ್ಯಾರ್ಥಿನಿಯೋರ್ವಳು ತನಗೆ ಸಿಕ್ಕ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಪಟ್ಟಣದ ಶ್ರೀಮತಿ ಗೌರಮ್ಮ ಬ. ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.ಕಾವ್ಯ ಮಹಾರಾಜಪೇಟೆ ಎಂಬ ವಿದ್ಯಾರ್ಥಿನಿ ಕಾಲೇಜು ಆವರಣದಲ್ಲಿ ತನಗೆ ಸಿಕ್ಕ ₹೧.೮೦ ಲಕ್ಷ ಬೆಲೆಬಾಳುವ ಬ್ರಾಸ್‌ಲೇಟ್ ಅನ್ನು ಪ್ರಾಂಶುಪಾಲರಿಗೆ ತಂದು ಕೊಟ್ಟು ಕಾಲೇಜಿನ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳಿಂದ ಪ್ರಶಂಸೆಗೆ ಪಾತ್ರವಾಗಿದ್ದಾಳೆ.

ಕಾಲೇಜಿನಲ್ಲಿ ನಡೆಯುತ್ತಿದ್ದ ಸರ್ಟಿಫಿಕೇಟ್ ಕೋರ್ಸಿನ ಕಾರ್ಯಕ್ರಮ ಒಂದರಲ್ಲಿ ಉಪನ್ಯಾಸಕ ಡಾ. ಸುರೇಶ್ ವಾಲ್ಮೀಕಿ ವಿದ್ಯಾರ್ಥಿಗಳಿಗೆ ಕಾಲೇಜು ಆವರಣದ ನೀರಿನ ಶುದ್ಧೀಕರಣ ಕೇಂದ್ರದಿಂದ ನೀರಿನ ವ್ಯವಸ್ಥೆಯನ್ನು ಮಾಡುತ್ತಿರುವಾಗ ಅವರು ಧರಿಸಿದ್ದ ಬ್ರಾಸ್‌ಲೇಟ್ ಕಳೆದಿತ್ತು. ಮಳೆಯಿಂದ ಕಾಲೇಜು ಆವರಣ ಕೆಸರುಮಯವಾಗಿದ್ದು, ನಾಲ್ಕಾರು ದಿನ ಹುಡುಕಿದರೂ ಸಿಕ್ಕಿರಲಿಲ್ಲ. ನಂತರ ಆಕಸ್ಮಿಕವಾಗಿ ವಿದ್ಯಾರ್ಥಿನಿ ನೀರಿನ ಶುದ್ಧೀಕರಣ ಕೇಂದ್ರದ ಬಳಿ ಹೋದಾಗ ಕಣ್ಣಿಗೆ ಬಿದ್ದ ಚಿನ್ನಾಭರಣವನ್ನು ತಕ್ಷಣದಲ್ಲೆ ಪ್ರಾಂಶುಪಾಲರಿಗೆ ತಂದು ಕೊಟ್ಟಿದ್ದಾಳೆ.

ವಿದ್ಯಾರ್ಥಿನಿಯ ಪ್ರಾಮಾಣಿಕತೆಯನ್ನು ಪ್ರೋತ್ಸಾಹಿಸಲು ಸಿಬ್ಬಂದಿ ವರ್ಗ ಸೇರಿದಂತೆ ಕಾಲೇಜಿನ ವತಿಯಿಂದ ಕಿರು ಕಾಣಿಕೆ ನೀಡಿ ಗೌರವಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ