ಲಕ್ಷಾಂತರ ಮೌಲ್ಯದ ಚಿನ್ನ ಕಳ್ಳರ ಪಾಲು

KannadaprabhaNewsNetwork |  
Published : Mar 12, 2026, 12:30 AM IST
ವಡ್ಡಗೆರೆಯಲ್ಲಿ ಹೈಟೆಕ್ ಕಳ್ಳರ ಕೈಚಳಕ | Kannada Prabha

ಸಾರಾಂಶ

ತಾಲೂಕಿನ ಕಸಬಾ ಹೋಬಳಿ ವಡ್ಡಗೆರೆಯ ಶ್ರೀವೀರನಾಗಮ್ಮ ದೇವಾಲಯದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬಾಗಿಲು, ದೇವಾಲಯದ ಕಬ್ಬಿಣ-ಮರದ ಬಾಗಿಲು ಮತ್ತು ಗರ್ಭಗುಡಿಯ ಭದ್ರತಾ ಬಾಗಿಲನ್ನು ಗ್ಯಾಸ್ ಕಟರ್ ನಿಂದ ಕಟ್ ಮಾಡಿ ಒಳಪ್ರವೇಶಿಸಿ ೩೫ ಕೆಜಿ ಬೆಳ್ಳಿ ಮತ್ತು ೧೦ಗ್ರಾಂ ಬಂಗಾರ ಸೇರಿ ಲಕ್ಷಾಂತರ ರು. ಮೌಲ್ಯದ ಬಂಗಾರ ದೋಚಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಕನ್ನಡಪ್ರಭವಾರ್ತೆ ಕೊರಟಗೆರೆ

ತಾಲೂಕಿನ ಕಸಬಾ ಹೋಬಳಿ ವಡ್ಡಗೆರೆಯ ಶ್ರೀವೀರನಾಗಮ್ಮ ದೇವಾಲಯದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬಾಗಿಲು, ದೇವಾಲಯದ ಕಬ್ಬಿಣ-ಮರದ ಬಾಗಿಲು ಮತ್ತು ಗರ್ಭಗುಡಿಯ ಭದ್ರತಾ ಬಾಗಿಲನ್ನು ಗ್ಯಾಸ್ ಕಟರ್ ನಿಂದ ಕಟ್ ಮಾಡಿ ಒಳಪ್ರವೇಶಿಸಿ ೩೫ ಕೆಜಿ ಬೆಳ್ಳಿ ಮತ್ತು ೧೦ಗ್ರಾಂ ಬಂಗಾರ ಸೇರಿ ಲಕ್ಷಾಂತರ ರು. ಮೌಲ್ಯದ ಬಂಗಾರ ದೋಚಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ವಡ್ಡಗೆರೆಗೆ ತುಮಕೂರು ಎಎಸ್ಪಿ ಪುರುಷೋತ್ತಮ್, ಮಧುಗಿರಿ ಡಿವೈಎಸ್ಪಿ ಮಂಜುನಾಥ, ಸಿಪಿಐ ಅನಿಲ್, ತಹಶೀಲ್ದಾರ್ ಮಂಜುನಾಥ ಸೇರಿ ಶ್ವಾನದಳ, ಬೆರಳಚ್ಚು ತಜ್ಞರತಂಡ, ಮುಜರಾಯಿ ಮತ್ತು ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಡ್ಡಗೆರೆಯ ಶ್ರೀವೀರನಾಗಮ್ಮ ದೇವಾಲಯದಲ್ಲಿ ಕಳೆದ ೧೫ ವರ್ಷದ ಹಿಂದೆ ಎರಡು ಸಲ ಹುಂಡಿ ಕಳ್ಳತನ ಆಗಿತ್ತು. ಇದಾದ ನಂತರ ಈಗ ದೇವಾಲಯದ ೪ ಬಾಗಿಲು ಕಟ್ ಮಾಡಿ ದೇವಿಯ ಮೂಲ ವಿಗ್ರಹಬಿಟ್ಟು ಉಳಿದೆಲ್ಲ ಕಳ್ಳತನ ಮಾಡಲಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಕ್ಕೆ ರಾತ್ರಿ ಕಾವಲುಗಾರನ ಜೊತೆ ಭದ್ರತೆಯು ಮರೀಚಿಕೆಯಾಗಿದೆ. ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯ ರಂಗರಾಜು ತುಮಕೂರು ಜಿಲ್ಲೆಯಲ್ಲಿ ೨ಸಾವಿರಕ್ಕೂ ಅಧಿಕ ಬಿ ಗ್ರೇಡ್ ದೇವಾಲಯಗಳಿದ್ದು ಯಾವುದಕ್ಕೂ ರಾತ್ರಿ ಕಾವಲುಗಾರ ಇಲ್ಲ. ಜಿಲ್ಲೆಯ ಅಧಿಕ ಕಡೆ ಕಳ್ಳತನ ಹೆಚ್ಚಾಗಿ ನಡಿತಿದೆ. ತುರ್ತಾಗಿ ದೇವಾಲಯಗಳ ಕಮಿಟಿ ರಚನೆ ಮತ್ತು ಕಾವಲುಗಾರ ನೇಮಕ ಅತ್ಯವಶ್ಯಕ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾರ್ಚ್ 24 ರಿಂದ ಮದಗದಕೆರೆ ತೂಬು ತೆರವು: ಶಾಸಕ ಆನಂದ್
ಎಸ್ಟಿಗೆ 7% ಮೀಸಲಾತಿ ನೀಡಲು ಆಗ್ರಹ