ಧ್ಯಾನ, ಯೋಗಗಳಿಂದ ದೇಹ-ಮನಸ್ಸು ಸದೃಢ

KannadaprabhaNewsNetwork |  
Published : Oct 20, 2024, 01:51 AM IST
ಕೆ ಕೆ ಪಿ ಸುದ್ದಿ 02:ನಗರದ ರೂರಲ್ ಎಜುಕೇಶನ್ ಸೊಸೈಟಿ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿ ವಿಕಸನ ಕಾರ್ಯಕ್ರಮ ನಡೆಸಲಾಯಿತು.  | Kannada Prabha

ಸಾರಾಂಶ

ಕನಕಪುರ: ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸದೆ ತರಗತಿಗೆ ಬಂದರೆ ಮನಸ್ಸು ಚಂಚಲವಾಗಿ ಏನನ್ನೂ ಗ್ರಹಿಸಲಾಗದ ಸ್ಥಿತಿಗೆ ತಲುಪುತ್ತೀರಿ, ಇತ್ತೀಚಿನ ದಿನಗಳಲ್ಲಿ ತರಾತುರಿ ಅಥವಾ ಅಶಿಸ್ತಿನ ಜೀವನ ಸಣ್ಣ ಮಕ್ಕಳು ಮತ್ತು ಯುವಕರ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ರಾಜ್ಯ ಆಧ್ಯಾತ್ಮ ಸಂಚಾಲಕ ಸುಂದರ್ ಅನಂತ ರಾಮನ್‌ ವಿಷಾದಿಸಿದರು.

ನಗರದ ರೂರಲ್ ಪದವಿ ಕಾಲೇಜಿನಲ್ಲಿ ವಿಶೇಷ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಲಿಗೆ ರುಚಿಗೆ ಮನಸೋತು ಶುಚಿತ್ವ ಮತ್ತು ಪೌಷ್ಟಿಕತೆಯಿಂದ ದೂರ ಸರಿದು ವಿವಿಧ ಕಾಯಿಲೆಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯಕರ ಜೀವನದತ್ತ ನಾವೆಲ್ಲ ಗಮನಹರಿಸಬೇಕಿದೆ. ಆಹಾರ ಸಮರ್ಪಕವಾಗಿದ್ದರೆ ಮನಸ್ಸು ಸಕ್ರಿಯವಾಗಿರುತ್ತದೆ. ಆಗ ಸಾಧನೆಯ ಹಾದಿ ತಲುಪಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ದೈಹಿಕ ವ್ಯಾಯಾಮದ ಕೊರತೆ, ಹೊರಾಂಗಣ ಕ್ರೀಡೆಗಳಲ್ಲಿ ಕುಗ್ಗುತ್ತಿರುವ ಆಸಕ್ತಿ ಹಾಗೂ ನಕಾರಾತ್ಮಕ ಹವ್ಯಾಸಗಳಿಗೆ ಬಲಿಯಾಗುತ್ತಿರುವ ಯುವ ಜನತೆಯ ಜೀವನ ಶೈಲಿ, ಮನುಷ್ಯನ ಆಯುಷ್ಯದ ನಿರ್ದಿಷ್ಟತೆಯನ್ನು ಅಳಿಸಿ ಹಾಕಿದೆ. ಯೋಗ, ಧ್ಯಾನಗಳು ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಹತೋಟಿಯಲ್ಲಿಡುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಂ.ಟಿ.ಬಾಲಕೃಷ್ಣ, ಉಪ ಪ್ರಾಂಶುಪಾಲ ದೇವರಾಜು, ಕೆಂಪೇಗೌಡ ಸೇರಿದಂತೆ ಶ್ರೀ ಸತ್ಯ ಸಾಯಿ ಸಮಿತಿ ಜಿಲ್ಲಾಧ್ಯಕ್ಷ ಮಹೇಂದ್ರ ಕುಮಾರ್, ಸಂಚಾಲಕ ಸುಭಾಷ್ ಚಂದ್ರ, ನಟರಾಜ ಬಾಬು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕೆ ಕೆ ಪಿ ಸುದ್ದಿ 02:

ಕನಕಪುರದ ರೂರಲ್ ಎಜುಕೇಶನ್ ಸೊಸೈಟಿ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!