ಬೈಕ್‌ ಗೆ ಮಿನಿ ಲಾರಿ ಡಿಕ್ಕಿ; ಇಬ್ಬರು ಸಾವು, ಹಾರಿ ಹೋದ ಒಬ್ಬನ ರುಂಡ

KannadaprabhaNewsNetwork |  
Published : May 30, 2025, 01:02 AM IST
52 | Kannada Prabha

ಸಾರಾಂಶ

ಪಿರಿಯಾಪಟ್ಟಣ ತಾಲೂಕಿನ ಹಿಟ್ಟನೆ ಹೆಬ್ಬಾಗಿಲು ಗ್ರಾಮದ ಬೈಕ್‌ ಸವಾರ ಶಂಕರ್ (30) ಎಂಬವನ ತಲೆ ಬುರುಡೆ ಹಾರಿ ಹೋಗಿದ್ದು, ಹಿಂಬದಿ ಸವಾರ ಶೇಖರ (22) ಬೈಕಿನಿಂದ ಬಿದ್ದು ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಬೈಕ್‌ಗೆ ಎದುರಿನಿಂದ ಬರುತ್ತಿದ್ದ ಮಿನಿ ಲಾರಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು, ಅಪಘಾತದ ತೀವ್ರತೆಗೆ ಒಬ್ಬನ ರುಂಡ ಹಾರಿ ಹೋಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಗೊರಹಳ್ಳಿಯ ಚೆನ್ನಪ್ಪಯ್ಯನ ಕೆರೆಯ ಏರಿಯ ತಿರುವಿನಲ್ಲಿ ಗುರುವಾರ ಜರುಗಿದೆ.

ಪಿರಿಯಾಪಟ್ಟಣ ತಾಲೂಕಿನ ಹಿಟ್ಟನೆ ಹೆಬ್ಬಾಗಿಲು ಗ್ರಾಮದ ಬೈಕ್‌ ಸವಾರ ಶಂಕರ್ (30) ಎಂಬವನ ತಲೆ ಬುರುಡೆ ಹಾರಿ ಹೋಗಿದ್ದು, ಹಿಂಬದಿ ಸವಾರ ಶೇಖರ (22) ಬೈಕಿನಿಂದ ಬಿದ್ದು ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ. ಮೃತಪಟ್ಟ ಯುವಕರು ಕಾರ್ಯನಿಮಿತ್ತ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮಕ್ಕೆ ತೆರಳುತ್ತಿದ್ದರು, ಇದೇ ಸಮಯದಲ್ಲಿ ಕೆರೆಯ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಮಿನಿ ಲಾರಿಗೆ ಬೈಕ್ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಯುವಕರ ಮೃತದೇಹಗಳನ್ನು ಪಿರಿಯಾಪಟ್ಟಣ ಸಾರ್ವಜನಿಕರ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ