- ಶಾಲಾ ಕೊಠಡಿ, ಬಿಸಿಯೂಟ ಸಿದ್ಧತೆಯ ಕೊಠಡಿಗಳು ಸ್ವಚ್ಛ, ಇಂದು ಮಕ್ಕಳಿಗೆ ವಿಶೇಷ ಸ್ವಾಗತ
- ಶಿಕ್ಷಕರು ಮನೆ, ಮನೆಗೆ ತೆರಳಿ ಮಕ್ಕಳನ್ನು ಕರೆ ತರಬೇಕೆಂದು
- ಶೇ.80 ರಷ್ಟು ಪುಸ್ತಕ ವಿತರಣೆ:- ತಳಿರು ತೋರಣ, ರಂಗೋಲಿ ಬಿಡಿಸಿ ಶಾಲೆಗಳನ್ನು ಅಲಂಕರಿಸಬೇಕು
- ಮೊದಲ ದಿನವೇ ಸಿಹಿ ಊಟದ ಜತೆ ಬೇಯಿಸಿದ ಮೊಟ್ಟೆ ವಿತರಣೆಗೆ ಸುತ್ತೋಲೆ
-
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಮೊದಲ ದಿನವಾದ ಮೇ 30 ರಂದು ಜಿಲ್ಲೆಯಲ್ಲಿ ಶಾಲೆಗಳು ಪುನಾರಂಭವಾಗುತ್ತಿವೆ. ಶಾಲೆಗೆ ತೆರಳಲು ಮಕ್ಕಳು ಸಿದ್ಧರಾಗಿದ್ದರೆ, ಬರುವ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲು ಶಿಕ್ಷಕರು ಸಿದ್ಧತೆ ಮಾಡಿ ಕೊಂಡಿದ್ದಾರೆ.
ಬಿಸಿಯೂಟಕ್ಕೆ ಅಗತ್ಯವಾದ ಪಡಿತರ, ಬೇಳೆ, ತರಕಾರಿ, ಮೊಟ್ಟೆ ತಂದಿಟ್ಟುಕೊಳ್ಳಬೇಕು. ಶುದ್ಧ ಕುಡಿಯುವ ನೀರು ಸಂಗ್ರಹಿಸ ಬೇಕು. ಅಡುಗೆ ಸಿಬ್ಬಂದಿ, ಸಿಹಿಯೂಟದ ಜತೆಗೆ ಮೊದಲ ದಿನವೇ ಬೇಯಿಸಿದ ಮೊಟ್ಟೆ ವಿತರಣೆ ಮಾಡಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.
ನಾಳೆ ಶಾಲೆಗೆ ಬರುವ ಮುಖ್ಯಶಿಕ್ಷಕರು ಮತ್ತು ಸಹ ಶಿಕ್ಷಕರು ಶಾಲೆಯನ್ನು ಸ್ವಚ್ಛಗೊಳಿಸಿ, ತಣಿರು, ತೋರಣಗಳಿಂದ ಶಾಲೆ ಯನ್ನು ಸಿಂಗರಿಸಲು ಮಹಿಳಾ ಶಿಕ್ಷಕರು ಶಾಲೆಯ ಮುಂಭಾಗ ರಂಗೋಲಿ ಬಿಡಿಸಲು ಸಕಲ ತಯಾರಿಸಿ ನಡೆಸುತ್ತಿದ್ದು, ಬಿಸಿಯೂಟ ಕಾರ್ಯಕರ್ತೆಯರು ಅಡುಗೆ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಿ, ಸಿಹಿಯೂಟ ತಯಾರಿಸಲು ಅಣಿಯಾಗಿದ್ದಾರೆ. ಮೇ. 30 ರಂದು ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಕೆಲವು ಶಾಲೆಯಲ್ಲಿ ಗುಲಾಬಿಹೂವು ನೀಡಿ ಸ್ವಾಗತಿಸಿದರೆ ಮತ್ತೆ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ವಾಗತಿಸಲಿದ್ದಾರೆ.ಶೇ.80 ರಷ್ಟು ಪುಸ್ತಕ ವಿತರಣೆ:
ಚಿಕ್ಕಮಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ 6,64,585 ಪುಸ್ತಕಗಳನ್ನು ಉಚಿತವಾಗಿ, 3,66,246 ಪುಸ್ತಕಗಳನ್ನು ಮಾರಾಟ ಮೂಲಕ ವಿತರಿಸಲಾಗುತ್ತಿದೆ. ಶೇ. 62 ರಷ್ಟು ಪುಸ್ತಕಗಳನ್ನು ಉಚಿತವಾಗಿ, ಶೇ.69.36 ರಷ್ಟು ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತಿದೆ. ಒಂದು ಕಂಪನಿ ಮಾತ್ರ ಬಟ್ಟೆ ಸರಬರಾಜು ಮಾಡಿರುವುದರಿಂದ ಪ್ರತಿ ತಾಲೂಕಿಗೆ ಅರ್ಧ ದಷ್ಟು ಸಮವಸ್ತ್ರ ವಿತರಣೆಯಾಗಿದೆ. ಒಟ್ಟಾರೆ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಶಾಲೆಗೆ ಬರಮಾಡಿಕೊಳ್ಳಲು ಶಾಲೆಗಳಲ್ಲಿ ಸಕಲ ಸಿದ್ಧತೆಗಳು ನಡೆದಿವೆ.