ಕನ್ನಡಪ್ರಭ ವಾರ್ತೆ ರಾಯಚೂರು
ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಬೋಸರಾಜು ಅವರು ಭೂಮಿಪೂಜೆಯನ್ನು ಬುಧವಾರ ನೆರವೇರಿಸಿದರು.ಸುಗಮ ಸಂಚಾರಕ್ಕಾಗಿ ರಾಯಚೂರು ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವ ರಾಯಚೂರು-ಲಿಂಗಸಗೂರು ರಸ್ತೆಯ ನಗರದ ಅಸ್ಕಿಹಾಳದಿಂದ ಪವರ್ ಗ್ರಿಡ್ ವರೆಗೆ ಸುಮಾರು 4 ಕಿ.ಮೀ. 24 ಕೋಟಿ ರು.ವೆಚ್ಚದಲ್ಲಿ ಚತುಷ್ಪಥ ರಸ್ತೆ ಕಾಮಗಾರಿಗೆ ಸಚಿವ ಚಾಲನೆ ನೀಡಿದರು.
ಸಮಾರಂಭದ ಸಾನಿಧ್ಯವಹಿಸಿದ್ದ ಕಿಲ್ಲೇ ಬೃಹನ್ಮಠದ ಶಾಂತಮ್ಮ ಶಿವಾಚಾರ್ಯರು ಆಶೀರ್ವಚನ ನೀಡಿದರು.ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಕಾಂಗ್ರೆಸ್ ಮುಖಂಡರಾದ ರವಿ ಬೋಸರಾಜು, ಮೊಹಮ್ಮದ್ ಶಾಲಾಂ, ಜಯಣ್ಣ, ಕೆ.ಶಾಂತಪ್ಪ ಬಷಿರುದ್ದೀನ್, ಸಾಜಿದ್ ಸಮೀರ್ ಸೇರಿ ಅನೇಕರು ಉಪಸ್ಥಿತರಿದ್ದರು.ಮಿಲೇನಿಯಮ್ ಗಾರ್ಡನ್ ಅಭಿವೃದ್ಧಿ:
ನಗರದ ನಿಜಲಿಂಗಪ್ಪ ಕಾಲೋನಿಯ ಮಿಲೇನಿಯಂ ಗಾರ್ಡನ್ ಅಭಿವೃದ್ಧಿಗೆ ಲೋಕೋಪಯೋಗಿಯಿಂದ 50 ಲಕ್ಷ ರು. ವೆಚ್ಚದ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿ ಸಿದರು. ಈ ವೇಳೆ ಮಾತನಾಡಿದ ಅವರು, ನಗರದಲ್ಲಿರುವ ವಿವಿಧ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ನಾವೆಲ್ಲರೂ ಉದ್ಯಾನವನಗಳನ್ನು ನಮ್ಮ ಮನೆಯಂತೆ ಕಂಡು ಸಂರಕ್ಷಿಸಬೇಕಾಗಿದೆ ಎಂದರು.ಹೈಮಾಸ್ಟ್ ದೀಪಗಳಿಗೆ ಚಾಲನೆ:
ರಾಯಚೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಡವಾಟಿ ಬಿಜಿನೆಗೆರಾ, ಮಲಿಯಾಬಾದ್‌ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸ ಲಾದ ಹೈಮಾಸ್ಟ್ ದೀಪಗಳನ್ನು ಬಟನ್ ಆನ್ ಮಾಡುವ ಮೂಲಕ ಸಚಿವರು ಚಾಲನೆ ನೀಡಿದರು. ಬಳಿಕ ಸಚಿವರು ಮಾತನಾಡಿ, ರಾಯಚೂರು ನಗರ ಪ್ರದೇಶದಲ್ಲಿ ಈಗಾಗಲೇ ವಿವಿಧ ಬಡಾವಣೆಗಳಲ್ಲಿ 100 ವ್ಯಾಟ್ ನ ಎಲ್ಇಡಿ ಲೈಟ್‌ಗಳನ್ನು ಅಳವಡಿಸಲಾಗುತ್ತಿದೆ. ಅಂತೆ ರಾಯಚೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿಯೂ ಹೈಮಾಸ್ಟ್ ದೀಪ ನಿರ್ಮಿಸಲಾಗಿದೆ ಎಂದರು.