ಕನ್ನಡಪ್ರಭ ವಾರ್ತೆ ಮೇಲುಕೋಟೆ
ನಂತರ ಸಚಿವರು ಮಾತನಾಡಿ, ತಿರುಪತಿಗೆ ಸಮಾನ ಮಹತ್ವವಿರುವ ಶ್ರೀಕ್ಷೇತ್ರ ಮೇಲುಕೋಟೆಯನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾರ್ಗದರ್ಶನದಲ್ಲಿ ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಜಿಲ್ಲಾಡಳಿತದಿಂದ ನೀಲನಕ್ಷೆ ಪಡೆದು ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ ಎಂದರು.
ಸಚಿವರಾಗಿ ಅಧಿಕಾರ ಸ್ವೀಕರಿಸಿ ಜಿಲ್ಲೆಗೆ ಆಗಮಿಸಿದ್ ಅವರು ತಮ್ಮ ಮನೆದೇವರಾದ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು. ಸಚಿವರನ್ನು ದೇವಾಲಯದ ಆಡಳಿತಾಧಿಕಾರಿ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ದೇಗುಲದ ಇಒ ಶೀಲ ಮತ್ತು ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಸ್ವಾಗತಿಸಿದರು.ನಂತರ ಶಾತ್ತುಮೊರೈನಲ್ಲಿ ಪಾಲ್ಗೊಂಡು ಮಹಾರಾಜರಿಗೆ ಸಲ್ಲುವ ಗೌರವವನ್ನು ಸ್ವೀಕರಿಸಿದರು. ಯದುಗಿರಿ ನಾಯಕಿ ಅಮ್ಮನವರು, ರಾಮಾನುಜರ ದರ್ಶನ ಪಡೆದ ನಂತರ ಪ್ರತಿ ಭಾರಿಯಂತೆ ಯತಿರಾಜದಾಸರ್ ಗುರುಪೀಠಕ್ಕೆ ತೆರಳಿ ವಿಜಯಲಕ್ಷ್ಮಿ ಅಮ್ಮನವರ ದರ್ಶನ ಪಡೆದು ಶ್ರೀನಿವಾಸನರಸಿಂಹನ್ ಗುರೂಜಿ ಆಶೀರ್ವಾದ ಪಡೆದರು.
ಮೇಲುಕೋಟೆ: ಮನೆದೇವರ ದರ್ಶನಕ್ಕೆ ಮೇಲುಕೋಟೆಗೆ ಆಗಮಿಸಿದ್ದ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭವ್ಯವವಾಗಿ ಸ್ವಾಗತಿಸಿದರು.
ಮೇಲುಕೋಟೆ ಕೃಷಿಪತ್ತಿನ ಸಂಘದ ಅಧ್ಯಕ್ಷ ಎಂಬಿ ಯೋಗನರಸಿಂಹೇಗೌಡ, ಯುವಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಗಂಗಾಧರ್, ರಾಂಪುರ ರಮೇಶ್ ಸೇರಿದಂತೆ ಹಲವರು ಮುಖಂಡರು ಇದ್ದರು.