ಕನ್ನಡಪ್ರಭ ವಾರ್ತೆ ಬೀದರ್
ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದಲ್ಲಿ ಆಯೋಜಿಸಲಾದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಕೆಲವೊಂದು ಕುಟುಂಬಗಳು ಅಭಿವೃದ್ಧಿಯಾದವು, ಅದರಲ್ಲಿ ಭಾಲ್ಕಿಯ ಶಾಸಕರ ಕುಟುಂಬವೂ ಒಂದು. ಬೇರೆಯವರನ್ನು ಬೆಳೆಯಲು ಇವರು ಎಂದಿಗೂ ಬಿಟ್ಟಿಲ್ಲ. ಕೇವಲ ತನ್ನ ಕುಟುಂಬದ ಅಭಿವೃದ್ಧಿ ಮಾತ್ರ ಮಾಡಿಕೊಂಡಿದ್ದಾರೆ ಎಂದು ಕುಟುಂಬ ರಾಜಕಾರಣದ ವಿರುದ್ಧ ಹರಿಹಾಯ್ದರು.
ದೇಶಕ್ಕೆ ಸ್ವಾತಂತ್ರ ಬಂದಾಗ ದೇಶದ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲರು ಆಗಬೇಕಿತ್ತು, ಆದರೆ ದುರ್ದೈವದಿಂದ ಜವಾಹರಲಾಲ್ ನೆಹರು ಪ್ರಧಾನಿಯಾದರು, ನೆಹರು ಪ್ರಧಾನಿಯಾದ ಮೇಲೆ ದೇಶ ಅಭಿವೃದ್ಧಿಯಾಗಲಿಲ್ಲ ಎಂದು ನುಡಿದರು.ಕಳೆದ 60 ವರ್ಷಗಳಿಂದ ಭಾಲ್ಕಿಯಲ್ಲಿ ಒಂದೇ ಕುಟುಂಬದಿಂದ ತಂದೆಯಿಂದ ಹಿಡಿದು ಮಕ್ಕಳವರೆಗೆ ಅಧಿಕಾರದಲ್ಲಿದ್ದರು. ಬಡವರ ಮಕ್ಕಳಿಗೆ ಆಟವಾಡಲು ಒಂದು ಕ್ರೀಡಾಂಗಣ ನಿರ್ಮಿಸಲು ಆಗಿಲ್ಲ. ಭಾಲ್ಕಿಯಲ್ಲಿ ಸರ್ಕಾರಿ ಕಾಲೇಜುಗಳಿಲ್ಲ, ಸರ್ಕಾರಿ ವಸತಿ ನಿಲಯಗಳಿಲ್ಲ, ಇರುವ ವಸತಿ ನಿಲಯಗಳು ಖಾಸಗಿ ಕಟ್ಟಡದಲ್ಲಿವೆ. ಈ ಪರಿಸ್ಥಿತಿ ಭಾಲ್ಕಿಯಲ್ಲಿರುವುದಕ್ಕೆ ಕಾರಣ, ನಮ್ಮ ಪಕ್ಷದಿಂದ ಶಾಸಕರು ಇಲ್ಲದಿರುವದರಿಂದ ಎಂದು ತಿಳಿಸಿದರು.
ಈ ಕ್ಷೇತ್ರಕ್ಕೆ ನನ್ನನ್ನು 3ನೇ ಬಾರಿಗೆ ಸಂಸದನಾಗಿ ಮಾಡುವುದರೊಂದಿಗೆ, ಮೋದಿ ಅವರಿಗೆ 3ನೇ ಬಾರಿಗೆ ದೇಶದ ಪ್ರಧಾನಿಯನ್ನಾಗಿ ಮಾಡಲು ಎಲ್ಲಾ ಜನರು ಆಶೀರ್ವಾದ ಮಾಡುವಂತೆ ಮನವಿಸಿ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಯಡಿ ಸಾಲ ಪಡೆದ ಫಲಾನುಭವಿಗಳಿಗೆ ಬ್ಯಾಂಕ್ ಚೆಕ್, ಉಜ್ವಲ್ ಯೋಜನೆಯಡಿ ಗ್ಯಾಸ ವಿತರಣೆ, ಸುಕನ್ಯಾ ಸಮೃದ್ಧಿ ಹಾಗೂ ಇತರೆ ಯೋಜನೆಗಳಡಿಯ ಪಾಸ್ ಬುಕ್ ವಿತರಣೆ ಮಾಡಿದರು.