ಸವದತ್ತಿ ತಾಲೂಕಿನ ಶಿರಸಂಗಿಯ ಸುಪ್ರಸಿದ್ಧ ಯುಗಾದಿ ಜಾತ್ರಾ ಮಹೋತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಾಲ್ಗೊಂಡು ಶಕ್ತಿದೇವತೆ ಶ್ರೀ ಕಾಳಿಕಾದೇವಿಯ ದರ್ಶನ ಪಡೆದರು.
ಕನ್ನಡಪ್ರಭ ವಾರ್ತೆ ಬೆಳಗಾವಿ ಸವದತ್ತಿ ತಾಲೂಕಿನ ಶಿರಸಂಗಿಯ ಸುಪ್ರಸಿದ್ಧ ಯುಗಾದಿ ಜಾತ್ರಾ ಮಹೋತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಾಲ್ಗೊಂಡು ಶಕ್ತಿದೇವತೆ ಶ್ರೀ ಕಾಳಿಕಾದೇವಿಯ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಸಚಿವರು, ಕಳೆದ 25 ವರ್ಷಗಳ ಶ್ರಮ ಇಂದು ನನ್ನನ್ನು ಮಂತ್ರಿ ಮಾಡಿದೆ. ನಾವು ಎಷ್ಟು ದಿನ ಬದುಕುತ್ತೀವಿ ಅನ್ನೋದು ಮುಖ್ಯ ಅಲ್ಲ. ಹೇಗೆ ಬದುಕುತ್ತೀವಿ ಅನ್ನೋದು ಮುಖ್ಯ. ಜನರ ಒಳಿತಿಗಾಗಿ ಹೋರಾಟ ಮಾಡುತ್ತಿರುವೆ. ಸಮಾಜ ಸೇವೆಯೇ ನನ್ನ ಮುಖ್ಯ ಗುರಿ. ವಿಶ್ವಕರ್ಮ ಸಮಾಜದ ಜೊತೆಯಲ್ಲಿ ಎಂದಿಗೂ ನಾನಿರುವೆ ಎಂದು ಭರವಸೆ ನೀಡಿದರು.
ಇದೇ ವೇಳೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸಚಿವರು ಹಾಗೂ ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಸನ್ಮಾನಿಸಲಾಯಿತು. ಅರೇಮಾದನಹಳ್ಳಿಯ ಸುಜ್ಞಾನ ಗುರುಪೀಠದ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ, ಚಿಕ್ಕುಂಬಿಯ ಅಭಿಮವ ನಾಗಲಿಂಗ ಸ್ವಾಮೀಜಿ,ಜಗದ್ಗುರು ಮಳೆರಾಜೇಂದ್ರ ಸ್ವಾಮೀಜಿ ಮಠದ ಜಗನ್ನಾಥ ಸ್ವಾಮೀಜಿ, ಶಿರಸಂಗಿ ವಿಶ್ವ ಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೊ.ಪಿ.ಬಿ.ಬಡೀಗೇರ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.