ಗದಗ:
ಈ ಸಂದರ್ಭದಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ ಸೇರಿದಂತೆ ಹಿರಿಯ ಅಧಿಕಾರಿಗಳು ಗ್ರಾಮಸ್ಥರು ಇದ್ದರು.ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಲಕ್ಕುಂಡಿ ಪ್ರಕರಣ
ಗದಗ: ದಿನಕ್ಕೊಂದು ಹೇಳಿಕೆ, ಕ್ಷಣಕ್ಕೊಂದು ಮಾತು, ಸಿಕ್ಕ ಬಂಗಾರವೆಷ್ಟು, ಅಧಿಕಾರಿಗಳು ಹೇಳುವುದೆಷ್ಟು, ಯಾವುದಕ್ಕೂ ತಾಳೆಯಾಗುತ್ತಿಲ್ಲ. ಪ್ರತಿದಿನವೂ ಇದರದ್ದೇ ಚರ್ಚೆ... ಹೀಗೆ ನಡೆಯುತ್ತಿರುವ ವಿದ್ಯಮಾನಗಳ ಮಧ್ಯೆಯೇ ಲಕ್ಕುಂಡಿ ನಿಧಿ ಪತ್ತೆ ಘಟನೆಯನ್ನು ಹೋಲುವ ರೀಲ್ಸ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.ಬಂಗಾರದ ಆಭರಣ ಸಿಕ್ಕ ತಕ್ಷಣವೇ ಆ ಕುಟುಂಬವು ನಡೆದುಕೊಂಡ ರೀತಿ, ಅಲ್ಲಿಗೆ ಗ್ರಾಪಂ ಸದಸ್ಯರು, ಮುಖಂಡರು ಆಗಮಿಸುವ ಪರಿ, ಸರ್ಕಾರಿ ಮಹಿಳಾ ಅಧಿಕಾರಿಯೋರ್ವರು ಬಂದು ಆಭರಣಗಳನ್ನು ಸರ್ಕಾರಕ್ಕೆ ಮರಳಿಸಿದ ವ್ಯಕ್ತಿಗೆ ಸನ್ಮಾನ ಮಾಡುವುದು ಸೇರಿದಂತೆ ಪ್ರತಿಯೊಂದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.ಆದರೆ ರೀಲ್ಸ್ ಮುಗಿವ ಸಂದರ್ಭದಲ್ಲಿ ಆಭರಣಗಳನ್ನು ಸರ್ಕಾರಕ್ಕೆ ನೀಡಿದ ಯುವಕನಿಗೆ ಬಾಳೆಹಣ್ಣು ನೀಡಿ ಸನ್ಮಾನಿಸಿದ ನಂತರ ಇದು ಸರ್ಕಾರದ ಬಾಳೆಹಣ್ಣು ತಿನ್ನಿರಿ. ನಾನು ಸರ್ಕಾರಕ್ಕೆ ಆಭರಣ ನೀಡಿದ್ದಕ್ಕಾಗಿ ಸರ್ಕಾರ ನನಗೆ ಕೊಟ್ಟ ಬಾಳೆಹಣ್ಣು ನೀವು ತಿನ್ನಿ ಎಂದು ಆ ಯುವಕ ಅಲ್ಲಿದ್ದ ಎಲ್ಲರನ್ನೂ ಕರೆದು ಕೊಡುವ ರೀತಿ, ಈ ಘಟನೆಯಲ್ಲಿ ಸ್ಥಳೀಯ ಮುಖಂಡರು, ಜಿಲ್ಲಾಡಳಿತ ಮತ್ತು ಸರ್ಕಾರ ನಡೆದುಕೊಂಡ ರೀತಿಯನ್ನು ಅಣಕಿಸುವಂತೆ ವ್ಯಕ್ತವಾಗುತ್ತಿದ್ದು, ಪ್ರಾಮಾಣಿಕತೆ ಮರೆದ ಕುಟುಂಬಕ್ಕೆ ಕೊನೆಗೆ ಸಿಕ್ಕಿದ್ದು ಕೇವಲ ಸನ್ಮಾನ, ಸಮಾಧಾನದ ಎರಡು ಮಾತು ಹಾಗೂ ಕೇವಲ ಬಾಳೆಹಣ್ಣು ಎನ್ನುವುದನ್ನು ಅತ್ಯಂತ ವಿಡಂಬನಾತ್ಮಕವಾಗಿ ಚಿತ್ರಿಸಲಾಗಿದೆ.ಇನ್ನೊಂದು ವಿಡಿಯೋದಲ್ಲಿಯೂ ಓರ್ವ ಬಡವ ಮಳೆಯಾಗಿ ನನ್ನ ಮನೆ ಬಿದ್ದಿದೆ ಬನ್ನಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಹೋಗುತ್ತಾಳೆ. ಆದರೆ ಜಿಲ್ಲಾಧಿಕಾರಿಗಳು ಇದಕ್ಕೆಲ್ಲಾ ಈಗ ಸಮಯವಿಲ್ಲ ಹೋಗಿ ಎಂದು ಹೇಳಿ ಕಳಿಸುತ್ತಾರೆ. ಬಿದ್ದ ಮನೆಯಲ್ಲಿಯೇ ಬಂಗಾರ ಸಿಕ್ಕಿದೆ ಎಂದು ಬಡವ ಹೇಳುತ್ತಿದ್ದಂತೆ ಜಿಲ್ಲಾಡಳಿತವೇ ಖಾಲಿ ಚೀಲವೊಂದನ್ನು ಹಿಡಿದುಕೊಂಡು ಓಡೋಡಿ ಬರುವ ವಿಡಿಯೋ ಕೂಡಾ ಭಾರೀ ವೈರಲ್ ಆಗಿದ್ದು, ಬಡವರ ವಿಷಯದಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಪಾದಿಸಿದ್ದಾರೆ.