ಬಡಕುಟುಂಬಕ್ಕೆ ₹5 ಲಕ್ಷ ನೆರವು ನೀಡಿದ ಸಚಿವ ಜಮೀರ್

KannadaprabhaNewsNetwork |  
Published : May 26, 2025, 12:43 AM IST
25ಕೆಡಿವಿಜಿ3, 4, 5, 6-ದಾವಣಗೆರೆ ಬಾಪೂಜಿ ಎಂಬಿಎ ಹೆಲಿಪ್ಯಾಡ್‌ನಲ್ಲಿ ಭಾನುವಾರ ಬಡ ಮುಸ್ಲಿಂ ಕುಟುಂಬವೊಂದರ ಮಕ್ಕಳ ಮದುವೆ, ಜೀವನ ನಿರ್ವಹಣೆಗೆ 5 ಲಕ್ಷ ರು. ನೋಟಿನ ಕಂತೆಗಳನ್ನು | Kannada Prabha

ಸಾರಾಂಶ

ಆಪ್ತರೊಬ್ಬರ ಮಕ್ಕಳ ಮದುವೆಗೆಂದು ನಗರಕ್ಕೆ ಆಗಮಿಸಿದ್ದ ವಕ್ಫ್ ಸಚಿವ ಜಮೀರ್ ಅಹಮ್ಮದ್ ತಮ್ಮ ಬಳಿ ನೆರವು ಯಾಚಿಸಿದ ಬಡ ಕುಟುಂಬವೊಂದರ ಮಕ್ಕಳ ಮದುವೆ ಖರ್ಚಿಗೆಂದು ಸ್ಥಳದಲ್ಲೇ ₹5 ಲಕ್ಷ ಆರ್ಥಿಕ ಸಹಾಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

- ಮಕ್ಕಳ ಮದುವೆ, ಜೀವನ ನಿರ್ವಹಣೆ ಕಷ್ಟವೆಂದು ಕಣ್ಣೀರಿಟ್ಟ ಕುಟುಂಬ - ಆಪ್ತ ಮುಖಂಡನ ಮಗನ ಮದುವೆಗೆಂದು ಬೆಂಗಳೂರಿನಿಂದ ಹೆಲಿಕಾಫ್ಟರ್‌ನಲ್ಲಿ ಬಂದಿದ್ದ ಸಚಿವ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಆಪ್ತರೊಬ್ಬರ ಮಕ್ಕಳ ಮದುವೆಗೆಂದು ನಗರಕ್ಕೆ ಆಗಮಿಸಿದ್ದ ವಕ್ಫ್ ಸಚಿವ ಜಮೀರ್ ಅಹಮ್ಮದ್ ತಮ್ಮ ಬಳಿ ನೆರವು ಯಾಚಿಸಿದ ಬಡ ಕುಟುಂಬವೊಂದರ ಮಕ್ಕಳ ಮದುವೆ ಖರ್ಚಿಗೆಂದು ಸ್ಥಳದಲ್ಲೇ ₹5 ಲಕ್ಷ ಆರ್ಥಿಕ ಸಹಾಯ ಮಾಡುವ ಮೂಲಕ ಗಮನ ಸೆಳೆದರು.

ನಗರದ ಪ್ರತಿಷ್ಠಿತ ಕನ್ವೆನ್ಷನ್‌ ಹಾಲ್‌ನಲ್ಲಿ ಆಪ್ತ ಮುಖಂಡರೊಬ್ಬರ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಹೆಲಿಕಾಫ್ಟರ್‌ನಲ್ಲಿ ಸಚಿವ ಜಮೀರ್ ಅಹಮ್ಮದ್ ಬಂದಿದ್ದರು. ಮದುವೆ ಮುಗಿಸಿಕೊಂಡು ಬಾಪೂಜಿ ಎಂಬಿಎ ಹೆಲಿಪ್ಯಾಡ್‌ಗೆ ವಾಪಸಾಗುತ್ತಿದ್ದರು. ಈ ವೇಳೆ ಬಡ ಮುಸ್ಲಿಂ ಕುಟುಂಬವೊಂದು ಸಚಿವರ ಬಳಿ ಮಕ್ಕಳ ಮದುವೆ ಹಾಗೂ ಕುಟುಂಬ ನಿರ್ವಹಣೆ ಬಗ್ಗೆ ಅಳಲನ್ನು ತೋಡಿಕೊಂಡಿತು.

ಬಡ ಕುಟುಂಬದ ಸಂಕಷ್ಟಕ್ಕೆ ಮರುಗಿದ ಸಚಿವ ಜಮೀರ್ ಅಹಮ್ಮದ್ ಸ್ಥಳದಲ್ಲೇ ₹5 ಲಕ್ಷ ಮೌಲ್ಯದ ನೋಟಿನ ಕಟ್ಟುಗಳನ್ನು ಬಡಕುಟುಂಬಕ್ಕೆ ಹಸ್ತಾಂತರಿಸಿದರು. ಈ ಹಣದಲ್ಲಿ ಮಕ್ಕಳ ಮದುವೆ ಮಾಡಿ, ನೆಮ್ಮದಿಯಿಂದ ಜೀವನ ನಿರ್ವಹಣೆ ಮಾಡುವಂತೆ ಶುಭ ಹಾರೈಸಿ, ಎಲ್ಲರ ಮನವನ್ನು ಗೆದ್ದರು. ಆರ್ಥಿಕ ನೆರವು ಕೋರಿದ ಕುಟುಂಬ ಕನಸು ಮನಸ್ಸಿನಲ್ಲಿ ಊಹಿಸಿರದಷ್ಟು ಹಣದ ನೆರವು ಜಮೀರ್‌ ನೀಡುವ ಮೂಲಕ ಮಾನವೀಯತೆ ಮೆರೆದರು.

- - - -25ಕೆಡಿವಿಜಿ3, 4, 5, 6:

ದಾವಣಗೆರೆ ಬಾಪೂಜಿ ಎಂಬಿಎ ಹೆಲಿಪ್ಯಾಡ್‌ನಲ್ಲಿ ಭಾನುವಾರ ಬಡ ಮುಸ್ಲಿಂ ಕುಟುಂಬವೊಂದು ಮಕ್ಕಳ ಮದುವೆ, ಜೀವನ ನಿರ್ವಹಣೆ ಸಂಕಷ್ಟ ತೋಡಿಕೊಂಡ ಹಿನ್ನೆಲೆ ಸಚಿವ ಜಮೀರ್ ಅಹಮ್ಮದ್ ₹5 ಲಕ್ಷ ನೋಟಿನ ಕಂತೆಗಳನ್ನು ನೀಡಿ ಮಾನವೀಯತೆ ಮೆರೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ