ಕನ್ನಡ ಪ್ರಭ ವಾರ್ತೆ ಮುಧೋಳ
ಭಾನುವಾರ ನಗರದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಚೇರಿಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಪಿಕೆಪಿಎಸ್ ಗಳು ರೈತರಿಗೆ ಕಡಿಮೆ ಬಡ್ಡಿದರಲ್ಲಿ ಸಾಲವನ್ನು ನೀಡುತ್ತವೆ. ಸಾಲ ಪಡೆದ ರೈತರು ನಿಗದಿತ ಅವಧಿಯೊಳಗಾಗಿ ಮರುಪಾವತಿ ಮಾಡಬೇಕು. ಆಗಲೇ ರೈತರು ಮತ್ತು ಪಿಕೆಪಿಎಸ್ ಗಳು ಉಳಿಯಲು ಸಾಧ್ಯ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಮಣ್ಣ ಎಸ್. ತಳೇವಾಡ, ಹಣಮಂತ ಆರ್. ನಿರಾಣಿ ಅತಿಥಿ ಸ್ಥಾನವಹಿಸಿ ಮಾತನಾಡಿ, ಪಿಕೆಪಿಎಸ್ ಗಳಿಗೆ ಬಿಡಿಸಿಸಿ ಬ್ಯಾಂಕ್ ನಿಂದ ಆರ್ಥಿಕ ಸಹಾಯ ನೀಡುತ್ತಿರುವುದರಿಂದ ಅವು ಸಕ್ರೀಯವಾಗಿ ಕೆಲಸ ಮಾಡುತ್ತಲಿವೆ ಎಂದು ಹೇಳಿದರು.ಸಹಕಾರಿ ಧುರೀಣ ಡಾ.ಟಿ.ವಿ. ಅರಳಿಕಟ್ಟಿ, ಆರ್.ಎಂ. ಪಾಟೀಲ ಸಾಂದರ್ಭಿಕವಾಗಿ ಮಾತನಾಡಿ, ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರ ಜೀವನಾಡಿಗಳಾಗಿವೆ ಎಂದರು.ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಹ.ಕದಮ್ ಅಧ್ಯಕ್ಷತೆ ವಹಿಸಿದ್ದರು. ಮುಧೋಳ ಗವಿಮಠ-ವಿರಕ್ತಮಠದ ಬಸಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮರೇಗುದ್ದಿ ಅಡವಿಮಠದ ನಿರುಪಾದೀಶ್ವರ ಸ್ವಾಮೀಜಿ, ರೂಗಿ ಅಡವಿ ಆಶ್ರಮದ ನಿತ್ಯಾನಂದ ಸ್ವಾಮಿಜಿ, ಬಂಡಿಗಣಿ ಮಠದ ಅನ್ನದಾನೇಶ್ವರ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು.
ಮಾರುತಿ ಮೋರೆ ಸ್ವಾಗತಿಸಿದರು. ಅನೀಲ ಕುಮಕಾಲೇ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಗೀತಾ ದಾಶ್ಯಾಳ ನಿರೂಪಿಸಿದರು, ಅಶೋಕ ಕುಳಲಿ ವಂದಿಸಿದರು.
ಪಿಕೆಪಿಎಸ್ ಗಳು ಸದೃಢವಾಗಿ ಬೆಳೆಯಬೇಕಾದರೆ ಆಡಳಿತ ಮಂಡಳಿಯವರು ಸಮಾನಮನಸ್ಕರಾಗಿ ಕೆಲಸ ಮಾಡಬೇಕು. ಸಿಬ್ಬಂದಿ ಮತ್ತು ರೈತರ ಜೊತೆ ಉತ್ತಮ ಸಂಬಂಧ, ಸಹಕಾರ ಹೊಂದಿರಬೇಕು.-ಆರ್.ಬಿ. ತಿಮ್ಮಾಪೂರ ಜಿಲ್ಲಾ ಉಸ್ತುವಾರಿ ಸಚಿವರು