ಶಿಗ್ಗಾಂವಿ: ಯಾವತ್ತೂ ಅಧಿಕಾರವನ್ನು ಬಯಸಿಲ್ಲ, ಸರಳ ಸಜ್ಜನಿಕೆಯಿಂದ ರಾಜಕಾರಣದಲ್ಲಿ ಹೆಸರು ಮಾಡುವ ಮೂಲಕ ಪ್ರಧಾನ ಮಂತ್ರಿಯೊಂದಿಗೆ ದೇಶವನ್ನು ಮುನ್ನಡೆಸಿಕೊಂಡು ಹೋಗುವ ಬಹು ದೊಡ್ಡ ಜವಾಬ್ದಾರಿ ಹೊತ್ತ ನಾಯಕ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಂದು ಹುಬ್ಬಳ್ಳಿಯ ಎಂ.ಎಂ. ಜೋಶಿ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ಶ್ರೀನಿವಾಸ ಜೋಶಿ ಹೇಳಿದರು.
ಸೂಕ್ತ ವ್ಯಕ್ತಿಗಳಿಗೆ ಸೂಕ್ತ ಸ್ಥಳದಲ್ಲಿ ಅವಶ್ಯಕ ವ್ಯವಸ್ಥೆಗಳನ್ನು ಮಾಡಿದರೆ ಮಾತ್ರ ಸಮಾಜದಲ್ಲಿ ಒಂದು ಒಳ್ಳೆಯ ಕಾರ್ಯ ಮಾಡಿದಂತಾಗುತ್ತದೆ ಎಂದರು. ಪ್ರಹ್ಲಾದ ಜೋಶಿ ಸಮತಾ ಟ್ರಸ್ಟ್ ವತಿಯಿಂದ ಇದುವರೆಗೆ ೨೫೦ಕ್ಕೂ ಹೆಚ್ಚು ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಿ, ಅದರಲ್ಲಿ ಹತ್ತು ಸಾವಿರ ಜನರಿಗೆ ಉಚಿತ ಚಿಕಿತ್ಸೆ ನೀಡಿ, ಅಂಧರ ಪಾಲಿಗೆ ಬೆಳಕಾಗಿದ್ದಾರೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಶಶಿಧರ ಹೊಣ್ಣನವರ ಮಾತನಾಡಿದರು.ಹುಬ್ಬಳ್ಳಿಯ ಎಂ.ಎಂ. ಜೋಶಿ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ಶ್ರೀನಿವಾಸ ಜೋಶಿ, ಮುಖಂಡರಾದ ನರಹರಿ ಕಟ್ಟಿ, ಗಂಗಾಧರ ಸಾತಣ್ಣವರ, ಶಿವಪ್ರಸಾದ ಸೂರಗಿಮಠ, ತಿಪ್ಪಣ್ಣ ಸಾತಣ್ಣವರ, ಕಲ್ಲಪ್ಪ ಮಾರಂಬೀಡ, ಡಾ. ಮಲ್ಲೇಶಪ್ಪ ಹರಿಜನ, ಅನಿಲ ಸಾತಣ್ಣವರ, ಲಕ್ಷೀ ತೋಟದ, ಸಚಿನ್ ಮಡಿವಾಳರ, ಯಶೋದಾ ಪಾಟೀಲ ಉಪಸ್ಥಿತರಿದ್ದರು.
ಗಂಗಾಧರ ಸಾತಣ್ಣವರ, ಎಂ.ಎನ್. ಹೊನಕೇರಿ, ಕೆಎಂಎಫ್ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ, ಮಲ್ಲೇಶಪ್ಪ ಹರಿಜನ, ಬಿಜೆಪಿ ಯುವ ಮುಖಂಡ ನರಹರಿ ಕಟ್ಟಿ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಯಶೋದಾ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಲಕ್ಷ್ಮವ್ವ ತೋಟದ, ಪುರಸಭೆಯ ಮಾಜಿ ಅಧ್ಯಕ್ಷ ಶಿವಪ್ರಸಾದ ಸುರಗಿಮಠ, ವಿಎಸ್‌ಎಸ್ ಸಂಘದ ಕಾರ್ಯನಿವಾಹಕ ಎಂ.ಎಸ್. ಪಾಟೀಲ, ಹನುಮಂತಪ್ಪ ಹರಿಜನ, ಕಲ್ಲಪ್ಪ ಮಾರಿಂಬಡ, ಮಹಾವೀರ ಧಾರವಾಡ, ಕರೆಪ್ಪ ಕಟ್ಟಿಮನಿ, ಬಸವರಾಜ ನಾರಾಯಣಪುರ, ಯಲ್ಲಪ್ಪ ಶಿಂದೆ, ಅನಿಲ್ ಸಾತಣ್ಣವರ, ಬಾಹುಬಲಿ ಅಕ್ಕಿ, ಸಂತೋಷ ಹುಣಶ್ಯಾಳ, ನಿಂಗಪ್ಪ ಹರಿಜನ, ರಮೇಶ ಸಾತಣ್ಣವರ ಇದ್ದರು.ಆಶಾ ಕಾರ್ಯಕರ್ತೆಯರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಪತ್ರಕರ್ತರು, ಪೌರಸೇವಾ ನೌಕರರನ್ನು ಸೇರಿದಂತೆ ಹಲವರನ್ನು ಗೌರವಿಸಲಾಯಿತು.
ರೇಣುಕನಗೌಡ ಪಾಟೀಲ ಸ್ವಾಗತಿಸಿದರು. ರಮೇಶ ಓಲೇಕಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.