ಅಶೋಕ ಬಾಗಮಾರ ಮಾತನಾಡಿ, ಡಿ. ೨೫ರಿಂದ ೨೮ರ ವರೆಗೆ ೨ನೇ ವಿಶ್ವ ಆಯುರ್ವೇದ ಸಮ್ಮೇಳನ ನಡೆಯಲಿದೆ ಎಂದರು.
ಗಜೇಂದ್ರಗಡ: ಬೆಂಗಳೂರಿನಲ್ಲಿ ನಡೆಯುವ ೨ನೇ ವಿಶ್ವ ಆಯುರ್ವೇದ ಸಮ್ಮೇಳನದ ಹಿನ್ನೆಲೆ ಪಟ್ಟಣಕ್ಕೆ ಗುರುವಾರ ಸಂಜೆ ಆಗಮಿಸಿದ ಆಯುರ್ವೇದ ರಥಯಾತ್ರೆಗೆ ಸ್ಥಳೀಯ ಭಗವಾನ್ ಮಹಾವೀರ ಆಯುರ್ವೇದಿಕ್ ಕಾಲೇಜಿನ ಬಳಿ ಭವ್ಯವಾಗಿ ಸ್ವಾಗತಿಸಲಾಯಿತು.
ಈ ವೇಳೆ ಭಗವಾನ್ ಮಹಾವೀರ ಸಮಿತಿಯ ಅಧ್ಯಕ್ಷ ಅಶೋಕ ಬಾಗಮಾರ ಮಾತನಾಡಿ, ಡಿ. ೨೫ರಿಂದ ೨೮ರ ವರೆಗೆ ೨ನೇ ವಿಶ್ವ ಆಯುರ್ವೇದ ಸಮ್ಮೇಳನ ನಡೆಯಲಿದೆ. ೨೩ ವರ್ಷದ ಬಳಿಕ ನಡೆಯುತ್ತಿರುವ ದ್ವಿತೀಯ ಸಮ್ಮೇಳನದಲ್ಲಿ ಅಮೆರಿಕ, ಜಪಾನ್ ಸೇರಿ ವಿಶ್ವದ ೫೦ಕ್ಕೂ ಅಧಿಕ ಉಪನ್ಯಾಸಕರು ಹಾಗೂ ೬ ಸಾವಿರಕ್ಕೂ ಅಧಿಕ ಆಯುರ್ವೇದ ವೈದ್ಯರು, ಉಪನ್ಯಾಸಕರು ಹಾಗೂ ತಜ್ಞರು ಪಾಲ್ಗೊಳ್ಳಲಿದ್ದಾರೆ. ವಿವಿಧ ರೋಗಗಳ ಚಿಕಿತ್ಸೆ ಅನುಕೂಲತೆ ಕುರಿತ ಅಭಿಪ್ರಾಯ ಮಂಡನೆಯಾಗಲಿದೆ. ಅಲ್ಲದೆ ಸಂವಾದ, ಗೋಷ್ಠಿ ಹಾಗೂ ತಾಂತ್ರಿಕ ತರಬೇತಿ ಕಾರ್ಯಗಾರ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.ಇದಕ್ಕೂ ಮುನ್ನ ಪಟ್ಟಣದ ಎಪಿಎಂಸಿ ಎದುರು ಧ್ವನಂತರಿ ಜ್ಯೋತಿ, ಆಯುರ್ವೇದ ರಥಯಾತ್ರೆ ಆಗಮಿಸಿದಾಗ ಕಾಲೇಜಿನ ವಿದ್ಯಾರ್ಥಿಗಳು ಜೈಕಾರ ಹಾಕುವ ಮೂಲಕ ಸ್ವಾಗತಿಸಿದ ಬಳಿಕ ರಥಯಾತ್ರೆಯು ಕಾಲಕಾಲೇಶ್ವರ ವೃತ್ತ, ಜೋಡುರಸ್ತೆ ಮಾರ್ಗವಾಗಿ, ಶಿವಾಜಿ ವೃತ್ತದ ಮಾರ್ಗವಾಗಿ ಕಾಲೇಜು ತಲುಪಿತು. ಸಂಸ್ಥೆಯ ಅಜೀತ ಬಾಗಮಾರ, ವರ್ಧಮಾನ ಬಾಗಮಾರ, ಪ್ರಾಚಾರ್ಯ ಡಾ. ಎನ್.ಎಚ್. ಕುಲಕರ್ಣಿ, ವೈದ್ಯರಾದ ಎಂ.ಬಿ. ಗುಗ್ಗರಿ, ಜಿ.ಎಸ್. ಕಂಠಿ, ಕಮಲಾಕ್ಷಿ ಅಂಗಡಿ, ಶಾರದಾ ಕಂಪ್ಲಿಕರ, ಪಿ.ಕೆ. ಬೆಲ್ಲದ, ಶ್ರೀನಿವಾಸ ಬೆರಗಿ ಹಾಗೂ ಎ.ಡಿ. ಕೋಲಕಾರ, ಈಶಣ್ಣ ಸಂಕನೂರ, ಮಂಜುನಾಥ ಸೂಡಿ ಸೇರಿ ಕಾಲೇಜಿನ ವಿದ್ಯಾರ್ಥಿಗಳು ಇದ್ದರು. 29ರಂದು ವಿಶೇಷ ಮಕ್ಕಳ ವೈದ್ಯಕೀಯ ಶಿಬಿರ
ಗದಗ: ನಗರ ವಲಯದ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 1ರಿಂದ 12ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿಶೇಷ ಅಗತ್ಯತೆವುಳ್ಳ ಮಕ್ಕಳಿಗೆ ಎಸ್ಎಸ್ಎ ಹಾಗೂ ಆರ್‌ಎಂಎಸ್‌ಎ ಯೋಜನೆಯಡಿಯಲ್ಲಿ 2025- 26ನೇ ಸಾಲಿನಲ್ಲಿ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಬಿರ ನ. 29ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 10ರಲ್ಲಿ ನಡೆಯಲಿದೆ.ಮೌಲ್ಯಾಂಕನ ಶಿಬಿರಕ್ಕೆ ದಾಖಲೆಗಳೋಂದಿಗೆ ಮಕ್ಕಳನ್ನು ಹಾಜರುಪಡಿಸಬೇಂದು ಉಪನಿರ್ದೇಶಕ ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಶಿಕ್ಷಣ ಇಲಾಖೆ ಇವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬಿಆರ್‌ಸಿಎಲ್‌ಪಿ ಪ್ರಭಯ್ಯಮಠ ಮೊ. 9886925752, ಕೆ.ಎಸ್. ಬೆಲೇರಿ ಮೊ. 9538419782, ಈ.ಡಿ. ಹುಗ್ಗೆಣ್ಣವರ ಮೊ. 9535409502, ಶಶಿಧರ ಚಳಗೇರಿ ಮೊ. 9972620132 ಸಂಪರ್ಕಿಸಬಹುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.