ಚಿಕ್ಕಮ್ಯಾಗೇರಿ ನರೇಗಾ ಕಾಮಗಾರಿಗೆ ಸಚಿವ ಖರ್ಗೆ ಮೆಚ್ಚುಗೆ

KannadaprabhaNewsNetwork | Published : May 21, 2025 12:07 AM
ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಈ ಬದು ನಿರ್ಮಾಣ ಹಾಗೂ ನಾಲಾ ಸುಧಾರಣಾ ಕಾಮಗಾರಿ ಸ್ಥಳದಲ್ಲಿ ನೀರು ನಿಂತು ಮಣ್ಣು ಕೊಚ್ಚಿ ಹೋಗದಂತೆ ಹಾಗೂ ನೀರು ಇಂಗುವಂತೆ ಮಾದರಿ ಕಾಮಗಾರಿ ಮಾಡಲಾಗಿದೆ. ಇದರ ಚಿತ್ರಗಳನ್ನು ಸಚಿವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Follow Us

ಕೊಪ್ಪಳ(ಯಲಬುರ್ಗಾ):

ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಕಾಮಗಾರಿಯಲ್ಲಿ ಹಮ್ಮಿಕೊಂಡಿದ್ದ ಬದು ನಿರ್ಮಾಣ ಹಾಗೂ ನಾಲಾ‌ ಸುಧಾರಣಾ ಕಾಮಗಾರಿಯ ಸಫಲತೆಯ ಪೋಟೋಗಳನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಈ ಬದು ನಿರ್ಮಾಣ ಹಾಗೂ ನಾಲಾ ಸುಧಾರಣಾ ಕಾಮಗಾರಿ ಸ್ಥಳದಲ್ಲಿ ನೀರು ನಿಂತು ಮಣ್ಣು ಕೊಚ್ಚಿ ಹೋಗದಂತೆ ಹಾಗೂ ನೀರು ಇಂಗುವಂತೆ ಮಾದರಿ ಕಾಮಗಾರಿ ಮಾಡಲಾಗಿದೆ. ಇದರ ಚಿತ್ರಗಳನ್ನು ಸಚಿವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಗ್ರಾಮೀಣ ಜನರ ಬದುಕಿನ ಬಲವರ್ಧನೆಯ ಜತೆಗೆ ನಿಸರ್ಗ ಸಂರಕ್ಷಣೆಗೂ ನೆರವಾಗುತ್ತಿದೆ. ಚಿಕ್ಕಮ್ಯಾಗೇರಿ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಿಸಿದ ಇಂಗು ಗುಂಡಿಗಳು ಹಲವು ಆಯಾಮದಲ್ಲಿ ಅನುಕೂಲವಾಗುತ್ತಿವೆ. ಮಣ್ಣಿನ ಸವಕಳಿ ತಡೆಗಟ್ಟುವಿಕೆ, ಮಣ್ಣಿನ ಫಲವತ್ತತೆ ವೃದ್ಧಿ, ಅಂತರ್ಜಲ ಹೆಚ್ಚಳ, ಹಸಿರು ವೃದ್ಧಿ, ಪ್ರವಾಹ ಸಾಧ್ಯತೆಗಳಿಗೆ ತಡೆ ಹಾಗೂ ಇಂಗು ಗುಂಡಿಗಳಿಗೆ ಬೀಳುವ ಮಳೆ, ನೀಡಲಿದೆ ಇಳೆಗೆ ಜೀವ ಕಳೆ ಎಂದು ನರೇಗಾ ಕಾಮಗಾರಿ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.

₹ 1.90 ಕೋಟಿ ಕ್ರಿಯಾ ಯೋಜನೆ:

ಚಿಕ್ಕಮ್ಯಾಗೇರಿ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ 2025-26ನೇ ಸಾಲಿನಲ್ಲಿ ₹ 1.90 ಕೋಟಿ 90 ಕ್ರಿಯಾಯೋಜನೆ ನಿಗದಿಪಡಿಸಲಾಗಿದೆ. ಇದರಲ್ಲಿ ಕೂಲಿ ಮೊತ್ತಕ್ಕೆ ₹ 1 ಕೋಟಿ ಮೀಸಲಿಡಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ 8476 ಕೂಲಿ ದಿನ ಸೃಜಿಸುವ ಮೂಲಕ ಯಲಬುರ್ಗಾ ತಾಲೂಕಿನಲ್ಲಿ ಗ್ರಾಪಂ ಎರಡನೇ ಸ್ಥಾನದಲ್ಲಿದೆ.ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕಾ ಖರ್ಗೆ ಅವರ ಆದೇಶದಂತೆ 2025-26ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿಸಲಾಗಿದೆ. ನರೇಗಾ ಯೋಜನೆಯಡಿ ಉತ್ತಮ ಕೆಲಸ ಮಾಡಿರುವುದನ್ನು ಗುರುತಿಸಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಪಂಚಾಯಿತಿ ಹೆಸರನ್ನು ಸಚಿವರು ಉಲ್ಲೇಖಿಸಿರುವುದು ಹರ್ಷ ತಂದಿದೆ ಎಂದು ಗ್ರಾಪಂ ಅಧ್ಯಕ್ಷ ಶರಣಕುಮಾರ ಅಮರಗಟ್ಟಿ, ಪಿಡಿಒ ವೆಂಕಟೇಶ ನಾಯಕ ಹೇಳಿದ್ದಾರೆ.