)
ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಕುರಿತು ಜಾಲತಾಣ ಎಕ್ಸ್‌ನಲ್ಲಿ ಸಚಿವರಿಗೆ ವರದಿಯ ಕುರಿತು ಪೋಸ್ಟ್ ಮಾಡಿರುವ ಕಂಪನಿಯು, ಒಟ್ಟು 824 ಕಿ.ಮೀ ರಸ್ತೆಯನ್ನು ಕೃತಕ ಬುದ್ಧಿಮತ್ತೆ ಮತ್ತೆ ಡೆಟಾ ಆಧಾರಿತ ಖುದ್ದು ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ರಿಪೇರಿ ಕಾರ್ಯವನ್ನು ಕೈಗೊಳ್ಳಲು, ಆದ್ಯತೆಯ ಮೇಲೆ ಕಾಮಗಾರಿ ಮಾಡಲು ಮತ್ತು ಸೂಕ್ತ ಅನುದಾನವನ್ನು ಒದಗಿಸಲು ಡೆಟಾ ನೆರವಾಗಲಿದೆ. ಈ ಕುರಿತಾದ ವರದಿಯನ್ನು ತಮಗೆ ಸಲ್ಲಿಸಲು ಸಮಯ ನೀಡುವಂತೆ ಕಂಪನಿ ಕೋರಿದೆ.ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ ವಿಷನ್, ಭೂಮೇಲ್ಮೈ ಸ್ಥಳಗಳ ನಕ್ಷೆ ಆಧರಿಸಿ ರಸ್ತೆಗಳ ಸ್ಥಿತಿಯನ್ನು ಸರ್ವೇ ಮಾಡಲಾಗಿದೆ. ಚಿತ್ರಗಳ ಆಧಾರದ ಮೇಲೆ ರಸ್ತೆಯಲ್ಲಿನ ಲೋಪದೋಷಗಳು, ಬಿರುಕುಗಳು, ಗುಂಡಿಗಳು ಹಾಗೂ ಇನ್ನಿತರ ಸಮಸ್ಯೆಗಳನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಕಂಪನಿ ಹೇಳಿದೆ.
ಇನ್ನು ಪೂರ್ವ ಪಾಲಿಕೆ ವ್ಯಾಪ್ತಿಯ 1,600 ಕಿ.ಮೀ ರಸ್ತೆಗಳಲ್ಲಿ ಮತ್ತು ಉತ್ತರ ಪಾಲಿಕೆ ವ್ಯಾಪ್ತಿಯ 2494 ಕಿ.ಮೀ ರಸ್ತೆಗಳನ್ನು ಸರ್ವೇಗೆ ಒಳಪಡಿಸಲಾಗಿದ್ದು, ಕ್ರಮವಾಗಿ 27,000 ಗುಂಡಿಗಳು ಹಾಗೂ 14,000 ರಸ್ತೆ ಗುಂಡಿಗಳು ಇರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಎಐಆರ್ ಎಐ ತಿಳಿಸಿದೆ.