ವೃಕ್ಷಥಾನ್‌ ಹೆರಿಟೇಜ್ ರನ್ ಪೋಸ್ಟರ್‌ ಬಿಡುಗಡೆ ಮಾಡಿದ ಸಚಿವ ಎಂ.ಬಿ. ಪಾಟೀಲ

KannadaprabhaNewsNetwork |  
Published : Aug 22, 2026, 02:45 AM IST
ಸಚಿವ ಎಂ.ಬಿ.ಪಾಟೀಲರಿಂದ ವೃಕ್ಷಥಾನ್ ಹೆರಿಟೇಜ್ ರನ್-2026 ಪೋಸ್ಟರ್‌ ಬಿಡುಗಡೆ | Kannada Prabha

ಸಾರಾಂಶ

ವೃಕ್ಷಥಾನ್ ಹೆರಿಟೇಜ್ ರನ್ ಡಿಸೆಂಬರ್ 13ರಂದು ನಡೆಯಲಿದ್ದು, ನೋಂದಣಿ ಪ್ರಕ್ರಿಯೆಗೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಈಚೆಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವೃಕ್ಷಥಾನ್ ಹೆರಿಟೇಜ್ ರನ್ ಡಿಸೆಂಬರ್ 13ರಂದು ನಡೆಯಲಿದ್ದು, ನೋಂದಣಿ ಪ್ರಕ್ರಿಯೆಗೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಈಚೆಗೆ ಚಾಲನೆ ನೀಡಿದರು. ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ವೃಕ್ಷಥಾನ್ ಹೆರಿಟೇಜ್- 2026 ರನ್ ಪೋಸ್ಟರ್‌ ಬಿಡುಗಡೆ ಮಾಡಿದರು. ರೈತರಿಗೆ ಸಸಿ ವಿತರಿಸಿದರು. ಬಳಿಕ ಹೆರಿಟೇಜ್ ರನ್ ಓಟದಲ್ಲಿ ಪಾಲ್ಗೊಳ್ಳಲು ಹೆಸರನ್ನೂ ನೋಂದಣಿ ಮಾಡಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ಸ್ವಾತಂತ್ರ್ಯ ಸಂಭ್ರಮದಲ್ಲಿ ಹಸಿರಿನ ಹೆಜ್ಜೆ ಪ್ರತೀಕವಾಗಿ ವೃಕ್ಷಥಾನ್ ಹೆರಿಟೇಜ್ ರನ್-2026‌ ನೋಂದಣಿಗೆ ಚಾಲನೆ ನೀಡಿದ್ದೇನೆ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗಾಗಿ, ಪಕ್ಷಿಗಳ ಉಳಿವಿಗಾಗಿ, ಮರ ಹಾಗೂ ಮಳೆಯ ಮಹತ್ವ ಸಾರುವ ಉದ್ದೇಶದಿಂದ ಮರ, ಮಳೆಗಾಗಿ ಓಡಿ ಎಂಬ ಕಳಕಳಿಯೊಂದಿಗೆ ಆಯೋಜಿಸಿರುವ ಈ ಓಟದಲ್ಲಿ ಸಹಸ್ರಾರು ಓಟಗಾರರು ಪಾಲ್ಗೊಳ್ಳಲಿದ್ದಾರೆ. ಡಿ.13ರಂದು ನಡೆಯುವ ಈ ಓಟದ ಹಬ್ಬಕ್ಕೆ ಇಂದಿನಿಂದಲೇ ತಯಾರಿ ಆರಂಭಿಸಿ, ಬಹುಮಾನ ನಿಮ್ಮದಾಗಿಸಿಕೊಳ್ಳಿ ಎಂದು ಹೇಳಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮೇಯರ್‌ ಎಂ.ಎಸ್. ಕರಡಿ, ಉಪಮೇಯರ್‌ ಸುಮಿತ್ರಾ ಜಾಧವ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ, ವೃಕ್ಷಥಾನ್ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ, ಹೆರಿಟೇಜ್ ರನ್ ಕೊರ್ ಕಮಿಟಿ ಪದಾಧಿಕಾರಿಗಳು, ವಿಜಯಪುರ ಸೈಕ್ಲಿಂಗ್ ಗ್ರೂಪ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಕಾಶಪ್ಪಾ, ಟೈಂ ಇದ್ರೆ ನಮ್ಮೂರಿಗೆ ಬಂದು ಹೋಗ್ತೀಯೇನಪ್ಪಾ..
ಡಿಸಿ ಕಚೇರಿಗೆ ನುಗ್ಗಲು ಬಿಜೆಪಿ ವಿಫಲ ಯತ್ನ