ಇಂದಿನಿಂದ ಸಚಿವ ಎಂ.ಬಿ.ಪಾಟೀಲ ಜಿಲ್ಲಾ ಪ್ರವಾಸ

KannadaprabhaNewsNetwork |  
Published : May 01, 2026, 02:45 AM IST
7.ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ನಕ್ಷೆ | Kannada Prabha

ಸಾರಾಂಶ

ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಮೇ 1 ರಿಂದ ಮೇ 3ರ ವರೆಗೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಮೇ 1 ರಿಂದ ಮೇ 3ರ ವರೆಗೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಮೇ 1ರ ಶುಕ್ರವಾರ ಬೆಳಗ್ಗೆ 10ಕ್ಕೆ ಬರಟಗಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ₹ 734 ಲಕ್ಷ ವೆಚ್ಚದಲ್ಲಿ ಅರಕೇರಿ, ಬರಟಗಿ ಮತ್ತು ಹಂಚಿನಾಳ ಪಿ.ಎಚ್ ಹಾಗೂ ಬೆಳಗ್ಗೆ 11ಕ್ಕೆ ಲೋಹಗಾಂವ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ₹ 978 ಲಕ್ಷ ವೆಚ್ಚದಲ್ಲಿ ಲೋಹಗಾಂವ, ಟಕ್ಕಳಕಿ, ಹುಬನೂರ, ಜಾಲಗೇರಿ, ಇಟ್ಟಂಗಿಹಾಳ, ಸಿದ್ಧಾಪೂರ ಗ್ರಾಮಗಳಲ್ಲಿ ಸರಣಿ ಬಾಂದಾರ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ, ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು ಈ ಬಾಂದಾರ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಸಂಜೆ 5ಕ್ಕೆ ತಿಗಣಿಬಿದರಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ₹ 984 ಲಕ್ಷ ವೆಚ್ಚದಲ್ಲಿ ಕಾಖಂಡಕಿ, ಬಬಲೇಶ್ವರ ಮಮದಾಪೂರ ಬಬಲೇಶ್ವರ, ಯಕ್ಕುಂಡಿ, ತಿಗಣಿಬಿದರಿ ತಾಜಪೂರ.ಎಚ್ ಸರಣಿ ಬಾಂದಾರ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಮೇ 2 ಶನಿವಾರ ಬೆಳಗ್ಗೆ 10ಕ್ಕೆ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಪಟ್ಟಣ ಪಂಚಾಯತ ಕಟ್ಟಡ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟಿಸಿ, ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 2ಕ್ಕೆ ಸಿಂದಗಿ ರಸ್ತೆಯಲ್ಲಿರುವ ಪರದೇಶಿ ಮಠದ ಆವರಣದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮೇ 3 ಭಾನುವಾರ ಬೆಳಗ್ಗೆ 10ಕ್ಕೆ ಯಕ್ಕುಂಡಿ ಗ್ರಾಮದಲ್ಲಿ ಪಿ.ಡಬ್ಲೂ.ಡಿ ₹ 300 ಲಕ್ಷ ವೆಚ್ಚದಲ್ಲಿ ವಿಜಯಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-34, 3 ಕಿ.ಮೀ. ವರೆಗೆ ಯಕ್ಕುಂಡಿ -ಸಂಗಾಪೂರ.ಎಚ್.ಎಚ್ - ಶೇಗುಣಸಿ- ಕಾಖಂಡಕಿ ವ್ಹಾಯಾ ಹರಳಯ್ಯನಗುಂಡದ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಿದ್ದಾರೆ.

ಸಂಜೆ 5ಕ್ಕೆ ದೇವರಗೆಣ್ಣೂರ ಗ್ರಾಮದಲ್ಲಿ ಪಿ.ಡಬ್ಲೂ.ಡಿ ಇಲಾಖೆಯಡಿ ₹ 400 ಲಕ್ಷ ವೆಚ್ಚದಲ್ಲಿ ಕಂಬಾಗಿ- ದೇವರಗೆಣ್ಣೂರ ಗ್ರಾಮದ ವರೆಗೆ ಕಿ.ಮೀ 4 ರಿಂದ 8ರ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಸಂಜೆ 6ಕ್ಕೆ ಮದಗುಣಕಿ ಗ್ರಾಮದ ಶಿವಣ್ಣವರ ವಸ್ತಿಯಿಂದ ಕೊಡಬಾಗಿ ರಸ್ತೆಯ ವರೆಗೆ ಪಿ.ಡಬ್ಲೂ.ಡಿ ಇಲಾಖೆಯಡಿ ₹ 150 ಲಕ್ಷ ವೆಚ್ಚದಲ್ಲಿ 3 ಕಿ.ಮೀ ರಸ್ತೆ ಸುಧಾರಣೆ, ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟನೆ ಹಾಗೂ ಸಿ.ಸಿ ರಸ್ತೆ ಕಾಮಗಾರಿ ಭೂಮಿಪೂಜೆ ನೆರವೇರಿಸಿ, ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣವನ್ನು ರಾಜ್ಯ ಸರ್ಕಾರ ಕೇಂದ್ರೀಕರಣಗೊಳಿಸಿದೆ
ಭಗವಂತನ ನಂಬಿಕೆ ಮೂಡಿಸುವುದು ಮಠಗಳ ಕರ್ತವ್ಯ