ಕುಡಿಯುವ ನೀರಿನ ಕಾಮಗಾರಿಗೆ ಸಚಿವ,ಶಾಸಕರಿಂದ ಭೂಮಿಪೂಜೆ

KannadaprabhaNewsNetwork |  
Published : Jul 07, 2025, 11:47 PM IST
07ಕೆಪಿಕೆವಿಟಿ01: | Kannada Prabha

ಸಾರಾಂಶ

ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಅಮೃತ್ 2.0 ಯೋಜನೆಯಡಿಯಲ್ಲಿ ಪಟ್ಟಣದಲ್ಲಿ ಅಂದಾಜು ₹34.50 ಕೋಟಿ ಮೊತ್ತದ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಮತ್ತು ಶಾಸಕ ಜಿ ಹಂಪಯ್ಯ ನಾಯಕ ಅವರು ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಕವಿತಾಳ

ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಅಮೃತ್ 2.0 ಯೋಜನೆಯಡಿಯಲ್ಲಿ ಪಟ್ಟಣದಲ್ಲಿ ಅಂದಾಜು ₹34.50 ಕೋಟಿ ಮೊತ್ತದ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಮತ್ತು ಶಾಸಕ ಜಿ ಹಂಪಯ್ಯ ನಾಯಕ ಅವರು ಭೂಮಿ ಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಪಟ್ಟಣದ ಸುತ್ತಲೂ 86 ಕಿ.ಮೀ. ಪೈಪ್‌ಲೈನ್ ಅಳವಡಿಸಲಾಗುವುದು. ಕೆಲಸಗಳಿಗೆ ಅಡ್ಡಿ ಪಡಿಸದೆ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಕಾಮಗಾರಿ ಶೀಘ್ರ ಪೂರ್ಣಗೊಳಸಲಿ ಅನುಕೂಲವಾಗುತ್ತದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಥಳೀಯರು ಕಾಳಜಿ ವಹಿಸಬೇಕು ಅನಗತ್ಯ ಅಡಚಣೆ ಮಾಡಬಾರದು ಎಂದರು.

ರಾಯಚೂರಿನ ಓಪೆಕ್‌ ಆಸ್ಪತ್ರೆಯಲ್ಲಿ 24/7 ಟ್ರಾಮಾ ಸೆಂಟರ್‌ ಆರಂಭಿಸಲಾಗುತ್ತಿದೆ. 100 ಹಾಸಿಗೆ ಸಾಮರ್ಥ್ಯ ಮತ್ತು ಐಸಿಯು ವ್ಯವಸ್ಥೆ ಲಭ್ಯವಾಗಲಿದ್ದು, ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು, ಹೈದರಾಬಾದ್ ಮತ್ತಿತರ ದೂರದ ನಗರಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ ಸುಧಾರಿತ ಚಿಕಿತ್ಸೆ ಇಲ್ಲೆ ಸಿಗುತ್ತದೆ ಎಂದರು.

ಶಾಸಕ ಜಿ ಹಂಪಯ್ಯ ನಾಯಕ ಮಾತನಾಡಿದರು.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಖಾಸಿಂಬಿ ಚಾಂದ ಪಾಷಾ, ಉಪಾಧ್ಯಕ್ಷೆ ಎಲಿಜಾ ಒವಣ್ಣ, ಮಂಜುಳಾ ಅಮರೇಶ,ಮುಖಂಡರಾದ ಕಿರಲಿಂಗಪ್ಪ, ಶಿವಣ್ಣ ವಕೀಲ, ತಹಸೀಲ್ದಾರ್ ರವಿ ಅಂಗಡಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಸ್ವಾಮಿ, ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಹನುಮಂತಮ್ಮ ಸೇರಿ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!