ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಉದ್ಯಾನ ಜಾಗ ಅನ್ಯ ಕೆಲಸಕ್ಕೆ ಬಳಕೆ
ಆದರೆ ಕಾಲಕ್ರಮೇಣ ಉದ್ಯಾನವನ ಜಾಗ ಒಂದು ಕಡೆ ಸರ್ಕಾರಿ ಬಾಲಕೀಯರ ಕಾಲೇಜಿಗೆ ನೀಡಲಾಯಿತು. ಮತ್ತೊಂದು ಕಡೆ ಲಯನ್ಸ್ ಭವನ, ಸಿಟಿಜನ್ ಕ್ಲಬ್, ರಂಗಂದಿರಕ್ಕೆ ನೀಡಿದ್ದರು. ಮತ್ತೊಂದು ಕಡೆ ಬೆಳಗ್ಗೆ ಸಂಜೆ ವಾಲಿಬಾಲ್ ಆಡಲು ಕೆಲವರು ಬಳಸುತ್ತಿದ್ದರು.ಇದರಿಂದ ದೊಡ್ಡ ಉದ್ಯಾನವನ ಕಿರಿದಾಗಿ ಚಿಕ್ಕ ಉದ್ಯಾನವನವಾಗಿ ಮಾರ್ಪಟ್ಟಿತ್ತು.ಇಲ್ಲಿ ಮಕ್ಕಳಿಗೆ ಆಡವಾಡಲು ಯಾವುದೇ ಸಲಕರಣಿಗಳಿಲ್ಲದೆ,ಕೂರಲೂ ಆಸನಗಳಿಲ್ಲದೆ ಅಧ್ವಾನವಾಗಿತ್ತು. ದಿನೇದಿನೆ ಉದ್ಯಾನವನಕ್ಕೆ ಸಾರ್ವಜನಿಕರು ಬರುವುದನ್ನೇ ನಿಲ್ಲಿಸಿದ್ದರು. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮೊದಲ ಬಾರಿ ಶಾಸಕರಾದಾಗ ಪಟ್ಟಾಭೀಶೇಕೋದ್ಯಾನವನಕ್ಕೆ ಹೊಸ ರೂಪ ನೀಡಿ ಮತ್ತೆ ಜನರು, ಮಕ್ಕಳು ಪಾರ್ಕ್ ಕಡೆ ಮುಖ ಮಾಡುವಂತೆ ಮಾಡಿದ್ದರು.₹1 ಕೋಟಿ ವ್ಯಚ್ಚದಲ್ಲಿ ಅಧುನೀಕರಣ
ಹಾಲಿ ಇರುವ ಮರಗಳನ್ನು ಕಡಿಯುವ ಕೆಲಸ ಸಾಗಿದ್ದು, ಒಂದು ತಿಂಗಳಲ್ಲಿ ಪಾರ್ಕ್‌ಗೆ ಹೊಸ ರೂಪ ನೀಡುವ ಕಾಮಗಾರಿ ಆರಂಭವಾಗಲಿದೆ.ಪಾರ್ಕ್ ಎಂದರೆ ಬರೀ ಜನರು ಬಂದು ಕೂರುವುದಕ್ಕೆ ಮಕ್ಕಳು ಆಟವಾಡಲಿಕ್ಕೆ ಸೀಮಿತವಾಗದೆ ನಮ್ಮ ಗ್ರಾಮೀಣ ಭಾಗದ ಸೊಗಡನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಲು ಹಳೇ ಕಾಲದ ಎತ್ತಿನ ಬಂಡಿ, ರೈತರು ಹೊಲದಲ್ಲಿ ಕೆಲಸ ಮಾಡುವುದು,ನೇಗಿಲು,ರೈತರ ಸಲಕರಣಿಗಳನ್ನು ಉದ್ಯಾನವನದಲ್ಲಿ ಸ್ಥಾಪಿಸಲಾಗುವುದು.
ಮಕ್ಕಳಿಗೆ, ಹಿರಿಯರಿಗೆ ಅನುಕೂಲಬೆಳಗ್ಗೆ ಸಂಜೆ ಇಲ್ಲಿಗೆ ಬಂದವರಿಗೆ ಒಟ್ಟಾರೆಯಾಗಿ ಹೊಸ ಉಲ್ಲಾಸ, ಮುದಾ ನೀಡುವಂತೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಪಟ್ಟಣದ ಮಕ್ಕಳಿಗೆ ಆಟವಾಡಲು ಮೂರು ಕಿ.ಮೀ ದೂರದ ಇಂದಿರಾ ಗಾಂಧಿ ಪಾರ್ಕ್‌ಗೆ ಹೋಗಬೇಕು, ಪಟ್ಟಾಭಿಶೇಕೋದ್ಯಾನವನದಲ್ಲೆ ಮಕ್ಕಳಿಗೆ ಹಾಗೂ ಹಿರಿಯರಿಗೆ ಎಲ್ಲ ಅನುಕೂಲ ದೊರೆತರೆ ಹೆಚ್ಚು ಉಪಯೋಗವಾಗಲಿದೆ.