ಸಚಿವ ರಾಯರಡ್ಡಿ ಅಭಿವೃದ್ಧಿ ಕಾರ್ಯ ರಾಜ್ಯಕ್ಕೆ ಮಾದರಿ: ಚಂದ್ರಶೇಖರಯ್ಯ ಹಿರೇಮಠ

KannadaprabhaNewsNetwork |  
Published : Sep 07, 2026, 02:45 AM IST
ಕುಕನೂರು ಪಟ್ಟಣದ ಮಹಾಮಾಯಾ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಚಿವ ರಾಯರಡ್ಡಿ ಜನ್ಮದಿನ ನಿಮಿತ್ತ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಸಚಿವ ಬಸವರಾಜ ರಾಯರಡ್ಡಿ ಜನ್ಮದಿನ ಪ್ರಯುಕ್ತ ಕುಕನೂರು ಪಟ್ಟಣದ ಮಹಾಮಾಯಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ಆಸ್ಪತ್ರೆ ಹಾಗೂ ವೃದ್ಧಾಶ್ರಮದಲ್ಲಿ ಹಣ್ಣು, ಬ್ರೇಡ್ ವಿತರಿಸಲಾಯಿತು.

ಕುಕನೂರು: ಸಚಿವ ಬಸವರಾಜ ರಾಯರಡ್ಡಿ ಅವರ ಅಭಿವೃದ್ಧಿ ಕಾರ್ಯಗಳು ರಾಜ್ಯಕ್ಕೆ ಮಾದರಿ ಆಗಿವೆ ಎಂದು ಯಲಬುರ್ಗಾ ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಹೇಳಿದರು.

ಸಚಿವ ಬಸವರಾಜ ರಾಯರಡ್ಡಿ ಜನ್ಮದಿನ ಪ್ರಯುಕ್ತ ಪಟ್ಟಣದ ಮಹಾಮಾಯಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಆಸ್ಪತ್ರೆ ಹಾಗೂ ವೃದ್ಧಾಶ್ರಮದಲ್ಲಿ ಹಣ್ಣು-ಬ್ರೇಡ್ ವಿತರಿಸಿ ಮಾತನಾಡಿದ ಅವರು, ೧೯೮೫ರಲ್ಲಿ ತಾಲೂಕಿನ ೬೦ ಗ್ರಾಮಗಳಲ್ಲಿ ಪ್ರಾಥಮಿಕ ಶಾಲೆಗಳು ಇರಲಿಲ್ಲ. ಈಗ ಎಲ್ಲ ಗ್ರಾಮಗಳಲ್ಲಿ ಪ್ರಾಥಮಿಕ ಶಾಲೆಗಳ ಸ್ಥಾಪನೆ ಹಾಗೂ 60ಕ್ಕಿಂತ ಹೆಚ್ಚು ಸರ್ಕಾರಿ ಪ್ರೌಢಶಾಲೆಗಳ ಸ್ಥಾಪನೆ ಹಾಗೂ ೧೮ ಸರ್ಕಾರಿ ಪದವಿಪೂರ್ವ ಕಾಲೇಜು ಸ್ಥಾಪನೆ ಹಾಗೂ ಯಲಬುರ್ಗಾ, ಮಂಗಳೂರು, ಹಿರೇವಂಕಲಕುಂಟಾ, ತಳಬಾಳ್‌ನಲ್ಲಿ ವಸತಿ ಡಿಗ್ರಿ ಕಾಲೇಜು, ಯಲಬುರ್ಗಾದಲ್ಲಿ ಸರ್ಕಾರಿ ಸ್ನಾತಕೊತ್ತರ ಕೇಂದ್ರ, ದೇಶದಲ್ಲಿಯೇ ಸುಸಜ್ಜಿತ ವಸತಿಯುಕ್ತ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ನಿರ್ಮಾಣ, ತಳಕಲ್ಲನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಸ್ಥಾತಕೋತ್ತರ ಕೇಂದ್ರ, ಎರಡು ಕೌಶಲ್ಯ ಅಭಿವೃದ್ಧಿ ಕೇಂದ್ರ, ನರ್ಸಿಂಗ್ ಕಾಲೇಜು, ಬಿಸಿಎ ಕಾಲೇಜು, ಕಾರ್ಮಿಕ ವಸತಿ ಶಾಲೆ, ನವೋದಯ ವಸತಿ ಶಾಲೆ, 18 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸಚಿವ ರಾಯರಡ್ಡಿ ಅವರ ಕೊಡುಗೆ ಎಂದರು.

ಮುಖಂಡ ನಾರಾಯಣಪ್ಪ ಹರಪನಹಳ್ಳಿ ಮಾತನಾಡಿ, ಸಚಿವ ರಾಯರಡ್ಡಿ ಕಾರ್ಯಗಳು ಮುಂದಿನ ಭವಿಷ್ಯದ ಆಲೋಚನೆ ಕಾರ್ಯಗಳು. ದೂರ ದೃಷ್ಠಿಕೋನದಿಂದ ಅವರು ಯೋಜನೆ ಕೈಗೊಳ್ಳುತ್ತಾರೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಸಿರಾಜ ಕರಮುಡಿ, ಪಪಂ ಸದಸ್ಯ ಗಗನ ನೋಟಗಾರ ಮಾತನಾಡಿ, ಗದಗ-ವಾಡಿ ರೈಲ್ವೆ ಯೋಜನೆಯನ್ನು ಮಂಜೂರು ಮಾಡಿಸಿದರು. ಸದ್ಯ ಅವರ ಕಾರ್ಯದಿಂದ ರೈಲು ಓಡುತ್ತಿದೆ. ಕುಕನೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ತಹಸೀಲ್ದಾರ್‌ ಕಚೇರಿ, ಬುದ್ಧ, ಬಸವ, ಅಂಬೇಡ್ಕರ್ ಭವನ, ಕೋರ್ಟ್‌ ಕಟ್ಟಡಗಳಿಗೆ ಅನುದಾನ ಮಂಜೂರಾತಿ ಮಾಡಿದ್ದಾರೆ ಎಂದರು.

ಪಪಂ ಸದಸ್ಯ ರಾಮಣ್ಣ ಬಂಕದಮನಿ ಮಾತನಾಡಿ, ಸಚಿವ ರಾಯರಡ್ಡಿ ಅವರ ಅಭಿವೃದ್ಧಿ ಪರ ಚಿಂತನೆಗಳು ಅನನ್ಯ ಎಂದರು.

ಪ್ರಮುಖರಾದ ಸಿದ್ದಯ್ಯ ಕಳ್ಳಿಮಠ, ಸಂಗಮೇಶ ಗುತ್ತಿ, ಭೀಮಣ್ಣ ನಡುಲಮನಿ, ಮಂಜುನಾಥ ಕಡೇಮನಿ, ರೆಹೆಮಾನಸಾಬ್ ಮಕ್ಕಪ್ಪನವರ್, ಉದಯ ರಾಯರಡ್ಡಿ, ಅಶೋಕ ತೋಟದ, ದೇವೇಂದ್ರಗೌಡ ಯಡಿಯಾಪುರ, ರಾಘವೇಂದ್ರ ಕಾತರಕಿ, ಯಮನೂರಪ್ಪ ಬೂದಗುಂಪಾ, ವಿಠ್ಠಲ ದೇಸಾಯಿ, ಮಂಜುನಾಥ ಯಡಿಯಾಪುರ, ಬಸವರಾಜ ಮಾಸೂರು, ರಫೀ ಹಿರೇಹಾಳ, ಪಪಂ ಸದಸ್ಯರಾದ ನೂರುದ್ದೀನಸಾಬ್ ಗುಡಿಹಿಂದಲ್, ಪ್ರಶಾಂತ ಆರಬೆರಳಿನ್, ಮಹೇಶ ಗಾವರಾಳ, ನಿಂಗಪ್ಪ ಗೊರ್ಲೆಕೊಪ್ಪ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾವ್ಯಕ್ಕಿದೆ ಅಮಂಗಳ ನಾಶ ಮಾಡುವ ಶಕ್ತಿ: ಸ್ವರ್ಣವಲ್ಲೀ ಶ್ರೀ
ಪ್ಲಾಸ್ಟಿಕನಲ್ಲಿ ಸಂಗ್ರಹಿಸಿದ ನೀರು ಆರೋಗ್ಯಕ್ಕೆ ಮಾರಕ: ರಾಘವೇಶ್ವರ ಶ್ರೀ