ಹರಕೆಯ ಯಕ್ಷಗಾನದ ‌ಮೂಲಕ ಸಂಕಷ್ಟ ನಾಶವಾಗುತ್ತದೆ. ತಾಳಮದ್ದಲೆಯಲ್ಲಿ ಅರ್ಥಗಾರಿಕೆಗೆ ಮುಖ್ಯ. ಅದಕ್ಕೆ ವಿಶಿಷ್ಟ ಹೊಣೆಗಾರಿಕೆ ಇದೆ. ಅದನ್ನು ಅರಿತು ಮುನ್ನಡೆದರೆ ಯಕ್ಷಗಾನದ‌ ಮೂಲ ಆಶಯ ಈಡೇರುತ್ತದೆ.

ಶಿರಸಿ: ಯಕ್ಷಗಾನ ದೃಶ್ಯ ಕಾವ್ಯ‌. ಕಾವ್ಯಕ್ಕೆ ದೃಶ್ಯದ ಸೊಗಸು ನೀಡುವ ಕಲೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಭಾನುವಾರ ಯಕ್ಷಶಾಲ್ಮಲಾದ ೨೨ನೇ ಯಕ್ಷೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭದ‌ ಸಮಾರೋಪದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾವ್ಯದಿಂದ ಯಶಸ್ಸು, ವ್ಯವಹಾರ, ಮೌಲ್ಯಗಳನ್ನು ಕೊಡುತ್ತದೆ. ಇಷ್ಟೇ ಅಲ್ಲ, ಅಮಂಗಳವನ್ನು ನಾಶ ಮಾಡುತ್ತದೆ. ಯಕ್ಷಗಾನ ಇವನ್ನೆಲ್ಲ ಸಮರ್ಥವಾಗಿ ಮಾಡುತ್ತಿದೆ ಎಂದರು‌.

ಹರಕೆಯ ಯಕ್ಷಗಾನದ ‌ಮೂಲಕ ಸಂಕಷ್ಟ ನಾಶವಾಗುತ್ತದೆ. ತಾಳಮದ್ದಲೆಯಲ್ಲಿ ಅರ್ಥಗಾರಿಕೆಗೆ ಮುಖ್ಯ. ಅದಕ್ಕೆ ವಿಶಿಷ್ಟ ಹೊಣೆಗಾರಿಕೆ ಇದೆ. ಅದನ್ನು ಅರಿತು ಮುನ್ನಡೆದರೆ ಯಕ್ಷಗಾನದ‌ ಮೂಲ ಆಶಯ ಈಡೇರುತ್ತದೆ ಎಂದರು.ದಿ. ಎಂ.ಎ. ಹೆಗಡೆ ದಂಟ್ಕಲ್ ಪ್ರಶಸ್ತಿಯನ್ನು ಸ್ವೀಕರಿಸಿದ, ಉಡುಪಿಯ ಸದಾನಂದ ಐತಾಳ ಮಾತನಾಡಿ, ಯಕ್ಷಗಾನ ರಂಗದ ಅಪಸವ್ಯಗಳು ನಡೆಯುತ್ತಿವೆ. ರಂಗದಲ್ಲಿ ಅತಿರೇಕಗಳು ನಡೆಯುತ್ತಿದೆ. ಶುದ್ಧತೆ ಉಳಿಸಿಕೊಂಡು‌ ಮುನ್ನಡೆಯಬೇಕು. ಎಂ.ಎ. ಹೆಗಡೆ ಅವರು ಯಕ್ಷಗಾನಕ್ಕೆ ಕೊಟ್ಟ ಕೊಡುಗೆ ಸಣ್ಣದಲ್ಲ. ಯಕ್ಷಗಾನವನ್ನು ಚಿಣ್ಣರಿಗೆ ಕಲಿಸುವುದರಿಂದ ಯಕ್ಷಗಾನದ ಭವಿಷ್ಯ ಸುಭದ್ರವಾಗಿ ಇರಲಿದೆ. ಮಕ್ಕಳನ್ನು ಯಕ್ಷಗಾನಕ್ಕೆ ಕಳಿಸಬೇಕು. ಪಾಲಕರು‌ ಮಕ್ಕಳನ್ನು ಉತ್ತೇಜಿಸಬೇಕು ಎಂದರು.

ಯಕ್ಷಶಾಲ್ಮಲಾ ಕಾರ್ಯದರ್ಶಿ ನಾಗರಾಜ್ ಜೋಶಿ, ಐತಾಳರ ಕುರಿತು ಅಭಿನಂದನಾ ನುಡಿ‌ ತಿಳಿಸಿ, ಯಕ್ಷಗಾನ ಶಾಸ್ತ್ರೀಯ ಕಲೆಯಾಗಲಿ. ಐತಾಳರ ಪಠ್ಯಕ್ರಮ ಎಲ್ಲೆಡೆ ಅನುಸರಿಸುವಂತಾಗಲಿ ಎಂದರು.ವೇದಿಕೆಯಲ್ಲಿ ಯಕ್ಷ ಶಾಲ್ಮಲಾದ ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ ಭೈರುಂಬೆ, ಕಾರ್ಯದರ್ಶಿ ನಾಗರಾಜ ಜೋಶಿ, ಅರ್ಥಧಾರಿ ಎಂ.ಎನ್. ಹೆಗಡೆ ಹಲವಳ್ಳಿ ಇದ್ದರು‌. ಜಿ.ಜಿ. ಹೆಗಡೆ ಕನೇನಳ್ಳಿ ಫಲ ಸಮರ್ಪಿಸಿದರು. ಶ್ರೀನಿವಾಸ ಮತ್ತಿಘಟ್ಟ ನಿರ್ವಹಿಸಿದರು.

ಸ್ಪರ್ಧಾಳುವಾದ ಪ್ರಣತಿ ಕಟ್ಟಿಗೆ ಹಾಗೂ ಪ್ರಾರ್ಥನಾ ಭಟ್ ಅಗಸಾಲ ಬೊಮ್ಮನಳ್ಳಿ, ನಿರ್ಣಯಕರ ಪರವಾಗಿ ಮಂಜುನಾಥ ಗೊರಮನೆ ಮಾತನಾಡಿದರು. ಪ್ರಶಸ್ತಿ ಪತ್ರವನ್ನು ಮಹಾಬಲೇಶ್ವರ ಭಟ್ಟ ಕಿರಕುಂಭತ್ತಿ ವಾಚಿಸಿದರು.ನಿರ್ಣಾಯಕರಾಗಿ ಗಣಪತಿ ಗುಂಜಗೋಡ, ಗಣಪತಿ ಕಬ್ಬಿನಮನೆ, ಆರ್.ಟಿ. ಭಟ್ಟ‌ ಕಬಗಾರು, ಮಂಜುನಾಥ ಗೊರಮನೆ, ಶ್ರೀನಿವಾಸ ಮತ್ತಿಗಟ್ಟ, ಶಿವರಾಮ ಭಾಗವತ್, ನಿರಂಜನ ಜಾಗನಳ್ಳಿ, ನಾಗರಾಜ ಕೆಕ್ಕಾರ, ಆಶಾ ಸತೀಶ ಭಾಗವಹಿಸಿದ್ದರು.