ಸಚಿವ ಶಿವಲಿಂಗೇಗೌಡರಿಗೆ ಜೆಡಿಎಸ್‌ ಬುದ್ಧಿ ಇನ್ನೂ ಹೋಗಿಲ್ಲ

KannadaprabhaNewsNetwork |  
Published : Nov 10, 2026, 12:30 AM IST
9ಎಚ್ಎಸ್ಎನ್5 : ಪತ್ರಿಕಾಗೋಷ್ಟಿಯಲ್ಲಿ  ಯುವ ಕಾಂಗ್ರೆಸ್ ತಾಲೂಕು  ಅಧ್ಯಕ್ಷ ಶರತ್ ಆಕ್ರೋಶ ವ್ಯಕ್ತಪಡಿಸಿದರು, | Kannada Prabha

ಸಾರಾಂಶ

ಬಿ. ಶಿವರಾಮ್ ಅವರು ನಾಲ್ಕು ಬಾರಿ ಶಾಸಕರಾಗಿ ಒಮ್ಮೆ ಸಚಿವರಾಗಿ ಕಾರ್ಯನಿರ್ವಾಹಿಸಿದ್ದಾರೆ, ಅಲ್ಲದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಶ್ರಮಿಸಿದ್ದಾರೆ ಅಂತವರನ್ನು ಉಸ್ತುವಾರಿಗಳು ಅಪಮಾನ ಮಾಡಿರುವುದು ಖಂಡನಿಯ, ಇವರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಗತವಾಗುವ ಸಂಭವವಿದೆ, ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್. ಪಕ್ಷ ವಿಚಾರವನ್ನು ಮಾತನಾಡಲು ಪಕ್ಷದ ಮುಖಂಡರ ಸಭೆ ಕರೆದಿಲ್ಲ. ಎಲ್ಲಾ ವಿಚಾರವನ್ನು ಏಕ ಪಕ್ಷಿಯವಾಗಿ ನಿರ್ವಹಿಸುತ್ತಿದ್ದಾರೆ. ಹಾಸನಾಂಬೆ ಉತ್ಸವದಲ್ಲಿ ಇವರ ಕಾರ್ಯವೈಖರಿ ಕೇವಲ ಶಿವರಾಮ್ ಒಬ್ಬರಿಗಲ್ಲ ಜಿಲ್ಲೆಯ ಆರು ವಿಧಾನಕ್ಷೇತ್ರಕ್ಕೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಬೇಲೂರು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡರು ಹಾಸನಾಂಬೆ ಉತ್ಸವ ಸೇರಿದಂತೆ ಪಕ್ಷದ ಸಂಘಟನೆಯ ವಿಚಾರಲ್ಲಿ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ಅಪಮಾನ ಮಾಡುತ್ತಿದ್ದು, ತಮ್ಮ ಮಾತೃ ಪಕ್ಷ. ಜೆಡಿಎಸ್ ನಂತ ತಾರತಮ್ಯ ಧೋರಣೆಯನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಸಚಿವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶರತ್ ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಸನಾಂಬೆ ಜಾತ್ರೆಗೆ ಬಂದಿದ್ದ ರಾಜ್ಯದ ಮುಖ್ಯ ಮಂತ್ರಿಗಳ ಸ್ವಾಗತಕ್ಕೆ ಮಾಜಿ ಶಾಸಕರು ಮುಖಂಡರನ್ನು ಪರಿಗಣಿಸದೆ ಎಲ್ಲದಕ್ಕೂ ಉಸ್ತುವಾರಿಗಳೇ ನೋಡಿಕೊಳ್ಳುವುದಾದರೆ ಮೂಲ ಕಾಂಗ್ರೆಸ್ಸಿಗರು ಎಲ್ಲಿಗೆ ಹೋಗಬೇಕು, ಸಚಿವರು ಜೆಡಿಎಸ್ ತತ್ವ ಸಿದ್ಧಾಂತದಲ್ಲೇ ಆಡಳಿತ ನಡೆಸುತ್ತಿದ್ದಾರೆ, ಯಾರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಕೇಳಿದರೆ ಪ್ರೋಟೋಕಾಲ್ ಎಂದು ಜಿಲ್ಲಾಧಿಕಾರಿಗಳಿಂದ ಹೇಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.ಬಿ. ಶಿವರಾಮ್ ಅವರು ನಾಲ್ಕು ಬಾರಿ ಶಾಸಕರಾಗಿ ಒಮ್ಮೆ ಸಚಿವರಾಗಿ ಕಾರ್ಯನಿರ್ವಾಹಿಸಿದ್ದಾರೆ, ಅಲ್ಲದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಶ್ರಮಿಸಿದ್ದಾರೆ ಅಂತವರನ್ನು ಉಸ್ತುವಾರಿಗಳು ಅಪಮಾನ ಮಾಡಿರುವುದು ಖಂಡನಿಯ, ಇವರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಗತವಾಗುವ ಸಂಭವವಿದೆ, ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್. ಪಕ್ಷ ವಿಚಾರವನ್ನು ಮಾತನಾಡಲು ಪಕ್ಷದ ಮುಖಂಡರ ಸಭೆ ಕರೆದಿಲ್ಲ. ಎಲ್ಲಾ ವುಚಾರವನ್ನು ಏಕ ಪಕ್ಷಿಯವಾಗಿ ನಿರ್ವಹಿಸುತ್ತಿದ್ದಾರೆ. ಹಾಸನಾಂಬೆ ಉತ್ಸವದಲ್ಲಿ ಇವರ ಕಾರ್ಯವೈಖರಿ ಕೇವಲ ಶಿವರಾಮ್ ಒಬ್ಬರಿಗಲ್ಲ ಜಿಲ್ಲೆಯ ಆರು ವಿಧಾನಕ್ಷೇತ್ರಕ್ಕೆ ಅಪಮಾನ ಮಾಡಿದ್ದಾರೆ. ಮಾಜಿ ಶಾಸಕರು ವಿಧಾನ ಪರಿಷತ್ ಸದಸ್ಯರು, ಮುಖಂಡರನ್ನು ಗಣನೆಗೆ ತೆಗೆದುಕೊಂಡಿಲ್ಲ. ಕೇವಲ ಜಿಲ್ಲಾಧಿಕಾರಿ ಜೊತೆ ಮಾತುಕತೆ ಮಾಡಿಕೊಂಡು ಆಡಳಿತ ನಡೆಸುತ್ತಿದ್ದಾರೆ, ಮುಖ್ಯಮಂತ್ರಿಗಳ ಸ್ವಾಗತಕ್ಕೆ ಸೌಜನ್ಯಕ್ಕೂ ಎಲ್ಲರನ್ನು ಕರೆಯಬೇಕಿತ್ತು, ಜಿಲ್ಲಾ ಮಂತ್ರಿಗಳು ಎಲ್ಲರನ್ನು ಒಟ್ಟು ಗೂಡಿಸುವ ಕೆಲಸ ಮಾಡಬೇಕು, ಅದನ್ನು ಮರೆತಿದ್ದು, ಜೆಡಿಎಸ್ ಪಕ್ಷದ ನಿಲುವನ್ನು ಇಲ್ಲಿ ಪಾಲಿಸುತ್ತಿದ್ದು ಇಂತವರಿಂದ ಜಿಲ್ಲೆಯಲ್ಲಿ ಪಕ್ಷ ಬೆಳವಣಿಗೆ ಕಾಣಲು ಸಾಧ್ಯವಿಲ್ಲ, ಮುಂದೆ ಇದೆ ದೋರಣೆ ಕಂಡುಬಂದರೆ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾ ಮಾಧ್ಯಮ ವಕ್ತಾರ ರಾಕೇಶ್ ಮಾತನಾಡಿ ಈ ಬಾರಿ ಹಾಸನಾಂಬೆ ಜಾತ್ರೆ ಒಂದರ ಹಿಂದೆ ಒಂದು ಲೋಪ ಕಂಡು ಬರುತ್ತಿದೆ, ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಕೃಷ್ಣ ಬೈರೇಗೌಡ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು ಎಲ್ಲರನ್ನು ಪರಿಗಣಿಸುತ್ತಿದ್ದರು, ಸಭೆಗಳನ್ನು ಕರೆದು ಪ್ರೋಟೋಕಾಲ್ ನಿಯಮದಂತೆ ನಡೆದುಕೊಂಡಿದ್ದರು. ಆದರೆ ಶಿವಲಿಂಗೇಗೌಡರು ಮೂಲ ಕಾಂಗ್ರೆಸ್ಸಿಗರಲ್ಲ, ಇವರಿಗೆ ಕಾಂಗ್ರೆಸ್ ಪಕ್ದದ ತತ್ವ ಸಿದ್ಧಾಂತಗಳನ್ನು ಆ ರೀತಿಲ್ಲ, ತಮ್ಮ ಮೂಲ ಪಕ್ಷ ಜೆಡಿಎಸ್ ಪಕ್ಷದ ಗುಂಗಿನಲ್ಲೇ ಇರುವುದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಿನಾಯ ಸ್ಥಿತಿ ತಲುಪುವುದರಲ್ಲಿ ಸಂಶಯವಿಲ್ಲ. ಹೈಕಮಾಂಡ್ ಮಧ್ಯ ಪ್ರವೇಶಿಸಿ ಉಸ್ತುವಾರಿಗಳ ನಡುವಳಿಕೆ ಸರಿಪಡಿಸಿಕೊಳ್ಳಲು ಸೂಚಿಸಬೇಕು, ಉಸ್ತುವಾರಿಗಳು ನಡೆದುಕೊಂಡಿರುವ ಬಗ್ಗೆ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯುತ್ತವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಭಾರತ್ ಜೋಡೋ ತಾಲೂಕು ಅಧ್ಯಕ್ಷ ಜಗದೀಶ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ