ಕನ್ನಡಪ್ರಭ ವಾರ್ತೆ ಯಾದಗಿರಿ
''''''''ಕೃಷಿ, ಕೃತಕ ಬುದ್ಧಿಮತ್ತೆ ಹಾಗೂ ಮಹಿಳಾ ಸಬಲೀಕರಣದ ಕುರಿತು ಹಲವು ಪರಿಹಾರ ಸೂತ್ರಗಳನ್ನು ಪ್ರಸ್ತುತಪಡಿಸಲಾಯಿತು. ಆತ್ಮವಿಶ್ವಾಸ, ಸಮರ್ಪಣೆಯಿಂದ ಮತ್ತು ಚೈತನ್ಯವನ್ನೊಳಗೊಂಡ ಯುವ ಮನಸ್ಸುಗಳೊಂದಿಗೆ ಸಂವಾದ ನಡೆಸಿದ್ದು ಅತ್ಯಂತ ಸಂತಸವನ್ನುಂಟುಮಾಡಿದೆ'''''''' ಎಂದು ಕೇಂದ್ರ ಸಚಿವರು ಹೇಳಿದರು. ಸಂವಾದ ಕಾರ್ಯಕ್ರಮದಲ್ಲಿ ಮುದ್ನಾಳ್ ದೊಡ್ಡ ತಾಂಡಾದ ಬಂಜಾರ ಯುವತಿಯರು ಭಾಗವಹಿಸಿ ಸಾಂಪ್ರದಾಯಿಕ ಬಂಜಾರ ನೃತ್ಯ ಪ್ರದರ್ಶನ ಮಾಡಿದರು. ಕೇಂದ್ರ ಸಚಿವರು ಯುವತಿಯರಿಗೆ ನೆನಪಿನ ಕಾಣಿಕೆ ಕೊಟ್ಟು, ಅವರ ಜೊತೆಯಲ್ಲಿ ಬೆಳಗಿನ ಉಪಹಾರ ಸವಿದರು.
ಬಂಜಾರ ಜನಪದ ನೃತ್ಯ ತಂಡದ ಸದಸ್ಯರಾದ ಕಾವೇರಿ, ಸವಿತಾ ಆರ್. ಕರಿಷ್ಮಾ, ವಿಜಯಾಬಾಯಿ, ರೋಷನಿ, ಮೇನಕಾ, ಪ್ರಿಯಾಂಕಾ, ಬೇಬಿ, ಪುನಿಬಾಯಿ, ಸವಿತಾ ಎ. ರಾಠೋಡ, ತಂಡದ ವ್ಯವಸ್ಥಾಪಕ ಆನಂದ ಎಸ್. ರಾಠೋಡ ಇದ್ದರು.-
21ವೈಡಿಆರ್10 : ದೆಹಲಿಯಲ್ಲಿ ಕೇಂದ್ರ ಸರ್ಕಾರದ ರೈಲ್ವೆ ಮುತ್ತು ಜಲ ಶಕ್ತಿ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರು. ತಮ್ಮ ಗೃಹ ಕಚೇರಿಯಲ್ಲಿ ಆಯೋಜಿಸಿದ ವಿಕಸ್ ಭಾರತ್ ಯುವ ನಾಯಕ 2026 ಸಂವಾದ ಕಾರ್ಯಕ್ರಮದಲ್ಲಿ ಯರಗೋಳ ವ್ಯಾಪ್ತಿಯ ಮುದ್ನಾಳ್ ದೊಡ್ಡ ತಾಂಡದ ಬಂಜಾರ ನೃತ್ಯ ತಂಡದ ಸದಸ್ಯರ ಸಂವಾದ ನಡೆಸಿದರು.