ಧಾರವಾಡ: ಇಲ್ಲಿಯ ಬಾರಾಕೊಟ್ರಿಯ ಶಾಸಕ ವಿನಯ ಕುಲಕರ್ಣಿ ನಿವಾಸಕ್ಕೆ ಭಾನುವಾರ ಸಂಜೆ ವಕ್ಫ್ ಸಚಿವ ಜಮೀರ್ ಅಹಮದ್ ಭೇಟಿ ನೀಡಿ ವಿನಯ ಕುಟುಂಬದ ಸದಸ್ಯರ ಕುಶಲೋಪಚಾರ ವಿಚಾರಿಸಿದರು.
ಇದಾದ ನಂತರ ಸಚಿವ ಜಮೀರ್ ಅಹಮದ್ ಅವರಿಗೆ ನಗರದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಅಂಜುಮನ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕ ಕಾಲೇಜು ವೃತ್ತದಿಂದ ಅಂಜುಮನ್ ವರೆಗೆ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿಯೇ ಬಂದ ಸಚಿವರಿಗೆ ಪ್ರವೇಶದ್ವಾರದಲ್ಲಿ ಮುಗಿಬಿದ್ದು ಹಾರ ಹಾಕಿ, ಕೈ ಕುಲುಕಿ ಸ್ವಾಗತ ಮಾಡಿಕೊಂಡರು. ಈ ವೇಳೆ ಅವರ ಅಭಿಮಾನಿಗಳಿಂದ ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಸ್ವಾಗತಿಸಲಾಯಿತು.