ಮೊರಾರ್ಜಿ ದೇಸಾಯಿ ವಸತಿ ಶಾಲೆ ಲೋಕಾರ್ಪಣೆ

KannadaprabhaNewsNetwork |  
Published : Jul 12, 2024, 01:33 AM IST
69 | Kannada Prabha

ಸಾರಾಂಶ

ವಸತಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಿದರೆ ಅವರಿಗೆ 10 ಸಾವಿರ ವೈಯಕ್ತಿಕವಾಗಿ ನೀಡಲಾಗುವುದೆಂದು

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿ ಅನಿವಾಳು ಗ್ರಾಮದಲ್ಲಿ 10 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜು ಕಟ್ಟಡವನ್ನು ರಾಜ್ಯ ಅಲ್ಪಸಂಖ್ಯಾತ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಗುರುವಾರ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ನಮ್ಮ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ ಇಲಾಖೆಗೆ ಸುಮಾರು 3,500 ಕೋಟಿ ರು. ಅನುದಾನ ನೀಡುತ್ತಿದ್ದು, ಅಲ್ಪಸಂಖ್ಯಾತರ ಶಿಕ್ಷಣಕ್ಕಾಗಿ ಸುಮಾರು ಒಂದು ಸಾವಿರ ಕೋಟಿ ರು. ಮೀಸಲಿಟ್ಟಿದ್ದು, ರಾಜ್ಯಾದ್ಯಂತ 50 ವಸತಿ ಶಾಲೆಗಳನ್ನು ಈ ವರ್ಷ ತೆರೆಯಲಾಗುವುದು, ರಾಜ್ಯದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶೇ. 99 ಅಂಕಗಳಿಸಿದರೆ ಅವರಿಗೆ ನನ್ನ ವಯಕ್ತಿಕವಾಗಿ ಅವರ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಅಲ್ಲದೆ ವಸತಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಿದರೆ ಅವರಿಗೆ 10 ಸಾವಿರ ವೈಯಕ್ತಿಕವಾಗಿ ನೀಡಲಾಗುವುದೆಂದು ಅವರು ಹೇಳಿದರು.

ಬೆಟ್ಟದಪುರದ ವಸತಿ ಶಾಲೆಯಲ್ಲಿ ಸುಮಾರು ಆರು ಮಕ್ಕಳು ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಸನ್ಮಾನ ಹಾಗೂ ವೈಯಕ್ತಿಕವಾಗಿ 10 ಸಾವಿರ ರು. ಗಳನ್ನು ಸಚಿವರು ವಿತರಿಸಿದರು. ಅಲ್ಲದೆ ಅಲ್ಪಸಂಖ್ಯಾತರ 400 ಮಕ್ಕಳನ್ನು ಐಎಎಸ್ ಮತ್ತು ಐಪಿಎಸ್ ತರಬೇತಿ ನೀಡಲಾಗುತ್ತಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸರ್ಕಾರಿ ದಿಂದ ಸಹಾಯ ನೀಡಲಾಗುವುದೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪಶು ಸಂಗೋಪನೆ, ರೇಷ್ಮೆ ಸಚಿವ ಕೆ. ವೆಂಕಟೇಶ್

ಮಾತನಾಡಿ, ನಮ್ಮ ತಾಲೂಕಿನಲ್ಲಿ ಇಂತಹ ವಸತಿ ಶಾಲೆಗಳನ್ನು ಹೆಚ್ಚಿನ ರೀತಿಯಲ್ಲಿ ಕಟ್ಟಡಗಳನ್ನು ತೆರೆದು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ಮಾಡಲಾಗುವುದು. ಅಲ್ಲದೆ ಇಂದು ಉದ್ಘಾಟನೆ ಕಟ್ಟಡಕ್ಕೆ ಸುಮಾರು ಇನ್ನು 23 ಕೋಟಿ ರು. ಸಹಾಯಧನವನ್ನು ಸರ್ಕಾರದಿಂದ ತಂದು ಇನ್ನು ಹೆಚ್ಚಿನ ರೀತಿಯಲ್ಲಿ ಇದನ್ನು ರಾಜ್ಯಮಟ್ಟದ ಸತಿ ಶಾಲೆಯನ್ನಾಗಿ ಮಾಡಲಾಗುವುದೆಂದು ತಿಳಿಸಿದರು.

ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ಸ್ವಾಮಿಗೌಡ, ರಹಮದ್ ಜಾನ್ ಬಾಬು, ಗ್ರಾಪಂ ಅಧ್ಯಕ್ಷ ಕಾಮಾಕ್ಷಮ್ಮ, ಹಲಗನಹಳ್ಳಿ ಗ್ರಾಪಂ ಅಧ್ಯಕ್ಷ ಕೆ.ವಿ. ವೀಣಾ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾ ಣ ಜಿಲ್ಲಾಧಿಕಾರಿ ಮಾರ್ಕಂಡಯ್ಯ, ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳಾದ ಸ್ವಾಮಿ, ಕೆ.ಎನ್. ರಾಜು, ತಹಸೀಲ್ದಾರ್ ಕುಂಇ ಅಹಮದ್, ತಾಲೂಕು ಕಾರ್ಯನಿರ್ವಕ ಅಧಿಕಾರಿ ಸುನಿಲ್ ಕುಮಾರ್ ಹಾಗೂ ಅನಿವಾಳು ಗ್ರಾಮಸ್ಥರು ಹರದೂರು ಗ್ರಾಮಸ್ಥರು, ಹರಿನಹಳ್ಳಿ ಗ್ರಾಮಸ್ಥರು ಇದ್ದರು.

---------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ