)
ದೊಂಬಿ, ಗಲಾಟೆ ಹಾಗೂ ಅಟ್ರಾಸಿಟಿ ಕೇಸ್
ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನು ಬಂಧಿಸಲಾಗಿದ್ದು, ಉಳಿದವರಿಗೆ ಶೋಧ ಮುಂದುವರಿದಿದೆ. ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಶಾಲೆ ಮುಗಿಸಿಕೊಂಡು ದಲಿತ ಯುವಕ ನೊಂದಿಗೆ ಮುಸ್ಲಿಂ ಯುವತಿ ನಗರದ ಸಂತೆ ಮೈದಾನದ ಬಳಿ ಬೈಕ್‌ನಲ್ಲಿ ಹೋಗುವಾಗ ಇಬ್ಬರು ಮುಸ್ಲಿಂ ಯುವಕರು ಅಡ್ಡಗಟ್ಟೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಸುಮಾರು ಎಂಟು ಮಂದಿ ಮುಸ್ಲಿಂ ಯುವಕ ಗುಂಪು ಯುವಕ, ಯುವತಿಯ ಬಳಿ ಪ್ರಶ್ನಿಸುವುದಕ್ಕೆ ಆರಂಭಿಸಿದ್ದಾರೆ. ಈ ವೇಳೆ ಮುಸ್ಲಿಂ ಯುವತಿ ಭಯಭೀತಿಗೊಂಡು ಅಲ್ಲಿಂದ ತೆರಳಿದ್ದಾಳೆ. ಈ ವೇಳೆ ಮುಸ್ಲಿಂ ಯುವತಿಯೊಂದಿಗೆ ಇರುವುದಕ್ಕೆ ಮುಸ್ಲಿಂ ಯುವಕರ ಗುಂಪು ದಲಿತ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿ ಮೇಲೆ ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ.ಮುಸ್ಲಿಂ ಯುವತಿ ಹಾಗೂ ದಲಿತ ಯುವಕ ಎರಡೂ ಕುಟುಂಬಸ್ಥರು ಪರಸ್ಪರ ಪರಿಚಿತರು, ಯುವಕ, ಯುವತಿ ಸ್ನೇಹಿತರಾಗಿದ್ದು, ಇನ್ನೂ ಅಪ್ರಾಪ್ತರಾಗಿದ್ದಾರೆ.ದೊಂಬಿ, ಗಲಾಟೆ ಹಾಗೂ ಅಟ್ರಾಸಿಟಿ ಕೇಸ್ಘಟನೆಗೆ ಸಂಬಂಧಿಸಿದಂತೆ ಒಟ್ಟು ಎಂಟು ಮಂದಿ ವಿರುದ್ಧ ವಿವಿಧ ಸೆಕ್ಸನ್ ಅಡಿ ಪ್ರಕರಣ ದಾಖಲಿಸಲಾಗಿದೆ. ದೂರು ಕೇಳಿ ಬರುತ್ತಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ವರಿಷ್ಠಾಧಿಕಾರಿ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದರು.---ಬಾಕ್---ದಲಿತ ಯುವಕನ ತಾಯಿ ಮೇಲೆ ಮುಗಿದಿದ್ದ ಮುಸ್ಲಿಂ ಗುಂಪು
---ಬಾಕ್ಸ್---
ಆ ಹುಡುಗಿ ನಮಗೆ ಗೊತ್ತಿರುವ ಹುಡುಗಿಯಾಗಿದ್ದು, ನಮ್ಮ ಮನೆಗೆ ಬರುತ್ತಿದ್ದಳು. ಹುಷಾರಿಲ್ಲ ಎಂದಿದ್ದಕ್ಕೆ ಆಕೆಯನ್ನ ಮನೆಗೆ ಬಿಡಲು ನಮ್ಮ ಮಗ ಹೋಗಿದ್ದನ್ನು. ಆಗ ರಸ್ತೆ ಮಧ್ಯೆ 30 ಜನ ಅಡ್ಡ ಹಾಕಿ ಪ್ರಶ್ನೆ ಮಾಡುತ್ತಿದ್ದರು. ರಸ್ತೆಯಲ್ಲಿ ಬೇಡ ಅಂತ ನಾನೇ ಮಾತನಾಡೋದಕ್ಕೆ ಮನೆಗೆ ಕರೆತಂದೆ. ಆಗ ಮನೆ ಬಳಿ 60 ಜನ ಹುಡುಗರು ಬಂದಿದ್ದರು. ಅವರಲ್ಲಿ 2-3 ಜನ ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದರು. ಹಿಂದೂ ಹುಡುಗ, ಮುಸ್ಲಿಂ ಹುಡುಗಿಯನ್ನು ಬೈಕಿನಲ್ಲಿ ಡ್ರಾಪ್ ಮಾಡಿದ್ದೆ ಇಷ್ಟಕ್ಕೆಲ್ಲಾ ಕಾರಣ. ಹುಡುಗ ಹಾಗೂ ಹುಡುಗಿ ಇಬ್ಬರದು ತಪ್ಪಿಲ್ಲ. ಆದರೆ, ಮಧ್ಯದಲ್ಲಿ ಇರುವವರು ಸಣ್ಣದನ್ನು ದೊಡ್ಡದ್ದು ಮಾಡುತ್ತಿದ್ದಾರೆ ಎಂದು ದಲಿತ ಯುವಕನ ತಾಯಿ ಪಲ್ಲವಿ ವಿವರಿಸಿದ್ದಾರೆ.-- ಬಾಕ್ಸ್...
ನಗರದಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದರೆ ಸಹಿಸಲ್ಲ. ತಲೆ ಮರೆಸಿಕೊಂಡವರನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.
ರಾತ್ರಿ, ಹಗಲು 2 ಪಾಳಿಯಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ರಂಜಾನ್ ಇರುವುದರಿಂದ ಸಂಪೂರ್ಣ ಭದ್ರತೆ ಮಾಡಲಾಗಿದೆ. ಯಾವುದೇ ನೈತಿಕ ಪೊಲೀಸ್ ಗಿರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.