ಅಲ್ಪಸಂಖ್ಯಾತರು ನಿಮ್ಮ ಸಮಸ್ಯೆಗಳನ್ನು ಜಿಲ್ಲಾ ಮುಖಂಡರಲ್ಲಿ ಹೇಳಿಕೊಳ್ಳಿ

KannadaprabhaNewsNetwork |  
Published : Sep 16, 2024, 01:52 AM IST
15ಕೆಜಿಎಲ್81ಕೊಳ್ಳೇಗಾಲದಲ್ಲಿ ಅಯೋಜಿಸಿದ್ದ ಅಲ್ಪಸಂಖ್ಯಾತ ವಿಭಾಗದ ಅದ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಶಾಸಕ ಕೃಷ್ಣಮೂತಿ೯ ಶುಭಕೋರಿ ಅಧಿಕಾರ ಹಸ್ತಾಂತರಿಸಿದರು ಶಾಂತರಾಜು, ಅನ್ಸರ್,  ಜಿ ಎನ್ ನಂಜುಂಡಸ್ವಾಮಿ ಇನ್ನಿತರಿದ್ದರು. | Kannada Prabha

ಸಾರಾಂಶ

ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಶಾಸಕ ಕೃಷ್ಣಮೂರ್ತಿ ಶುಭಕೋರಿ ಅಧಿಕಾರ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಅಲ್ಪಸಂಖ್ಯಾತರು ತಮ್ಮ ಸಮಸ್ಯೆಗಳನ್ನು ಪಕ್ಷದ ಜಿಲ್ಲಾ ಹಂತದ ಮುಖಂಡರ ಬಳಿ ಹೇಳಿಕೊಳ್ಳುವ ಜೊತೆಗೆ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು, ಜೊತೆಗೆ ಕಾಂಗ್ರೆಸ್ ಪಕ್ಷ ಹೆಚ್ಚಿನ ರೀತಿ ಸದೃಢಗೊಳಿಸಲು ಪಣ ತೊಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಹೊರವಲಯದ ಆರ್.ಎಂ.ಚೌಟ್ರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾಂತರ ವಿಭಾಗದ ನೂತನ ಬ್ಲಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಮುಸ್ಲಿಂ ಸಮಾಜ ಬೆಂಬಲಿಸುವ ಜೊತೆಗೆ ಪಕ್ಷವನ್ನು ತಳಹಂತದಿಂದ ಸಂಘಟಿಸಬೇಕು. ಮನ್ಸೂರ್ ಯುವಕನಾಗಿದ್ದು, ಆತ ಪಕ್ಷ ಸಂಘಟನೆ ಮಾಡುವಲ್ಲಿ ಅನುಮಾನವೇ ಇಲ್ಲ. ಅಲ್ಪಸಂಖ್ಯಾತರ ಮುಖಂಡರನ್ನು ಒಳಗೊಂಡು ಪಕ್ಷ ಸಂಘಟನೆ ಮಾಡುವುದರ ಜೊತೆಗೆ ಹೆಚ್ಚಿನ ಕೆಲಸ, ಕಾರ್ಯಗಳನ್ನು ಮಾಡುವ ಭರವಸೆ ನನಗಿದೆ ಎಂದರು.

ಈ ವೇಳೆ ಶಾಸಕರು ಅಲ್ಪಸಂಖ್ಯಾಂತರ ವಿಭಾಗ ಬ್ಲಾಕ್ ನೂತನ ಅಧ್ಯಕ್ಷ ಮನ್ಸೂರ್ ಪಾಷ ಹಾಗೂ ಉಪಾಧ್ಯಕ್ಷ ಮೊಹಮ್ಮದ್ ಇಂದಾದ್ ಉಲ್ಲಾ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭಕೋರಿದರು.

ಇದೇ ವೇಳೆ ಹಿರಿಯ ಕಾಂಗ್ರೆಸ್ ಮುಖಂಡ ರಫೀಕ್ ಮಾತನಾಡಿ, ಕೊಳ್ಳೇಗಾಲ ಭಾಗದ ಮುಸ್ಲಿಂ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಮಾನನೀಡಬೇಕು, 2 ದಶಕಗಳ ಹಿಂದೆ ಅಕ್ಮಲ್ ಪಾಶಾ ಅವರಿಗೆ ನಗರಸಭೆ ನಾಮನಿರ್ದೇಶನ ಸ್ಥಾನ ನೀಡಿದ ಬಳಿಕ ಅಂತಹ ಸೂಕ್ತ ಸ್ಥಾನಮಾನ ಸಮಾಜಕ್ಕೆ ದೊರೆತಿಲ್ಲ. ಈ ನಿಟ್ಟಿನ್ಲಲಿ ಶಾಸಕರು ಗಮನಹರಿಸಬೇಕು ಎಂದರು. ಈ ಸಂಧರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಅಲ್ಪಸಂಖ್ಯಾಂತರ ಜಿಲ್ಲಾಧ್ಯಕ್ಷ ಅಬ್ದುಲ್ ಷರೀಪ್, ರಫೀಕ್ ಅಹಮ್ಮದ್, ಮುಸ್ಲಿಂ ಗುರುಗಳು ಅಬ್ದುಲ್ ತವಾಬ್, ನಗರಸಭೆ ಅಧ್ಯಕ್ಷೆ ರೇಖಾ, ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು, ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ನಗರಸಭೆ ಮಾಜಿ ಉಪಾಧ್ಯಕ್ಷ ಅಕ್ಮಲ್ ಪಾಶಾ, ಪೈರೋಜ್, ಫಯಾಜ್, ಯುವ ಮುಖಂಡ ಅನ್ಸರ್ ಇನ್ನಿತರರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌