ಅಪ್ರಾಪ್ತರು ವಾಹನ ಚಾಲನೆಯಿಂದ ಸಂಕಷ್ಟ

KannadaprabhaNewsNetwork |  
Published : Aug 22, 2026, 02:45 AM IST
ಹಳ್ಳಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಅಪ್ರಾಪ್ತರು ವಾಹನಗಳನ್ನು ಓಡಿಸುವುದು ಅಪರಾಧವಾಗಿದ್ದು, ಇದರಿಂದ ಹೆತ್ತವರು ಸಂಕಷ್ಟಕ್ಕೀಡಾಗುತ್ತಾರೆ. ಆದ್ದರಿಂದ ಪ್ರಾಪ್ತರಾಗುವವರಿಗೆ ಯಾರೂ ವಾಹನ ಓಡಿಸುವ ದುಸ್ಸಾಹಸಕ್ಕೆ ಇಳಿಯದಂತೆ ಪಿಎಸ್ಐ ಶಾಂತಾ ಹಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಅಪ್ರಾಪ್ತರು ವಾಹನಗಳನ್ನು ಓಡಿಸುವುದು ಅಪರಾಧವಾಗಿದ್ದು, ಇದರಿಂದ ಹೆತ್ತವರು ಸಂಕಷ್ಟಕ್ಕೀಡಾಗುತ್ತಾರೆ. ಆದ್ದರಿಂದ ಪ್ರಾಪ್ತರಾಗುವವರಿಗೆ ಯಾರೂ ವಾಹನ ಓಡಿಸುವ ದುಸ್ಸಾಹಸಕ್ಕೆ ಇಳಿಯದಂತೆ ಪಿಎಸ್ಐ ಶಾಂತಾ ಹಳ್ಳಿ ಹೇಳಿದರು.ಇಲಾಖೆಯ ಆದೇಶದಂತೆ ತೆರೆದ ಬಾಗಿಲು ಕಾರ್ಯಕ್ರಮದಡಿಯಲ್ಲಿ ಸ್ಥಳೀಯ ಠಾಣೆಗೆ ಭೇಟಿ ನೀಡಿದ ಜೆಸಿ ಆಂಗ್ಲ ಶಾಲೆಯ ವಿದ್ಯಾರ್ಥಿಗಳಿಗೆ ಕಾನೂನುಗಳ ಬಗ್ಗೆ ಮಾಹಿತಿ ನೀಡಿದ ಅವರು, ಫೋಕ್ಸೋ ಕಾಯ್ದೆಯಡಿಯಲ್ಲಿ ಮಕ್ಕಳ ರಕ್ಷಣೆಗೆ ಇಲಾಖೆ ಕಂಕಣ ಬದ್ಧವಾಗಿದೆ. ನಿಮಗೆ ಯಾವುದೇ ಸಮಸ್ಯೆಗಳು ಎದುರಾದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಹಾಗೂ ಬಾಲ್ಯ ವಿವಾಹಗಳನ್ನು ತಪ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಸಂಕಲ್ಪ ಮಾಡಬೇಕು. ಸುತ್ತಮುತ್ತ ಬಾಲ್ಯ ವಿವಾಹಗಳು ನಡೆಯುತ್ತಿರುವ ಮಾಹಿತಿ ಸಿಕ್ಕರೆ ಧೈರ್ಯವಾಗಿ ೧೦೯೮, ೧೧೨ ಸಹಾಯವಾಣಿಗಳ ಮೂಲಕ ಮಾಹಿತಿ ನೀಡಿ, ಮಾಹಿತಿ ನೀಡಿದವರ ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ ಎಂದರು.

ಹೆಡ್ ಕಾನ್ಸಟೇಬಲ್‌ ಬಸವರಾಜ ಮುದಿಬಸನಗೌಡರ ಬಂದೂಕಿನ ಭಾಗಗಳು, ಗುಂಡು ಲೋಡ್ ಮಾಡುವುದು ಮತ್ತು ಅದನ್ನು ಉಪಯೋಗಿಸುವುದನ್ನು ಪ್ರಾಯೋಗಿಕವಾಗಿ ತಿಳಿಸಿದರು. ಪೊಲೀಸರು ಬಂದೂಕು ಬಳಸಬಹುದಾದ ಸಂದರ್ಭ ಮತ್ತು ನಿಯಮಗಳನ್ನು ವಿವರಿಸಿದರು.

ಕಾನ್ಸಟೇಬಲ್‌ ಬಸವರಾಜ ದೇಸಾಯಿ ಠಾಣೆಯ ಕಾರ್ಯವೈಖರಿಗಳನ್ನು ಮತ್ತು ಜವಾಬ್ದಾರಿಗಳನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ವಿವರಿಸಿದರು.

ಸಿಪಿಐ ಆರ್.ಆರ್.ಪಾಟೀಲ, ಹೆಡ್ ಕಾನ್ಸಟೇಬಲ್‌ ತಳವಾರ, ಕಾನ್ಸಟೇಬಲ್‌ಗಳಾದ ಆಶಾ ಪಾಟೀಲ, ಹನುಮಂತ ಪಾಟೀಲ, ಶಿಕ್ಷಕರಾದ ನಾರನಗೌಡ ಉತ್ತಂಗಿ, ಎಸ್.ಬಿ.ಮಠಗಾರ, ಎಂ.ಎಂ.ಲೋಕುರಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಕಾಶಪ್ಪಾ, ಟೈಂ ಇದ್ರೆ ನಮ್ಮೂರಿಗೆ ಬಂದು ಹೋಗ್ತೀಯೇನಪ್ಪಾ..
ಡಿಸಿ ಕಚೇರಿಗೆ ನುಗ್ಗಲು ಬಿಜೆಪಿ ವಿಫಲ ಯತ್ನ